Viral Video: ಓಹ್ ವಾವ್! ಮೊದಲ ಬಾರಿ ರೈಲು ನೋಡಿ ಮಗುವಿನ ಪ್ರತಿಕ್ರಿಯೆ ಹೀಗಿತ್ತು
ಜೀವನದಲ್ಲಿ ಮೊದಲ ಬಾರಿಗೆ ಯಾವುದೇ ಹೊಸದನ್ನು ನೋಡಿದಾಗ ಪ್ರತಿಯೊಬ್ಬರೂ ಅದನ್ನು ನೋಡಿ ಆಶ್ಚರ್ಯಪಡುತ್ತಾರೆ. ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಮೊದಲ ಬಾರಿಗೆ ರೈಲನ್ನು ನೋಡಿದ ಪುಟ್ಟ ಬಾಲಕಿಯೊಬ್ಬಳು ತನ್ನ ಸಂತಸ ಮತ್ತು ಉತ್ಸಾಹವನ್ನು ವ್ಯಕ್ತಪಡಿಸುವ ಸುಂದರ ದೃಶ್ಯವನ್ನು ಕಾಣಬಹುದು. ಈ ಮುದ್ದಾದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರ ಹೃದಯವನ್ನು ಗೆದ್ದಿದೆ.
ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಹೊಸ ವಿಷಯಗಳನ್ನು ನೋಡಿದಾಗ, ಪ್ರತಿಯೊಬ್ಬರೂ ಅದನ್ನು ನೋಡಿ ಆಶ್ಚರ್ಯಪಡುತ್ತಾರೆ. ಅದರಲ್ಲೂ ಹೊಸ ವಿಷಯಗಳನ್ನು ಕಲಿಯುವ ಮತ್ತು ಅವುಗಳನ್ನು ಮೊದಲ ಬಾರಿಗೆ ನೋಡುವ ಪುಟ್ಟ ಮಕ್ಕಳ ಅನುಭವವು ವಿಭಿನ್ನವಾಗಿರುತ್ತದೆ. ಪುಟ್ಟ ಮಕ್ಕಳ ಕುರಿತ ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ಪುಟ್ಟ ಬಾಲಕಿಯೊಬ್ಬಳು ಮೊದಲ ಬಾರಿಗೆ ರೈಲನ್ನು ಕಂಡು ಖುಷಿಯಿಂದ ಆಶ್ಚರ್ಯಪಟ್ಟಿದ್ದು ಮಾತ್ರವಲ್ಲದೆ, ನಿಷ್ಕಲ್ಮಶ ಮನಸ್ಸಿನಿಂದ ಆ ಕ್ಷಣವನ್ನು ಆನಂದಿಸಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಬಾಲಕಿಯ ಮುಗ್ಧತೆಗೆ ನೆಟ್ಟಿಗರು ಮನಸೋತಿದ್ದಾರೆ.
@TheFigen_ ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ʼಮೊದಲ ಬಾರಿಗೆ ರೈಲನ್ನು ಕಂಡಾಗ ಆ ಪುಟ್ಟ ಬಾಲಕಿಯ ಪ್ರತಿಕ್ರಿಯೆ ಹೇಗಿತ್ತು ನೋಡಿʼ ಎಂಬ ಶೀರ್ಷಿಕೆಯನ್ನು ಸಹ ಬರೆದುಕೊಳ್ಳಲಾಗಿದೆ. ವಿಡಿಯೋದಲ್ಲಿ ಮುದ್ದಾದ ಪುಟ್ಟ ಹುಡುಗಿಯೊಬ್ಬಳು ತನ್ನ ಜೀವನದಲ್ಲಿ ಮೊದಲ ಬಾರಿಗೆ ರೈಲು ಸವಾರಿ ಮಾಡಲು ಉತ್ಸುಹಕಳಾಗಿರುವ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:
This baby girl sees a train for the first time.pic.twitter.com/HYCqzwXauV
— Figen (@TheFigen_) December 25, 2023
43 ಸೆಕೆಂಡುಗಳ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಟ್ರೈನ್ ಟ್ರೈನ್ ಎನ್ನುತ್ತಾ ಬಹಳ ಉತ್ಸಾಹದಿಂದ ಮೊದಲ ಬಾರಿಗೆ ರೈಲನ್ನು ಕಂಡು ಸಂತೋಷಪಡುತ್ತಿರುವ ಸುಂದರ ದೃಶ್ಯವನ್ನು ಕಾಣಬಹುದು. ಆ ಮಗು ರೈಲನ್ನು ಕಂಡು ಆ ಕ್ಷಣವನ್ನು ಆನಂದಿಸುತ್ತಿದ್ದ ವೇಳೆ, ಆಕೆಯ ತಂದೆ ನಾವು ರೈಲಿನಲ್ಲಿ ಹೋಗೋಣವೇ ಎಂದು ಕೇಳುತ್ತಾರೆ, ಆಗ ಬಹಳ ಸಂತೋಷದಿಂದ ಹೋಗುವ ಹೋಗುವ ಎಂದು ಆ ಬಾಲಕಿ ಹೇಳುತ್ತಾಳೆ. ಅದರಲ್ಲೂ ರೈಲು ಸ್ಟೆಷನ್ ಹತ್ತಿರಕ್ಕೆ ಬಂದಾಗ ಓಹ್ ವಾವ್!! ಎಷ್ಟು ಚೆನ್ನಾಗಿದೆ ಎನ್ನುತ್ತಾ ಮೊದಲ ಬಾರಿಗೆ ರೈಲನ್ನು ಕಂಡು ಆ ಬಾಲಕಿ ಆಶ್ಚರ್ಯಪಡುತ್ತಿರುವ ಮುದ್ದಾದ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ಅಬ್ಬಬ್ಬಾ.. ದೈತ್ಯ ಹೆಬ್ಬಾವನ್ನೇ ತನ್ನ ಆಟಿಕೆಯನ್ನಾಗಿ ಮಾಡಿಕೊಂಡ ಪುಟ್ಟ ಬಾಲಕ
ಡಿಸೆಂಬರ್ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ 12.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮಕ್ಕಳ ಮೊದಲ ಪ್ರತಿಕ್ರಿಯೆಯನ್ನು ನೋಡುವುದೇ ಚಂದʼ ಎಂದು ಹೇಳಿದ್ದರೆ. ಇನ್ನೊಬ್ಬ ಬಳಕೆದಾರರು ʼಈ ಮಗುವಿನ ಉತ್ಸಾಹವನ್ನು ನೋಡಲು ಎರಡು ಕಣ್ಣು ಸಾಲದುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮಕ್ಕಳ ಸಂತೋಷವು ನಿಜಕ್ಕೂ ಪರಿಶುದ್ಧವಾದದ್ದುʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ವಿಡಿಯೋ ಬಹಳ ಮುದ್ದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: