AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eastern Brown Snake: ಹಾವಿನೊಂದಿಗೆ ರಾತ್ರಿ ಕಳೆದಿದ್ದ ಮಹಿಳೆ: ಹಾಸಿಗೆಯೊಳಗಿತ್ತು 6 ಅಡಿ ಉದ್ದದ ವಿಷಪೂರಿತ ಹಾವು

ನೀವು ರಾತ್ರಿ ಉತ್ತಮ ನಿದ್ರೆ ಮಾಡಿ ಬೆಳಗ್ಗೆ ಚಾದರ ತೆಗೆದಾಗ ಒಮ್ಮೆ ಹಾವು ಕಾಣಿಸಿಕೊಂಡರೆ ಏನಾಗುತ್ತೆ ಹೇಳಿ.ಇಂಥದ್ದೇ ಒಂದು ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ, ಮಹಿಳೆಯೊಬ್ಬಳು ಬೆಳಗ್ಗೆ ಏಳುವಾಗ ಹಾಸಿಗೆಯಲ್ಲಿ 6 ಅಡಿ ಉದ್ದದ ವಿಷಪೂರಿತ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ

Eastern Brown Snake: ಹಾವಿನೊಂದಿಗೆ ರಾತ್ರಿ ಕಳೆದಿದ್ದ ಮಹಿಳೆ: ಹಾಸಿಗೆಯೊಳಗಿತ್ತು 6 ಅಡಿ ಉದ್ದದ ವಿಷಪೂರಿತ ಹಾವು
ಈಸ್ಟರ್ನ್​ ಬ್ರೌನ್ ಸ್ನೇಕ್
ನಯನಾ ರಾಜೀವ್
|

Updated on: Mar 23, 2023 | 3:12 PM

Share

ನೀವು ರಾತ್ರಿ ಉತ್ತಮ ನಿದ್ರೆ ಮಾಡಿ ಬೆಳಗ್ಗೆ ಚಾದರ ತೆಗೆದಾಗ ಒಮ್ಮೆಲೆ ಹಾವು ಕಾಣಿಸಿಕೊಂಡರೆ ಏನಾಗುತ್ತೆ ಹೇಳಿ ಪರಿಸ್ಥಿತಿ. ಇಂಥದ್ದೇ ಒಂದು ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ, ಮಹಿಳೆಯೊಬ್ಬಳು ಬೆಳಗ್ಗೆ ಏಳುವಾಗ ಹಾಸಿಗೆಯಲ್ಲಿ 6 ಅಡಿ ಉದ್ದದ ವಿಷಪೂರಿತ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ರಾತ್ರಿ ಇಡೀ ಹಾವು ಅಲ್ಲಿಯೇ ಇತ್ತಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಹಾವು ಕಾಣಿಸಿಕೊಳ್ಳುತ್ತಿದ್ದಂತೆಯೇ ಕಿರುಚಿಕೊಂಡು ಕೋಣೆಯಿಂದ ಹೊರಹೋಗಿದ್ದಾರೆ. ಸಿಬಿಎಸ್ ನ್ಯೂಸ್ ವರದಿಯ ಪ್ರಕಾರ, ಕ್ವೀನ್ಸ್‌ಲ್ಯಾಂಡ್‌ನ ಮಹಿಳೆಯೊಬ್ಬರು ತಮ್ಮ ಹಾಸಿಗೆಯಲ್ಲಿ ಆರು ಅಡಿ ಉದ್ದದ ವಿಷಕಾರಿ ಹಾವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಘಟನೆ ಕಳೆದ ಸೋಮವಾರ ನಡೆದಿದೆ, ಮಹಿಳೆ ಹಾಸಿಗೆಯಿಂದ ಬೆಡ್​ಶೀಟ್​ ಅನ್ನು ಪಕ್ಕಕ್ಕೆ ಸರಿಸುವಾಗ ಕಂದು ಹಾವು  ಕಾಣಿಸಿಕೊಂಡಿತ್ತು.

ಏನಾದರೂ ಶಬ್ದ ಮಾಡಿದರೆ ಹಾವು ಓಡಿ ಹೋಗಬಹುದೆಂದು ಟವೆಲ್​ ಅನ್ನು ನೆಲಕ್ಕೆ ಹಾಕಿದರು, ಯಾವುದಕ್ಕೂ ಬಗ್ಗದೆ ಅದು ಮಲಗಿದಲ್ಲಿಯೇ ಮಲಗಿತ್ತು, ಬಳಿಕ ಹಾವು ಹಿಡಿಯುವವರನ್ನು ಕರೆಸಿ ಹಾವನ್ನು ಸುರಕ್ಷಿತವಾಗಿ ಅಲ್ಲಿಂದ ತೆರವುಗೊಳಿಸಲಾಯಿತು.

ಸ್ನ್ಯಾಕ್ ಕ್ಯಾಚರ್ ಜಚೇರಿ ರಿಚರ್ಡ್ ಅವರು ಕೋಣೆಗೆ ತಲುಪಿದಾಗ ಹಾವು ಅಲ್ಲಿಯೇ ಇತ್ತು, ಶಾಖದಿಂದ ಪಾರಾಗಲು ಹಾವು ಬಾಗಿಲಿನ ಮೂಲಕ ಕೋಣೆಗೆ ಪ್ರವೇಶಿಸಿರಬಹುದು ಎಂದು ರಿಚರ್ಡ್ ಹೇಳಿದರು.

ಹಾವನ್ನು ಹಿಡಿದ ನಂತರ, ರಿಚರ್ಡ್ ಅದನ್ನು ಇತರ ಮನೆಗಳಿಂದ ಸುರಕ್ಷಿತ ದೂರದಲ್ಲಿರುವ ಪೊದೆಯೊಳಗೆ ಬಿಟ್ಟಿದ್ದಾರೆ. ಈಸ್ಟರ್ನ್ ಬ್ರೌನ್ ವಿಶ್ವದ ಎರಡನೇ ಅತ್ಯಂತ ವಿಷಕಾರಿ ಹಾವು. ಅದರ ವಿಷವು ಪ್ರಬಲವಾದ ನ್ಯೂರೋಟಾಕ್ಸಿನ್ ಅನ್ನು ಹೊಂದಿರುತ್ತದೆ.

ಈ ಹಾವು ಯಾರಿಗಾದರೂ ಕಚ್ಚಿದರೆ, ಅದರ ವಿಷವು ಹೃದಯ ಮತ್ತು ಶ್ವಾಸಕೋಶವನ್ನು ನಿಷ್ಕ್ರಿಯಗೊಳಿಸುತ್ತದೆ. ಆಗ ವ್ಯಕ್ತಿ ಉಸಿರುಗಟ್ಟಿ ವ್ಯಕ್ತಿ ಸಾಯುತ್ತಾನೆ. ಆಸ್ಟ್ರೇಲಿಯಾದಲ್ಲಿ ಈ ಹಾವಿನ ಕಡಿತದಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?