AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕೇರಳದ ದೇವಾಲಯಕ್ಕೆ ರೋಬೋ ಆನೆ ಉಡುಗೊರೆ ನೀಡಿದ ನಟಿ ಪ್ರಿಯಾಮಣಿ

ಕೃತಕ ಆನೆಯನ್ನು ಉಡುಗೊರೆಯಾಗಿ ನೀಡುರುವ ಪ್ರಿಯಾಮಣಿ, “ತಂತ್ರಜ್ಞಾನದ ಪ್ರಗತಿಯೂ ಶ್ರೀಮಂತ ಸಾಂಸ್ಕೃತಿಕ ಆಚರಣೆಗಳ ಮತ್ತು ಪರಂಪರೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪ್ರಾಣಿಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ಈ ಹೊಸ ಯಾಂತ್ರಿಕ ಆನೆಯು ಭಕ್ತರು ಸುರಕ್ಷಿತವಾಗಿ ಮತ್ತು ಪ್ರಾಣಿ ಸ್ನೇಹಿಯಾಗಿ ದೇವಾಲಯದ ಶುಭ ಕಾರ್ಯಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ” ಎಂದು ಹೇಳಿದ್ದಾರೆ.

Viral: ಕೇರಳದ ದೇವಾಲಯಕ್ಕೆ ರೋಬೋ ಆನೆ ಉಡುಗೊರೆ ನೀಡಿದ ನಟಿ ಪ್ರಿಯಾಮಣಿ
ಮಾಲಾಶ್ರೀ ಅಂಚನ್​
| Edited By: |

Updated on: Mar 20, 2024 | 7:31 PM

Share

ದೇಶದಲ್ಲಿನ ಅನೇಕ ದೇವಾಲಯಗಳಲ್ಲಿ ಧಾರ್ಮಿಕ ಆಚರಣೆಗಳಿಗೆ ಹಾಗೂ ದೇವರ ಸೇವೆಗೆಂದು ಜೀವಂತ ಆನೆಗಳನ್ನು ಬಳಸಲಾಗುತ್ತದೆ. ಆದರೆ ಇದೀಗ ಕೇರಳದ ತೃಕ್ಕಾಯಿಲ್ ಮಹಾದೇವ ದೇಗುಲದ ಆಡಳಿತ ಮಂಡಳಿಯು ಜೀವಂತ ಆನೆಗಳನ್ನು ದೇವಸ್ಥಾನದ ಆಚರಣೆ ಮತ್ತು ಕಾರ್ಯಕ್ರಮಗಳಿಗೆ ಬಳಕೆ ಮಾಡುವುದು ಬೇಡ, ಅವುಗಳನ್ನು ಗುತ್ತಿಗೆಗೆ ಪಡೆಯೋದು ಬೇಡ ಎಂಬ ನಿರ್ಧಾರ ಮಾಡಿದೆ. ಅಷ್ಟೇ ಅಲ್ಲದೆ ಧಾರ್ಮಿಕ ಆಚರಣೆಗಳ ಕಾರಣಕ್ಕೆ ಹಾಗೂ ಪ್ರದರ್ಶನದ ಕಾರಣಕ್ಕೆ ಪ್ರಾಣಿಗಳನ್ನು ಬಳಕೆ ಮಾಡುವುದು ಕ್ರೂರತೆ ಎಂದು ಹೇಳಿದೆ. ದೇವಾಲಯದ ಈ ನಿರ್ಧಾರಕ್ಕೆ ಮೆಚ್ಚಿದ ಲಾಭರಹಿತ ಸಂಸ್ಥೆಯಾಗಿರುವ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾದ ಜೊತೆಗೂಡಿ ನಟಿ ಪ್ರಿಯಾಮಣಿ ನೋಡಲು ಥೇಟ್ ಜೀವಂತ ಆನೆಯಂತೆಯೇ ಕಾಣುವ ರೋಬೋಟಿಕ್ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇನ್ನು ಮುಂದೆ ದೇವಸ್ಥಾನದ ಆಚರಣೆಗಳಿಗೆ ಜೀವಂತ ಆನೆಯನ್ನು ಬಳಸುವುದಿಲ್ಲ ಎಂಬ ತೃಕ್ಕಾಯಿಲ್ ಮಹಾದೇವಾ ದೇವಾಲಯದ ಆಡಳಿತ ಮಂಡಳಿಯ ಮಹತ್ತರವಾದ ನಿರ್ಧಾರದಿಂದ ಖುಷಿಯಾಗಿರುವ ನಟಿ ಪ್ರಿಯಾಮಣಿ ಲಾಭರಹಿತ ಸಂಸ್ಥೆಯಾದ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಪ್ ಅನಿಮಲ್ಸ್ (PETA) ಇಂಡಿಯಾ ಜೊತೆಗೂಡಿ ಈ ದೇವಾಲಯಕ್ಕೆ ನೈಜ್ಯ ಆನೆಯಂತೆಯೇ ಇರುವ ಬೃಹದಾಕಾರದ ಕೃತಕ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಯಾಂತ್ರಿಕ ಆನೆಗೆ ʼಮಹಾದೇವನ್ʼ ಎಂದು ನಾಮಕರಣ ಮಾಡಲಾಗಿದ್ದು, ದೇಗುಲದ ಆಚರಣೆಯಲ್ಲಿ ಈ ಆನೆಯನ್ನು ಸುರಕ್ಷಿತ ಮತ್ತು ಹಿಂಸೆಯಿಂದ ಮುಕ್ತವಾಗಿ ಬಳಕೆ ಮಾಡಬಹುದಾಗಿದೆ ಮತ್ತು ಭಕ್ತಾದಿಗಳು ಶುಭ ಸಂದರ್ಭದಲ್ಲಿ ಸುರಕ್ಷಿತ ಮತ್ತು ಪ್ರಾಣಿ ಸ್ನೇಹಿ ವಾತಾವರಣದಲ್ಲಿ ಭಾಗಿಯಾಗಬಹುದು ಎಂದು ಪೇಟಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕೃತಕ ಆನೆಯನ್ನು ಉಡುಗೊರೆಯಾಗಿ ನೀಡುರುವ ಪ್ರಿಯಾಮಣಿ, “ತಂತ್ರಜ್ಞಾನದ ಪ್ರಗತಿಯೂ ಶ್ರೀಮಂತ ಸಾಂಸ್ಕೃತಿಕ ಆಚರಣೆಗಳ ಮತ್ತು ಪರಂಪರೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪ್ರಾಣಿಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ಈ ಹೊಸ ಯಾಂತ್ರಿಕ ಆನೆಯು ಭಕ್ತರು ಸುರಕ್ಷಿತವಾಗಿ ಮತ್ತು ಪ್ರಾಣಿ ಸ್ನೇಹಿಯಾಗಿ ದೇವಾಲಯದ ಶುಭ ಕಾರ್ಯಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ” ಎಂದು ಹೇಳಿದ್ದಾರೆ.

ಕೇರಳ ಸೇರಿದಂತೆ ದೇಶದ ಹಲವು ದೇವಾಲಯಗಳ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಜೀವಂತ ಆನೆಗಳನ್ನು ಬಳಕೆ ಮಾಡಲಾಗುತ್ತಿದೆ. ಹೀಗಿರುವಾಗ ಅವುಗಳಿಗೆ ಹಿಂಸೆಯನ್ನು ನೀಡದೆ ಅವುಗಳು ಮನುಷ್ಯರಂತೆಯೇ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ತಮ್ಮ ಕುಟುಂಬದೊಂದಿಗೆ ಜೀವಿಸಬೇಕು ಎಂಬ ಕಾರಣಕ್ಕೆ ತೃಕ್ಕಾಯಿಲ್ ಮಹಾದೇವಾ ದೇವಾಲಯದ ಆಡಳಿತ ಮಂಡಳಿಯು ಜೀವಂತ ಆನೆಗಳನ್ನು ಧಾರ್ಮಿಕ ಆಚರಣೆಗಳಲ್ಲಿ ಬಳಕೆ ಮಾಡುವುದಿಲ್ಲ ಎಂಬ ನಿರ್ಧಾರವನ್ನು ತೆಗೆದುಕೊಂಡಿದೆ. ಇದೀಗ ಈ ದೇವಾಲಯಕ್ಕೆ ಜೀವಂತ ಆನೆಯನ್ನೇ ಹೋಲುವ ರೋಬೋಟಿಕ್ ಆನೆ ʼಮಹದೇವನ್ʼ ಆಗಮನವಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್