ಕೇರಳದ ಬೀದಿಯಲ್ಲಿ ಬಲೂನ್​ ಮಾರುತ್ತಿದ್ದ ಬಾಲಕಿ ಈಗ ಮಾಡೆಲ್​: ರಾತ್ರಿ ಬೆಳಗಾಗುವಷ್ಟರಲ್ಲಿ ಫೋಟೋ ವೈರಲ್​

ಕೇರಳದ ಬೀದಿಯಲ್ಲಿ ಬಲೂನ್​ ಮಾರುತ್ತಿದ್ದ ಬಾಲಕಿಯೊಬ್ಬಳು ಮಾಡೆಲ್​ ಫೋಟೋಶೂಟ್​ ಮೂಲಕ ರಾತ್ರಿ ಬೆಳಗಾಗುವಷ್ಟರಲ್ಲಿ ​ಸುದ್ದಿಯಾಗಿದ್ದಾಳೆ. ಇವಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಕೇರಳದ ಬೀದಿಯಲ್ಲಿ ಬಲೂನ್​ ಮಾರುತ್ತಿದ್ದ ಬಾಲಕಿ ಈಗ ಮಾಡೆಲ್​: ರಾತ್ರಿ ಬೆಳಗಾಗುವಷ್ಟರಲ್ಲಿ ಫೋಟೋ ವೈರಲ್​
ಮಾಡೆಲ್​ ಆದ ಬಲೂನ್​ ಮಾರುತ್ತಿದ್ದ ಬಾಲಕಿ
TV9kannada Web Team

| Edited By: Pavitra Bhat Jigalemane

Mar 09, 2022 | 4:51 PM

ಸಾಮಾಜಿಕ ಜಾಲತಾಣ (Social Media) ಯಾರನ್ನು ಬೇಕದಾರೂ ರಾತ್ರಿ ಬೆಳಗಾಗುವಷ್ಟರಲ್ಲಿ ದೊಡ್ಡ ಸ್ಟಾರ್​ ಆಗಿ ಮಾಡಬಹುದು. ಈಗಾಗಲೇ ಆ ರೀತಿಯ ಹಲವು ಘಟನೆಗಳು ನಡೆದಿದೆ. ರಾನು ಮಂಡಲ್​, ಕಚ್ಚಾ ಬಾದಾಮ್​ ಖ್ಯಾತಿಯ ಬುಬನ್​, ಸಹದೇವ್​ ದಿರ್ಡೋ ಹೀಗೆ ಹತ್ತಾರು ಮಂದಿ ಹೊಸ ಟ್ರೆಂಡ್​ಅನ್ನೇ ಸೃಷ್ಟಿ ಮಾಡಿದ್ದಾರೆ. ಇದೀಗ ಕೇರಳದ ಬೀದಿಯಲ್ಲಿ ಬಲೂನ್​ ಮಾರುತ್ತಿದ್ದ ಬಾಲಕಿಯೊಬ್ಬಳು ಮಾಡೆಲ್​ ಫೋಟೋಶೂಟ್​ ಮೂಲಕ ರಾತ್ರಿ ಬೆಳಗಾಗುವಷ್ಟರಲ್ಲಿ ​ಸುದ್ದಿಯಾಗಿದ್ದಾಳೆ. ಇವಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಪ್ರೋಟೋಗ್ರಫಿ ಹಾಗೂ ಮೇಕಪ್​ ಯಾರನ್ನೂ ಬೇಕಾದರೂ ಅಂದಗೊಳಿಸಿ ಮಾಡಲ್​ಗಳಂತೆ ಮಾಡುತ್ತದೆ. ಅದಕ್ಕೆ ಈಕೆ ಇನ್ನೊಂದು ಉದಾಹರಣೆ. ವೆಡ್ಡಿಂಗ್​ ಫೋಟೊಗ್ರಾಫರ್​ ಅರ್ಜುನ್ ಕೃಷ್ಣನ್ ಕೇರಳದ ಅಂಡಲೂರ್ ಕಾವು ಉತ್ಸವದಲ್ಲಿ ಕಿಸ್ಬು ಎಂಬ ಹುಡುಗಿಯನ್ನು ಗುರುತಿಸಿ ಫೋಟೋ ತೆಗೆದಿದ್ದಾರೆ. ಒಂದಷ್ಟು ಕ್ಯಾಂಡಿಡ್​ ಫೋಟೋಗಳನ್ನು ತೆಗೆದಿದ್ದಾರೆ. ನಂತರ ಅದನ್ನು ಅವಳ ತಾಯಿಗೆ ತೋರಿಸಿದ್ದರು. ಕ್ಲಿಕ್‌ಗಳನ್ನು ನೋಡಿದ ನಂತರ ತಾಯಿ-ಮಗಳು ಸಂತೋಷಗೊಂಡಿದ್ದರು.

ಅರ್ಜುನ್ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು.  ಫೋಟೋಗಳನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿರು. ಆ ಬಳಿಕ ಅವರು ಕಿಸ್ಬು ಅವರ ಮೇಕ್ ಓವರ್ ಫೋಟೋಶೂಟ್‌ಗಾಗಿ ಅವರ ಕುಟುಂಬವನ್ನು ಸಂಪರ್ಕಿಸಿದರು. ರೆಮ್ಯಾ ಎಂಬ ಸ್ಟೈಲಿಸ್ಟ್ ಸಹಾಯದಿಂದ ಮೇಕ್ ಓವರ್  ಮಾಡಿಸಿ ಫೋಟೋಶೂಟ್​ ಮಾಡಿದ್ದಾರೆ. ಇವರ ಫೋಟೋಗಳು ಇದೀಗ ಎಲ್ಲರ ಮನಗೆದ್ದಿದೆ. ರಾತ್ರಿ ಬೆಳಗಾಗುವಷ್ಟರಲ್ಲಿ ಬಾಲಕಿ ಇಂಟರ್​ನೆಟ್​ನಲ್ಲಿ ಹೊಸ ಅಲೆ ಎಬ್ಬಿಸಿದ್ದಾಳೆ. ಯಾವ ಮಾಡಲ್​ಗೂ ಕಮ್ಮಿ ಇಲ್ಲಿದಂತೆ ಫೋಟೋಗೆ ಪೋಸ್​ ನೀಡುವ ಮೂಲಕ ಜನರನ್ನು ಹುಬ್ಬೇರಿಸುವಂತೆ ಮಾಡಿದ್ದಾಳೆ.

 ಇದನ್ನೂ ಓದಿ:

ಶ್ರೀವಲ್ಲಿ ಹಾಡಿಗೆ ಜ್ವಾಲಾಗುಟ್ಟ ತಾಯಿಯ ಮಸ್ತ್​ ಸ್ಟೆಪ್​: ವಿಡಿಯೋ ಹಂಚಿಕೊಂಡ ಬ್ಯಾಡ್ಮಿಂಟನ್​ ತಾರೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada