AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Black Thread: ಅಂಬಾನಿ ಮನೆಯ ನಾರಿಮಣಿಗಳ ಕೈಯಲ್ಲಿ ಇರುತ್ತೆ ಈ ಕಪ್ಪು ದಾರ, ಇದರ ಹಿಂದಿರುವ ರಹಸ್ಯ ಏನು?

ಅಂಬಾನಿ ಕುಟುಂಬದ ಮಹಿಳೆಯರು ತೊಡುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ಬಟ್ಟೆ ಮತ್ತು ಆಭರಣಗಳ ನಡುವೆ ಅವರ ಕೈಗೆ ಕಟ್ಟಲಾಗಿರುವ ಕಪ್ಪು ದಾರದ ಕಡೆ ಗಮನ ಹರಿಸುವವರ ಸಂಖ್ಯೆ ಬಹಳ ಕಡಿಮೆ. ಹಾಗಾದರೆ ಅಂಬಾನಿ ಕುಟುಂಬದ ಮಹಿಳೆಯರು ತಮ್ಮ ಕೈಗಳಿಗೆ ಕಪ್ಪು ದಾರವನ್ನು ಏಕೆ ಕಟ್ಟುತ್ತಾರೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Black Thread: ಅಂಬಾನಿ ಮನೆಯ ನಾರಿಮಣಿಗಳ ಕೈಯಲ್ಲಿ ಇರುತ್ತೆ ಈ ಕಪ್ಪು ದಾರ, ಇದರ ಹಿಂದಿರುವ ರಹಸ್ಯ ಏನು?
ಅಂಬಾನಿ ಮನೆಯ ನಾರಿಮಣಿಗಳ ಕೈಯಲ್ಲಿ ಇರುತ್ತೇ ಕಪ್ಪು ದಾರImage Credit source: instagram
Follow us
ಅಕ್ಷತಾ ವರ್ಕಾಡಿ
|

Updated on: Mar 21, 2024 | 10:25 AM

ದೇಶದ ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ, ಅಂಬಾನಿ ಕುಟುಂಬದ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮವು ಜಾಮ್‌ನಗರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಅಂಬಾನಿ ಕುಟುಂಬದ ಮಹಿಳೆಯರು ಕೋಟ್ಯಂತರ ರೂಪಾಯಿ ಬೆಲೆಬಾಳುವ ಬಟ್ಟೆ ಮತ್ತು ಆಭರಣಗಳನ್ನು ಧರಿಸಿದ್ದರು. ಅಂಬಾನಿ ಕುಟುಂಬದ ಮಹಿಳೆಯರು ತೊಡುತ್ತಿದ್ದ ಆಭರಣಗಳತ್ತ ಎಲ್ಲರ ಕಣ್ಣು ನೆಟ್ಟಿತ್ತು. ಆದರೆ ಕೈಗೆ ಕಟ್ಟಿದ್ದ ಕಪ್ಪು ದಾರದ ಕಡೆ ಗಮನ ಹರಿಸಿದವರು ಬಹಳ ಕಡಿಮೆ.

ನೀತಾ ಅಂಬಾನಿ ಸೊಸೆ ರಾಧಿಕಾ ಕೂಡ ಕಪ್ಪು ದಾರವನ್ನು ಧರಿಸಿದ್ದರು. ಆದರೆ ಅಂಬಾನಿ ಕುಟುಂಬದ ಮಹಿಳೆಯರು ತಮ್ಮ ಕೈಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವ ಕಾರಣ ಕೆಲವೇ ಜನರಿಗೆ ಮಾತ್ರ ತಿಳಿದಿದೆ. ಹಾಗಾದರೆ ಅಂಬಾನಿ ಕುಟುಂಬದ ಮಹಿಳೆಯರು ತಮ್ಮ ಕೈಗಳಿಗೆ ಕಪ್ಪು ದಾರವನ್ನು ಏಕೆ ಕಟ್ಟುತ್ತಾರೆ ಎಂದು ಈಗ ತಿಳಿಯೋಣ.

ಇದನ್ನೂ ಓದಿ: ಸ್ವಾತಂತ್ರ್ಯಪೂರ್ವದಲ್ಲೇ ಜುನಾಗಡ್ ನವಾಬನ ನಾಯಿ ಮದುವೆಗೆ ಆದ ಖರ್ಚು 2 ಕೋಟಿ ರೂ

ಕಪ್ಪು ದಾರವನ್ನು ಧರಿಸುವುದು ಖಚಿತವಾದ ಯಶಸ್ಸನ್ನು ತರುತ್ತದೆ ಮತ್ತು ದುಷ್ಟ ದೃಷ್ಟಿಯಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಕಪ್ಪು ದಾರವು ರೋಗಗಳಿಂದ ದೂರವಿಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಕಪ್ಪು ಬಣ್ಣವು ಶನಿ ದೇವರನ್ನು ಪ್ರತಿನಿಧಿಸುತ್ತದೆ, ಆದ್ದರಿಂದ ಶನಿವಾರ ಕಪ್ಪು ದಾರವನ್ನು ಧರಿಸಲು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗುತ್ತದೆ. ಕಪ್ಪು ದಾರ ಕಟ್ಟಿರುವವರನ್ನು ಸ್ವತಃ ಶನಿ ಮಹಾರಾಜನೇ ರಕ್ಷಿಸುತ್ತಾನೆ ಎಂಬ ನಂಬಿಕೆಯಿದೆ. ಹೀಗಾಗಿ ಅಂಬಾನಿ ಕುಟುಂಬದ ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ಕೈಗೆ ಕಪ್ಪು ದಾರ ಕಟ್ಟಿಕೊಳ್ಳುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.

ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಸೇರಿದಂತೆ ಮನೆಯ ಸದಸ್ಯರ ಕೈಯಲ್ಲಿ ಕಪ್ಪುದಾರಗಳನ್ನು ಕಾಣಬಹುದು. ಇದಲ್ಲದೇ ಅಂಬಾನಿ ಕುಟುಂಬದ ಕಿರಿಯ ಸೊಸೆಯಾಗಿರುವ ರಾಧಿಕಾ ಕೂಡ ಮದುವೆಯ ಪೂರ್ವ ಸಂಭ್ರಮದಲ್ಲಿ ಕೈಯಲ್ಲಿ ಕಪ್ಪು ದಾರವನ್ನು ಧರಿಸಿದ್ದರು. ಈ ಜೋಡಿ ಜುಲೈನಲ್ಲಿ ಅದ್ಧೂರಿಯಾಗಿ ಮದುವೆ ಮಾಡಲಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ