Dudhsagar Falls: ಭೂಮಿ-ಸ್ವರ್ಗದ ಮಿಲನ!; ಹಾಲ್ನೊರೆಯಾಗಿ ಧುಮ್ಮಿಕ್ಕುವ ದೂಧ್​ಸಾಗರ್ ಜಲಪಾತದ​ ವಿಡಿಯೋ ವೈರಲ್

| Updated By: ಸುಷ್ಮಾ ಚಕ್ರೆ

Updated on: Jul 15, 2022 | 3:29 PM

Viral Video: ಕರ್ನಾಟಕದ ಗೋವಾ ಮತ್ತು ಬೆಳಗಾವಿ ನಡುವಿನ ರೈಲು ಮಾರ್ಗದಲ್ಲಿ ಧುಮ್ಮಿಕ್ಕುವ ಈ ದೂಧ್​ಸಾಗರ್​ ಜಲಪಾತ ದೇಶದ ಅತ್ಯಂತ ಸುಂದರವಾದ ರಮಣೀಯ ತಾಣಗಳಲ್ಲಿ ಒಂದಾಗಿದೆ.

Dudhsagar Falls: ಭೂಮಿ-ಸ್ವರ್ಗದ ಮಿಲನ!; ಹಾಲ್ನೊರೆಯಾಗಿ ಧುಮ್ಮಿಕ್ಕುವ ದೂಧ್​ಸಾಗರ್ ಜಲಪಾತದ​ ವಿಡಿಯೋ ವೈರಲ್
ದೂದ್​ಸಾಗರ್​ ಜಲಪಾತ
Follow us on

ದೆಹಲಿ: ಮಳೆಗಾಲದಲ್ಲಿ ಜಲಪಾತಗಳ (Waterfalls) ಸೌಂದರ್ಯ ಇಮ್ಮಡಿಯಾಗುತ್ತದೆ. ಹಾಲಿನ ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು. ಭಾರೀ ಮಳೆಯಿಂದ ಜೋಗ ಜಲಪಾತದಿಂದ (Jog Falls) ಹಿಡಿದು ಸಣ್ಣ ಸಣ್ಣ ತೊರೆಗಳು ಸಹ ಧುಮಿಕ್ಕಿ ಹರಿಯುತ್ತಿವೆ. ಕೆಲವು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿರುವ ವಿಶ್ವ ವಿಖ್ಯಾತ ಜೋಗ ಜಲಪಾತದ ವಿಡಿಯೋ ವೈರಲ್ ಆಗಿತ್ತು. ಇದೀಗ ಗೋವಾದ ಅತ್ಯಾಕರ್ಷಕ ಜಲಪಾತವಾದ ದೂಧ್​ಸಾಗರ್ ಫಾಲ್ಸ್​ (Dudhsagar Falls) ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಮನ ಗೆಲ್ಲುತ್ತಿದೆ.

ಭಗವಾನ್ ಮಹಾವೀರ್ ವನ್ಯಜೀವಿ ಅಭಯಾರಣ್ಯದ ನೈಸರ್ಗಿಕ ಸೌಂದರ್ಯದ ನಡುವೆ ಧುಮ್ಮಿಕ್ಕುವ ದೂಧ್​ಸಾಗರ್ ಜಲಪಾತವನ್ನು ಸ್ಥಳೀಯವಾಗಿ ‘ಹಾಲಿನ ಸಮುದ್ರ’ ಎಂದು ಕರೆಯಲ್ಪಡುತ್ತದೆ. ಇದು ಮಾಂಡೋವಿ ನದಿಯಿಂದ ರೂಪುಗೊಂಡಿರುವ ಜಲಪಾತವಾಗಿದೆ. ಈ ಜಲಪಾತ 1017 ಅಡಿ ಎತ್ತರದಲ್ಲಿ ಪಶ್ಚಿಮ ಘಟ್ಟಗಳ ಪರ್ವತಗಳ ಮೇಲೆ ಹರಿಯುತ್ತದೆ. ನಂತರ ನಾಲ್ಕು ಹೊಳೆಗಳಾಗಿ ವಿಭಜನೆಯಾಗುತ್ತದೆ.

 

ಇದನ್ನೂ ಓದಿ: Jog Falls: ಇದು ನಯಾಗರ ಫಾಲ್ಸ್​ ಅಂದ್ಕೊಂಡ್ರಾ?; ಜೋಗ ಜಲಪಾತದ ರುದ್ರ ರಮಣೀಯ ವಿಡಿಯೋ ವೈರಲ್

ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರು ಈ ದೂಧ್​ಸಾಗರ್​ ಜಲಪಾತದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅವರು ಕೂ ಆ್ಯಪ್​ನಲ್ಲಿ ದೂಧ್​ಸಾಗರ್ ಜಲಪಾತದ ವೀಡಿಯೊವನ್ನು ಹಂಚಿಕೊಂಡಿದ್ದು, ಹೆವೆನ್ ಮೀಟ್ಸ್ ಅರ್ಥ್! (ಸ್ವರ್ಗವೇ ಭೂಮಿಯನ್ನು ಭೇಟಿಯಾದ ದೃಶ್ಯ) ಎಂದು ಪೋಸ್ಟ್​ ಮಾಡಿದ್ದಾರೆ.

ಕರ್ನಾಟಕದ ಗೋವಾ ಮತ್ತು ಬೆಳಗಾವಿ ನಡುವಿನ ರೈಲು ಮಾರ್ಗದಲ್ಲಿ ಧುಮ್ಮಿಕ್ಕುವ ಈ ದೂಧ್​ಸಾಗರ್​ ಜಲಪಾತ ದೇಶದ ಅತ್ಯಂತ ಸುಂದರವಾದ ರಮಣೀಯ ತಾಣಗಳಲ್ಲಿ ಒಂದಾಗಿದೆ.