Viral Video: ನಾನಿರುವುದೇ ನಿನಗಾಗಿ ಎನ್ನುತ್ತಿದ್ದಾರೆ ಈ ಅಜ್ಜ

Caring Husband : ಈ ಅಜ್ಜ ಅಜ್ಜಿಗೆ ತಲೆ ಬಾಚುವ ಈ ವಿಡಿಯೋವನ್ನು 2 ಮಿಲಿಯನ್​ ನೆಟ್ಟಿಗರು ನೋಡಿ ಭಾವುಕರಾಗಿದ್ದಾರೆ.

Viral Video: ನಾನಿರುವುದೇ ನಿನಗಾಗಿ ಎನ್ನುತ್ತಿದ್ದಾರೆ ಈ ಅಜ್ಜ
ನನಗೆಂಥ ನಾಚಿಕೆ ನನ್ನ ಹೆಂಡತಿ ತಲೆಬಾಚಲು...
Updated By: ಶ್ರೀದೇವಿ ಕಳಸದ

Updated on: Aug 16, 2022 | 5:14 PM

Viral Video: ಪ್ರೀತಿಯ ಸ್ವರೂಪಗಳು ಅನೇಕ. ಸದ್ಯ ಈ ವಿಡಿಯೋದಲ್ಲಿರುವ ದೃಶ್ಯವನ್ನು ನೋಡಿದ ನೆಟ್ಟಿಗರು ಇದೇ ನಿಜವಾದ ಪ್ರೀತಿ ಎನ್ನುತ್ತಿದ್ದಾರೆ. ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಪತ್ನಿಯ ತಲೆಗೂದಲನ್ನು ಬಾಚುತ್ತಿದ್ದಾರೆ ಈ ವೃದ್ಧ. ಈ ವಿಡಿಯೋ ನೋಡಿದ ಲಕ್ಷಾಂತರ ನೆಟ್ಟಿಗರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. 2 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆಗೆ ಒಳಪಟ್ಟ ಈ ವಿಡಿಯೋವನ್ನು ಈತನಕ ಸುಮಾರು 2.9 ಲಕ್ಷ ನೆಟ್ಟಿಗರು ಇಷ್ಟಪಟ್ಟಿದ್ದಾರೆ. RVCJ ಮೀಡಿಯಾ ಇನ್​ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಹಂಚಿಕೊಂಡಿದೆ. ಮೈಯ್ಯಕಾವನ್ನು ಕಳೆದುಕೊಂಡು ಉಳಿಯುವ ಇಂಥ ಸಂಗಾತ ಅಪರೂಪವೇ. ಇಲ್ಲಿ ಬೇಕಿರುವುದು ಕಾಳಜಿ, ಅತಃಕರಣ.

ಜೋಡಿಗಳಲ್ಲಿ ವಯಸ್ಸಾದಂತೆ ಅವಲಂಬನೆ ಹೆಚ್ಚುವುದು ಒಂದೆಡೆಯಾದರೆ, ವೃದ್ಧಾಪ್ಯದ ಸಮಸ್ಯೆಗಳನ್ನು ಸೈರಣೆ ಮಾಡಿಕೊಂಡು ಪರಸ್ಪರ ಸಮಾಧಾನದಿಂದ ಬದುಕುವುದು ಸವಾಲೇ ಸರಿ. ಇದು ಕೆಲ ಜೋಡಿಗಳಿಗೆ ಮಾತ್ರ ಸಾಧ್ಯವಾಗುತ್ತದೆ. ಈ ಆಪ್ತತೆ ನಿಮ್ಮನ್ನು ಆರ್ದ್ರಗೊಳಿಸಿರಲು ಸಾಕು.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:10 pm, Tue, 16 August 22