1915ರಲ್ಲಿ ನಾಪತ್ತೆಯಾಗಿತ್ತು ಎನ್ನಲಾಗಿದ್ದ ಸರ್ ಅರ್ನೆಸ್ಟ್ ಸಾಕಲ್ಟೆನ್ (Ernest Shackleton) ಅವರ ಎಂಡ್ಯುರೆನ್ಸ್ (Endurance) ಹಡಗು (Ship) ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ. ಅಂಟಾರ್ಟಿಕಾ ಕರಾವಳಿ ತೀರದಲ್ಲಿ ಸಂಶೋಧಕರಿಗೆ ಸಿಕ್ಕಿದೆ ಎಂದು ಟೈಮ್ಸ್ ನೌ ವರದಿ ತಿಳಿಸಿದೆ. ಹಡಗು ಸಿಕ್ಕಿದ್ದರ ಕುರಿತು ಫೋಟೋ ಮತ್ತು ವೀಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. 1914 ರಿಂದ 1917ರವರೆಗೆ ನಡೆದ ಇಂಪೀರಿಯಲ್ ಟ್ರಾನ್ಸ್-ಅಂಟಾರ್ಕ್ಟಿಕ್ ದಂಡಯಾತ್ರೆಯಲ್ಲಿ ಈ ಎಂಡ್ಯುರೆನ್ಸ್ ಹಡಗನ್ನು ಬಳಸಲಾಗಿತ್ತು. 144 ಅಡಿ ಉದ್ದವಿದ್ದು 28 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿತ್ತು ಎಂದು ವರದಿ ತಿಳಸಿದೆ.
Behold! #ENDURANCE The lost ship of Antarctic explorer Sir Ernest #Shackleton has been found on the floor of the Weddell Sea. After more than two weeks of searching, the @Endurance_22 project found the ship on Saturday. https://t.co/klujpcPGeH pic.twitter.com/XH2XFwDmHw
— Jonathan Amos (@BBCAmos) March 9, 2022
ಇದೀಗ ಪತ್ತೆಯಾದ ಅವಶೇಷಗಳಂತಿರುವ ಹಡಗಿನ ಫೋಟೋ, ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದೆ. ಈ ಹಡಗನ್ನು ಪತ್ತೆ ಮಾಡಲಾಗದೆ ಸಂಶೋಧಕರು ಕೂಡ ಸೋತಿದ್ದರು. ಇದೀಗ ವೆಡ್ಡಲ್ ಸಮುದ್ರದ ಆಳದಲ್ಲಿ ಪತ್ತೆಯಾಗಿದೆ. ವರದಿಯ ಪ್ರಕಾರ ಶತಮಾನಗಳ ನಂತರವೂ ಎಂಡ್ಯೂಸರ್ ಹಡಗು ಉತ್ತಮ ಸ್ಥಿತಿಯನ್ನು ಕಾಯ್ದುಕೊಂಡಿದೆ. ವೆಡ್ಡಲ್ ಸಮುದ್ರದಲ್ಲಿ ನೀರಿನ ಮೆಲೈಯಿಂದ ಕೇವಲ 3 ಕಿಮೀ ಆಳದಲ್ಲಿ ಕಂಡುಬಂದಿದೆ ಎಂದು ಹೇಳಲಾಗಿದೆ.
ಹಡಗು ಸಮುದ್ರದ ಆಳದಲ್ಲಿ ಮಂಜುಗಡ್ಡೆಯಿಂದ ತುಂಬಿಕೊಂಡಿತ್ತು. ಕಲೆವು ಮರದ ತುಂಡುಗಳು ಹಾಳಾಗಿದ್ದು. ಆದರೆ ಹಡಗಿನ ಮೇಲೆ ಬರೆದುಕೊಂಡಿದ್ದ ಅಕ್ಷರವನ್ನು ಗಮನಿಸಿದಾ ಎಂಡ್ಯುರೆನ್ಸ್ ಎನ್ನುವ ಶಬ್ದ ಕಾಣಿಕೊಂಡಿತು. ಇದರಿಂದಾ 1915ರಲ್ಲಿ ದಣಡಯಾತ್ರೆಯ ವೇಳೆ ನಾಪತ್ತೆಯಾಗಿದ್ದ ಹಡಗು ಎಂದು ಗುರುತಿಸಲು ಸಾಧ್ಯವಾಯಿತು ಎಂದು ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ:
ಶ್ರೀವಲ್ಲಿ ಹಾಡಿಗೆ ಜ್ವಾಲಾಗುಟ್ಟ ತಾಯಿಯ ಮಸ್ತ್ ಸ್ಟೆಪ್: ವಿಡಿಯೋ ಹಂಚಿಕೊಂಡ ಬ್ಯಾಡ್ಮಿಂಟನ್ ತಾರೆ