ವೈರಲ್ ವಿಡಿಯೋ: ತನ್ನ ಮದುವೆ ಶಾಸ್ತ್ರಕ್ಕೂ ಖಾಕಿ ಡ್ರೆಸ್ ನಲ್ಲಿ ಕಾಣಿಸಿಕೊಂಡ ಯುವತಿ.. ಇಲ್ಲಿದೆ ಬೆಚ್ಚಿ ಬೀಳಿಸುವ ಸತ್ಯ!

ಸಮವಸ್ತ್ರದಲ್ಲಿರುವ ತನ್ನ ಫೋಟೋಗಳನ್ನು ತನ್ನ ಪ್ರೊಫೈಲ್ ಚಿತ್ರಗಳು ಮತ್ತು ಸ್ಟೇಟಸ್‌ಗಳಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರಿಂದ ಆ ಯುವತಿಯ ಅನೇಕ ಪರಿಚಯಸ್ಥರು ಆಕೆಗೆ ಕೆಲಸ ಸಿಕ್ಕಿದೆ ಎಂದೇ ನಂಬಿದ್ದರು. ಮುಂದೆ... ಆಕೆಗೆ ಮದುವೆಯ ಪ್ರಸ್ತಾಪ ಬಂದಾಗ.. ಮಾಳವಿಕಾ ವರನನ್ನು ನೋಡಲು ಸಮವಸ್ತ್ರದಲ್ಲಿಯೇ ಹೋಗಿದ್ದಳು! ಇಲ್ಲಿಯೇ ನಿಜವಾದ ಕತೆ ಎಳೆ ಬಿಚ್ಚಿಕೊಂಡಿದ್ದು...

Follow us
ಸಾಧು ಶ್ರೀನಾಥ್​
|

Updated on: Mar 20, 2024 | 5:56 PM

ನಿಜಾಮ್ ಕಾಲೇಜಿನಲ್ಲಿ ಪದವಿ ಮುಗಿಸಿದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ! ರೈಲ್ವೇ ಎಸ್‌ಐ ಎಂದು ಹೇಳಿಕೊಳ್ಳುತ್ತಿರುವ ಯುವತಿ ಮಾಳವಿಕಾ ಬಂಡಾರ ಮರಾಮೋಸದಾಟವನ್ನು ರೈಲ್ವೆ ಪೊಲೀಸರು ಬಯಲಿಗೆಳೆದಿದ್ದಾರೆ. ನಾರ್ಕೆಟ್‌ ಪಲ್ಲಿಯ ಮಾಳವಿಕಾ ಎಂಬ ಯುವತಿ ನಿಜಾಮ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. 2018 ರಲ್ಲಿ RPF Sc ಪರೀಕ್ಷೆಯನ್ನು ಬರೆದಿದ್ದಾರೆ. ಆದರೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದರೂ ದೃಷ್ಟಿ ಮಾಪನ ವೈದ್ಯಕೀಯ ಪರೀಕ್ಷೆಯಲ್ಲಿ ಅನರ್ಹಳಾಗಿದ್ದಳು. ಆದರೆ ಹೇಗಾದರೂ ಮಾಡಿ ರೈಲ್ವೇ ಪೊಲೀಸ್ ಆಗಬೇಕೆಂದುಕೊಂಡಿದ್ದ ಮಾಳವಿಕಾ ಖಾಕಿ ಯೂನಿಫಾರಂ ಧರಿಸಿಯೇಬಿಟ್ಟರು. ನಾರ್ಕೆಟ್‌ಪಲ್ಲಿ ಗ್ರಾಮದಲ್ಲಿ ಆರ್‌ಪಿಎಫ್ ಎಸ್‌ಐ ಆಗಿ ಸಂಚರಿಸಲು ಶುರು ಮಾಡಿದ್ದರು. ತಾನು ಶಂಕರಪಲ್ಲಿ ಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಎಲ್ಲರನ್ನೂ ನಂಬಿಸಿದ್ದಳು.

ಸಮವಸ್ತ್ರದಲ್ಲಿರುವ ತನ್ನ ಫೋಟೋಗಳನ್ನು ತನ್ನ ಪ್ರೊಫೈಲ್ ಚಿತ್ರಗಳು ಮತ್ತು ಸ್ಟೇಟಸ್‌ಗಳಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರಿಂದ ಆ ಯುವತಿಯ ಅನೇಕ ಪರಿಚಯಸ್ಥರು ಆಕೆಗೆ ಕೆಲಸ ಸಿಕ್ಕಿದೆ ಎಂದೇ ನಂಬಿದ್ದರು. ಮುಂದೆ… ಆಕೆಗೆ ಮದುವೆಯ ಪ್ರಸ್ತಾಪ ಬಂದಾಗ.. ಮಾಳವಿಕಾ ವರನನ್ನು ನೋಡಲು ಸಮವಸ್ತ್ರದಲ್ಲಿಯೇ ಹೋಗಿದ್ದಳು! ಇಲ್ಲಿಯೇ ನಿಜವಾದ ಕತೆ ಎಳೆ ಬಿಚ್ಚಿಕೊಂಡಿದ್ದು…

ಮಾಳವಿಕಾ ಹುಡುಗಿ ನೋಡುವ ಶಾಸ್ತ್ರಕ್ಕೂ ಸಮವಸ್ತ್ರದಲ್ಲೇ ಬಂದಾಗ ವರನ ಕಡೆಯವರು ಬೆಚ್ಚಿಬಿದ್ದಿದ್ದಾರೆ. ಯುವಕನ ಸಂಬಂಧಿಕರು ಮಾಳವಿಕಾ ವರ್ತನೆ ಬಗ್ಗೆ ತಮಗೆ ತಿಳಿದ ರೈಲ್ವೇ ಅಧಿಕಾರಿಗಳ ಮೂಲಕ ವಿಚಾರಣೆ ನಡೆಸಿದ್ದಾರೆ. ಮಾಳವಿಕಾ ಎಂಬುವವರು ಯಾರೂ ರೈಲ್ವೇ ಎಸ್ಐ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಪೊಲೀಸರನ್ನು ಸಂಪರ್ಕಿಸಿ ಸತ್ಯವೇನು ಎಂದು ಕೇಳಿದ್ದಾರೆ.

ಸ್ಥಳಕ್ಕೆ ಬಂದ ನಲ್ಗೊಂಡ ರೈಲ್ವೇ ಪೊಲೀಸರು ಮಾಳವಿಕಾಳನ್ನು ಬಂಧಿಸಿದ್ದಾರೆ. ಆದರೆ ತಾನು ಎಸ್‌ಐ ಆಗಲು ಸಾಧ್ಯವಾಗಲಿಲ್ಲ ಎಂದು ಪೋಷಕರು ಆತಂಕಗೊಂಡಿದ್ದು, ಅದಕ್ಕಾಗಿಯೇ ನಕಲಿ ಎಸ್‌ಐ ವೇಷ ತೊಟ್ಟಿರುವುದಾಗಿ ಮಾಳವಿಕಾ ತನ್ನ ಪ್ರವರವನ್ನು ಪೊಲೀಸರಿಗೆ ತಿಳಿಸಿದ್ದಾಳೆ.

ರೈಲ್ವೇ ಎಸ್‌ಐ ಆಗಿ ಮಾಳವಿಕಾ ಇನ್‌ಸ್ಟಾಗ್ರಾಮ್‌ನಲ್ಲಿರುವ ರೀಲ್‌ಗಳು ವೈರಲ್ ಆಗಿವೆ. ಕಳೆದ ಒಂದು ವರ್ಷದಿಂದ ಮಾಳವಿಕಾ ನಕಲಿ ಎಸ್‌ಐ ಆಗಿ ಚಲಾವಣೆಯಲ್ಲಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಮಾಳವಿಕಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್‌ಗೆ ಕಳುಹಿಸಿದ್ದಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ