ಕೇವಲ 6 ಸೆಕೆಂಡ್​ಗಳಲ್ಲಿ ಸೋಡಾ ಕುಡಿದು ಮತ್ತೊಂದು ವಿಶ್ವದಾಖಲೆ ಬರೆದ ವೃತ್ತಿಪರ ಭಕ್ಷಕ!

| Updated By: Rakesh Nayak Manchi

Updated on: Jun 26, 2022 | 3:45 PM

ಯೂಟ್ಯೂಬರ್ ಎರಿಕ್ 'ಬ್ಯಾಡ್‌ಲ್ಯಾಂಡ್ಸ್' ಬುಕರ್ ಅವರು ಕೇವಲ 6.80 ಸೆಕೆಂಡುಗಳಲ್ಲಿ 1 ಲೀಟರ್ ಮೌಂಟೇನ್ ಡ್ಯೂ ಸೋಡಾವನ್ನು ಸೇವಿಸಿ ಮತ್ತೊಂದು ವಿಶ್ವ ದಾಖಲೆ ಬರೆದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

ಕೇವಲ 6 ಸೆಕೆಂಡ್​ಗಳಲ್ಲಿ ಸೋಡಾ ಕುಡಿದು ಮತ್ತೊಂದು ವಿಶ್ವದಾಖಲೆ ಬರೆದ ವೃತ್ತಿಪರ ಭಕ್ಷಕ!
ಎರಿಕ್ ಬುಕರ್
Follow us on

ವಿಶ್ವದಲ್ಲಿ ಗಿನ್ನಿಸ್ ರೆಕಾರ್ಡ್ ಬರೆಯುವ ವ್ಯಕ್ತಿಗಳ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಆಗೊಂದು ಈಗೊಂದು ವಿಶ್ವ ದಾಖಲೆ ಬರೆಯಲಾಗುತ್ತದೆ. ಇದೀಗ ಯೂಟ್ಯೂಬರ್ ಎರಿಕ್ ‘ಬ್ಯಾಡ್‌ಲ್ಯಾಂಡ್ಸ್’ ಬುಕರ್ ಅವರು ತಮ್ಮ ಹೆಸರಿನಲ್ಲಿ ಮತ್ತೊಂದು ವಿಶ್ವದಾಖಲೆ ಬರೆದಿದ್ದಾರೆ. 1 ಲೀಟರ್ ಮೌಂಟೇನ್ ಡ್ಯೂ ಸೋಡಾವನ್ನು ಕೇವಲ 6.80 ಸೆಕೆಂಡ್​ಗಳಲ್ಲಿ ಕುಡಿಯುವ ಮೂಲಕ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇದನ್ನು ಓದಿ: Viral Video: ಇದು ಇದು ಆಕ್ಚುಲಿ ಚೆನ್ನಾಗಿರೋದು! ಪ್ರೋತ್ಸಾಹ ಅಂದ್ರೆ ಹೀಗಿರಬೇಕು

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಬ್ಯಾಡ್‌ಲ್ಯಾಂಡ್ಸ್ ಅವರು 1 ಲೀಟರ್ ಮೌಂಟೇನ್ ಡ್ಯೂ ಸೋಡಾವನ್ನು ಅಳತೆ ಮಾಡುವ ಕಪ್‌ನಲ್ಲಿ ಹಾಕಿ ಕೇವಲ 6.80 ಸೆಕೆಂಡುಗಳಲ್ಲಿ ಕುಡಿದಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಬ್ಯಾಡ್​ಲ್ಯಾಂಡ್ಸ್​, “ಐ ಫೀಲ್ ಗ್ರೇಟ್, ಇದು ನಿಮಗೆ ಗೊತ್ತಿಲ್ಲ, ನಾನು ಇದನ್ನು ಒಂಬತ್ತು ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಮುಗಿಸುತ್ತೇನೆ ಎಂದು ಹೇಳಿದ್ದಾರೆ.

ಇದರ ನಂತರ 1 ಲೀಟರ್ ಟೊಮ್ಯಾಟೋ ಸಾಸ್ ಅನ್ನು ಸ್ಟ್ರಾ ಮೂಲಕ 1 ನಿಮಿಷ 18 ಸೆಕಂಡ್​ಗಳಲ್ಲಿ ಸೇವಿಸಿ ಮತ್ತೊಂದು ದಾಖಲೆ ಬರೆದಿದ್ದಾರೆ. ಮೇಜರ್ ಲೀಗ್ ಈಟಿಂಗ್‌ನಲ್ಲಿ ಪ್ರಸ್ತುತ 23ನೇ ಸ್ಥಾನದಲ್ಲಿರುವ ವೃತ್ತಿಪರ ಭಕ್ಷಕ ಬುಕರ್, ಈ ಹಿಂದೆ 18.45 ಸೆಕೆಂಡುಗಳಲ್ಲಿ ಎರಡು ಲೀಟರ್ ಸೋಡಾವನ್ನು ಸೇವಿಸಿದ ತ್ವರಿತ ಸಮಯಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದರು.

ಇದನ್ನೂ ಓದಿ: Viral Video: ಮಳೆಗಾಳದಲ್ಲಿ ಹೇಗೆ ನಡೆದುಕೊಂಡು ಹೋಗಬೇಕು ಗೊತ್ತಾ? ಈ ವಿಡಿಯೋ ನೋಡಿ

ಜೂನ್ 24 ರಂದು ಪೋಸ್ಟ್ ಮಾಡಲಾದ ಬುಕರ್ ಅವರ ಈ ವಿಡಿಯೋ ಈವರೆಗೆ 42,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ಕಾಮೆಂಟ್ ಬಾಕ್ಸ್​ನಲ್ಲಿ ಪ್ರತಿಕ್ರಿಯಿಸಿದ್ದು, “ಈ ವ್ಯಕ್ತಿಯಿಂದ ಎರಡನೇ ವಿಶ್ವ ದಾಖಲೆ, ಎಂತಹ ದಂತಕಥೆ!” ಎಂದು ಒಬ್ಬರು ಹೇಕೊಂಡಿದ್ದಾರೆ. ಮತ್ತೊಬ್ಬ ನೆಟ್ಟಿಗ, “ಅವನು ಖಂಡಿತವಾಗಿಯೂ ಈ ದಾಖಲೆಯನ್ನು ಮುರಿಯಲು ಪ್ರಯತ್ನಿಸುತ್ತಾನೆ ಎಂದು ನನ್ನ ಅಂತಃಪ್ರಜ್ಞೆಯು ಹೇಳುತ್ತದೆ” ಎಂದು ಹೇಳಿದ್ದಾರೆ.

Published On - 3:45 pm, Sun, 26 June 22