AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚರಂಡಿಯಲ್ಲಿ ಸಿಲುಕಿದ್ದ ಬೆಕ್ಕನ್ನು ಬಾಲಕಿಯೊಬ್ಬಳು ತನ್ನ ಕೈಯಾರೆ ಹೊರತೆಗೆದು ರಕ್ಷಿಸಿದ್ದಾಳೆ

ವೈರಲ್ ವಿಡಿಯೋ: ಸಾಮಾಜಿಕ ಜಾಲತಾಣಗಳಲ್ಲಿ ಥರಹೇವಾರಿ ವಿಡಿಯೋಗಳು ಟ್ರೆಂಡಿಂಗ್ ಆಗುತ್ತಿರುತ್ತವೆ. ಹಾವು, ಮೊಸಳೆ, ಹುಲಿಗಳು ಮುಂತಾದ ವಿವಿಧ ಪ್ರಾಣಿಗಳ ವೀಡಿಯೊಗಳಂತೂ ಹೆಚ್ಚಾಗಿ ವೈರಲ್ ಆಗುತ್ತವೆ.

Viral Video: ಚರಂಡಿಯಲ್ಲಿ ಸಿಲುಕಿದ್ದ ಬೆಕ್ಕನ್ನು ಬಾಲಕಿಯೊಬ್ಬಳು ತನ್ನ ಕೈಯಾರೆ ಹೊರತೆಗೆದು ರಕ್ಷಿಸಿದ್ದಾಳೆ
Viral Video: ಮಾನವೀಯತೆ ಎಂದರೆ ಇದೇ -ಕಷ್ಟಪಟ್ಟು ಬೆಕ್ಕು ಮರಿ ಉಳಿಸಿದ ಬಾಲಕಿಯನ್ನ ನೆಟ್ಟಿಗರು ಮುದ್ದು ಮಾಡ್ತಿದಾರೆ!
TV9 Web
| Edited By: |

Updated on: Aug 16, 2022 | 5:34 PM

Share

ವೈರಲ್ ವಿಡಿಯೋ: ಸಾಮಾಜಿಕ ಜಾಲತಾಣಗಳಲ್ಲಿ ಥರಹೇವಾರಿ ವಿಡಿಯೋಗಳು ಟ್ರೆಂಡಿಂಗ್ ಆಗುತ್ತಿರುತ್ತವೆ. ಹಾವು, ಮೊಸಳೆ, ಹುಲಿಗಳು ಮುಂತಾದ ವಿವಿಧ ಪ್ರಾಣಿಗಳ ವೀಡಿಯೊಗಳಂತೂ ಹೆಚ್ಚಾಗಿ ವೈರಲ್ ಆಗುತ್ತವೆ. ಇತ್ತೀಚಿಗೆ ಮಾನವೀಯತೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮಾನವೀಯತೆ ಬತ್ತಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಕೆಲವರಿಗೆ ಪ್ರಾಣಿಗಳ ಮೇಲಿನ ಪ್ರೀತಿ, ಮಾನವೀಯತೆ ಕೊಂಚವೂ ಕಡಿಮೆಯಾಗಿಲ್ಲ. ಅದು ದೊಡ್ಡ ಗುಣ! ಅಂತಹವರು ಮಾನವೀಯತೆ ತೋರುವ ಯಾವುದೇ ಅವಕಾಶವನ್ನು ಮಿಸ್ ಮಾಡಿಕೊಳ್ಳುದಿಲ್ಲ. ಅವರಿಗೆ ಏನೇ ಆಗಲಿ, ಸಂಕಷ್ಟಅದಲ್ಲಿರುವವರನ್ನು ತಮ್ಮ ಪ್ರಾಣ ಒತ್ತೆಯಿಟ್ಟಾದರೂ ರಕ್ಷಿಸುತ್ತಾರೆ. ಅಂತಹದ್ದಲೊಂದು ವೀಡಿಯೊ ನಿಮಗಾಗಿ ಇಲ್ಲಿದೆ. ಮಾನವೀಯತೆ ಎಂದರೆ ಇದೇ… ಹುಡುಗಿಯೊಬ್ಬಳು ಬೆಕ್ಕಿನ ಮರಿ ಉಳಿಸಿದ ವೈರಲ್ ವಿಡಿಯೋ ಇಲ್ಲಿದೆ.

ಬಾಲಕಿಯೊಬ್ಬಳು ಚರಂಡಿಯಲ್ಲಿ ಸಿಲುಕಿಬಿದ್ದಿದ್ದ ಬೆಕ್ಕನ್ನು ಸಾಕಷ್ಟು ಪ್ರಯತ್ನಪಟ್ಟು ಕೊನೆಗೂ ಅದನ್ನು ಸುರಕ್ಷಿತವಾಗಿ ತನ್ನ ಕೈಯಾರೆ ಹೊರತೆಗೆದಿದ್ದಾಳೆ. ಬೆಕ್ಕನ್ನು ಹೊರ ತೆಗೆಯಲು ಚರಂಡಿಯ ಗ್ರಿಲ್ಸ್​ ಮೇಲೆ ಮಲಗಿ, ರಸ್ತೆಯ ಕೆಳಗಿರುವ ಚರಂಡಿಯಲ್ಲಿ ಕೈ ಹಾಕಿ ಬೆಕ್ಕನ್ನು ರಕ್ಷಿಸಿದ್ದಾಳೆ. ಬೆಕ್ಕಿನ ಸಂರಕ್ಷಣೆಯಲ್ಲಿ ಮಾನವೀಯತೆ ತೋರಿಸಿ ಅದರ ಪ್ರಾಣ ಉಳಿಸಿದ್ದಕ್ಕಾಗಿ ನೆರೆದಿದ್ದವರು ಪ್ರಶಂಸೆಯ ಸುರಿಮಳೆಗೈದಿರುವುದು ಕಂಡುಬಂದಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಆಕೆಯನ್ನು ಅಭಿನಂದಿಸುತ್ತಿದ್ದಾರೆ. ಹುಡುಗಿಯ ಕೈಗೆ ಬೆಕ್ಕಿನ ಮರಿ ಬಂದ ತಕ್ಷಣ, ಅವಳು ಅದನ್ನು ತನ್ನ ಮಡಿಲಲ್ಲಿ ತೆಗೆದುಕೊಂಡು, ಮಾತೃಪ್ರೇಮ ತೋರಿ ಸಂಭ್ರಮಿಸಿದ್ದಾಳೆ.

To read more in Telugu click here

Follow Us
Web contact
Web contact

TV9 Kannada

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ