ದೇಶದ ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ, ಅಂಬಾನಿ ಕುಟುಂಬದ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮವು ಜಾಮ್‌ನಗರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಅಂಬಾನಿ ಕುಟುಂಬದ ಮಹಿಳೆಯರು ಕೋಟ್ಯಂತರ ರೂಪಾಯಿ ಬೆಲೆಬಾಳುವ ಬಟ್ಟೆ ಮತ್ತು ಆಭರಣಗಳನ್ನು ಧರಿಸಿದ್ದರು. ಅಂಬಾನಿ ಕುಟುಂಬದ ಮಹಿಳೆಯರು ತೊಡುತ್ತಿದ್ದ ಆಭರಣಗಳತ್ತ ಎಲ್ಲರ ಕಣ್ಣು ನೆಟ್ಟಿತ್ತು. ಆದರೆ ಕೈಗೆ ಕಟ್ಟಿದ್ದ ಕಪ್ಪು ದಾರದ ಕಡೆ ಗಮನ ಹರಿಸಿದವರು ಬಹಳ ಕಡಿಮೆ.
ನೀತಾ ಅಂಬಾನಿ ಸೊಸೆ ರಾಧಿಕಾ ಕೂಡ ಕಪ್ಪು ದಾರವನ್ನು ಧರಿಸಿದ್ದರು. ಆದರೆ ಅಂಬಾನಿ ಕುಟುಂಬದ ಮಹಿಳೆಯರು ತಮ್ಮ ಕೈಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವ ಕಾರಣ ಕೆಲವೇ ಜನರಿಗೆ ಮಾತ್ರ ತಿಳಿದಿದೆ. ಹಾಗಾದರೆ ಅಂಬಾನಿ ಕುಟುಂಬದ ಮಹಿಳೆಯರು ತಮ್ಮ ಕೈಗಳಿಗೆ ಕಪ್ಪು ದಾರವನ್ನು ಏಕೆ ಕಟ್ಟುತ್ತಾರೆ ಎಂದು ಈಗ ತಿಳಿಯೋಣ.
ಇದನ್ನೂ ಓದಿ: ಸ್ವಾತಂತ್ರ್ಯಪೂರ್ವದಲ್ಲೇ ಜುನಾಗಡ್ ನವಾಬನ ನಾಯಿ ಮದುವೆಗೆ ಆದ ಖರ್ಚು 2 ಕೋಟಿ ರೂ
ಕಪ್ಪು ದಾರವನ್ನು ಧರಿಸುವುದು ಖಚಿತವಾದ ಯಶಸ್ಸನ್ನು ತರುತ್ತದೆ ಮತ್ತು ದುಷ್ಟ ದೃಷ್ಟಿಯಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಕಪ್ಪು ದಾರವು ರೋಗಗಳಿಂದ ದೂರವಿಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಕಪ್ಪು ಬಣ್ಣವು ಶನಿ ದೇವರನ್ನು ಪ್ರತಿನಿಧಿಸುತ್ತದೆ, ಆದ್ದರಿಂದ ಶನಿವಾರ ಕಪ್ಪು ದಾರವನ್ನು ಧರಿಸಲು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗುತ್ತದೆ. ಕಪ್ಪು ದಾರ ಕಟ್ಟಿರುವವರನ್ನು ಸ್ವತಃ ಶನಿ ಮಹಾರಾಜನೇ ರಕ್ಷಿಸುತ್ತಾನೆ ಎಂಬ ನಂಬಿಕೆಯಿದೆ. ಹೀಗಾಗಿ ಅಂಬಾನಿ ಕುಟುಂಬದ ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ಕೈಗೆ ಕಪ್ಪು ದಾರ ಕಟ್ಟಿಕೊಳ್ಳುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.
ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಸೇರಿದಂತೆ ಮನೆಯ ಸದಸ್ಯರ ಕೈಯಲ್ಲಿ ಕಪ್ಪುದಾರಗಳನ್ನು ಕಾಣಬಹುದು. ಇದಲ್ಲದೇ ಅಂಬಾನಿ ಕುಟುಂಬದ ಕಿರಿಯ ಸೊಸೆಯಾಗಿರುವ ರಾಧಿಕಾ ಕೂಡ ಮದುವೆಯ ಪೂರ್ವ ಸಂಭ್ರಮದಲ್ಲಿ ಕೈಯಲ್ಲಿ ಕಪ್ಪು ದಾರವನ್ನು ಧರಿಸಿದ್ದರು. ಈ ಜೋಡಿ ಜುಲೈನಲ್ಲಿ ಅದ್ಧೂರಿಯಾಗಿ ಮದುವೆ ಮಾಡಲಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ