ಮಕ್ಕಳನ್ನು ಸರಿದಾರಿಯಲ್ಲಿ ನಡೆಸುವವರು ಈ ಶಿಕ್ಷಕರು. ಹೌದು, ಪ್ರತಿಯೊಬ್ಬ ಶಿಕ್ಷಕನು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ದೀಪವಾಗಬೇಕು. ಪಾಠದ ಜೊತೆಗೆ ಉತ್ತಮ ಸಂಸ್ಕಾರವನ್ನು ಹೇಳಿಕೊಟ್ಟು ಉತ್ತಮ ಪ್ರಜೆಯನ್ನು ರೂಪಿಸುವ ಜವಾಬ್ದಾರಿಯೂ ಶಿಕ್ಷಕನ ಮೇಲಿದೆ. ಆದರೆ ಇಲ್ಲೊಬ್ಬ ಶಿಕ್ಷಕನು ಫುಲ್ ಟೈಟ್ ಆಗಿ ತರಗತಿಯಲ್ಲಿ ನಿದ್ದೆಗೆ ಜಾರಿದ್ದಾನೆ. ಮಕ್ಕಳ ಬದುಕನ್ನು ರೂಪಿಸುವ ಶಿಕ್ಷಕ ವೃತ್ತಿಗೆ ಕಳಂಕ ತರುವಂತ ಈ ಶಿಕ್ಷಕನ ವಿಡಿಯೋವೊಂದು ವೈರಲ್ ಆಗಿದೆ.
ಹೌದು, ಶಿಕ್ಷಕರೊಬ್ಬರು ಫುಲ್ ಟೈಟಾಗಿ ತರಗತಿಗೆ ಬಂದು ನಿದ್ದೆಗೆ ಜಾರಿದ್ದಾರೆ. ಇತ್ತ ವಿದ್ಯಾರ್ಥಿಗಳು ಆ ಶಿಕ್ಷಕನನ್ನು ಸುತ್ತುವರೆದಿದ್ದು ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಈ ಘಟನೆಯೂ ಅಸ್ಸಾಂನ ಕಾಮಾಖ್ಯ ನಗರದ ಶಾಲೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. Otvkhabar ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಶಿಕ್ಷಕ ಕುರ್ಚಿಯ ಮೇಲೆ ಮಲಗಿರುವುದನ್ನು ಕಾಣಬಹುದು. ಆತನ ಸುತ್ತ ವಿದ್ಯಾರ್ಥಿಗಳು ಸೇರಿದ್ದು, ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ವಿದ್ಯಾರ್ಥಿಗಳು ಎಷ್ಟೇ ತಳ್ಳಾಡಿದರೂ ಕೂಡ ಆತನು ಎದ್ದೇಳುತ್ತಿಲ್ಲ. ಇತ್ತ ಅಧ್ಯಾಪಕರು ಕೂಡ ಪ್ರಯತ್ನಿಸಿದ್ದು ಶಿಕ್ಷಕನು ಕುಡಿದ ನಶೆಯಲ್ಲಿ ಗಾಢವಾದ ನಿದ್ರೆಗೆ ಜಾರಿರುವುದನ್ನು ಕಾಣಬಹುದು.
#କ୍ଲାସ୍ରେ_ଶୋଇଗଲେ_ସାର୍
ନିଶାଶକ୍ତ ଅବସ୍ଥାରେ ସ୍କୁଲ୍ ଆସିଲେ। ପାଠ ପଢାଇବେ କଣ, ସିଧା ଶୋଇଗଲେ। ପିଲା ଡାକିଡାକି ନୟାନ୍ତ। ହେଲେ ସାର୍ଙ୍କ ନିଦ ଭାଙ୍ଗୁନି…କାମାକ୍ଷାନଗର ନୂଆଟିପିଲେଇ ପ୍ରାଥମିକ ବିଦ୍ୟାଳୟରେ ଏଭଳି ଅଭାବନୀୟ ଦୃଶ୍ୟ ଦେଖିବାକୁ ମିଳିଛି….#Teacher #Alchohol #Kamakhyanagar #OTV pic.twitter.com/OzbOR3UQLf— ଓଟିଭି (@otvkhabar) August 23, 2024
ಮೂವತ್ತೈದು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದ್ದು ನೆಟ್ಟಿಗರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೆಟ್ಟಿಗರೊಬ್ಬರು, ‘ಶಾಲೆಗಳಲ್ಲಿ ಶಿಕ್ಷಣದ ಸ್ಥಿತಿ ಕಳಪೆಯಾಗಿದೆ. ಇಂತಹ ಶಿಕ್ಷಕರ ಬೇಜವಾಬ್ದಾರಿ ವರ್ತನೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಬಹಿರಂಗವಾಗಿ ಇಂತಹ ಕೃತ್ಯಗಳಲ್ಲಿ ತೊಡಗುವ ದಿಟ್ಟತನ ಶಿಕ್ಷಕನಿಗೆ ಹೇಗೆ ಬಂತು’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಇನ್ನು ಕೆಲವರು ಈ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಅಗ್ರಹಿಸಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಈ ಶಿಕ್ಷಕನ ವಿರುದ್ಧ ಶಿಕ್ಷಣ ಇಲಾಖೆಯು ಕ್ರಮ ಕೈಗೊಳ್ಳಲು ಮುಂದಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:00 pm, Sat, 24 August 24