ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ದೇವಸ್ಥಾನದೊಳಗೆ ವಿಧ್ವಂಸಕ ಕೃತ್ಯ ನಡೆಸಿರುವುದನ್ನು ಕಾಣಬಹುದು. ತೆಲಂಗಾಣದ ಶಂಶಾಬಾದ್‌ನ ಹನುಮಾನ್ ಮಂದಿರದದಲ್ಲಿ ನಡೆದ ಧ್ವಂಸ ಘಟನೆಗೆ ಕೋಮು ಬಣ್ಣ ಬಳಿದು ಅನೇಕರು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಧ್ವಂಸಕ ಕೃತ್ಯವನ್ನು ಮುಸ್ಲಿಮರು ಮಾಡಿದ್ದಾರೆ ಎಂಬುದು ಕೆಲವರ ಅಭಿಪ್ರಾಯ. ಹಾಗಾದರೆ ಇದು ನಿಜವೇ? ಎಂಬುದು ನೋಡೋಣ.
ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, “ಒಂದು ದೇವಾಲಯದ ಬದಲಿಗೆ ಎರಡು ಮಸೀದಿಗಳನ್ನು ಕೆಡವಿ. ಇವರಿಂದ ಮತ್ತೆ ಆಘಾತಕಾರಿ ವಿಧ್ವಂಸಕ ದಾಳಿಗಳು. ಹೈದರಾಬಾದ್‌ನ ಶಂಶಾಬಾದ್‌ನಲ್ಲಿರುವ ಹಿಂದೂ ದೇವಾಲಯವು ಅಪವಿತ್ರಗೊಂಡಿದೆ. ಹಿಂದೂ ದೇವಾಲಯ ವಿಧ್ವಂಸಕತೆ #ಶಂಶಾಬಾದ್ ಆಕ್ರೋಶ #ಹೈದರಾಬಾದ್ ದೇವಾಲಯ ದಾಳಿ” ಎಂದು ಬರೆದುಕೊಂಡಿದ್ದಾರೆ.
एक मंदिर के बदले 2 मस्जिद तोड़ो 😡😡
Shocking Vandalism Strikes Again: Hindu Temple in Shamshabad, Hyderabad Desecrated.#HinduTempleVandalism #ShamshabadOutrage #HyderabadTempleAttack pic.twitter.com/lQrrRgeXFt
— Dr. Benjamin Netanyahu (Surgeon) (@GemsOfIsrael) November 5, 2024
ಇದೇ ರೀತಿಯ ಕ್ಲೈಮ್‌ಗಳೊಂದಿಗೆ ಈ ವಿಡಿಯೋವನ್ನು ಇತರ ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
एक मंदिर के बदले 2 मस्जिद तोड़ो 😡😡
Shocking Vandalism Strikes Again: Hindu Temple in Shamshabad, Hyderabad Desecrated.#HinduTempleVandalism #ShamshabadOutrage #HyderabadTempleAttack pic.twitter.com/olTxHJJFqr
— विशु पंडित 🇮🇳🚩 (@vishu_hindu08) November 5, 2024
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಹಕ್ಕು ಸುಳ್ಳು ಎಂದು ಕಂಡುಹಿಡಿದಿದೆ. ಈ ಕೃತ್ಯದಲ್ಲಿ ಯಾವುದೇ ಕೋಮು ಕೋವವಿಲ್ಲ. ಈ ಸುದ್ದಿಯ ನಿಜಾಂಶ ತಿಳಿಯಲು ನಾವು ಗೂಗಲ್ನಲ್ಲಿ ಹುಡುಕಿದ್ದೇವೆ. ಆಗ ಸ್ವತಃ ಟಿವಿ9 ಕನ್ನಡ ಈ ಕುರಿತು ಸುದ್ದಿ ಪ್ರಕಟಿಸಿರುವ ನಮಗೆ ಸಿಕ್ಕಿದೆ. ಇದರಲ್ಲಿರುವ ಮಾಹಿತಿ ಪ್ರಕಾರ, ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಂಶಾಬಾದ್‌ನಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಧ್ವಂಸ ಮಾಡಿದ ಘಟನೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಏರ್‌ಪೋರ್ಟ್ ಕಾಲೋನಿಯಲ್ಲಿರುವ ಹನುಮಾನ್ ದೇವಸ್ಥಾನದ ಆಸ್ತಿಗೆ ಹಾನಿಯಾಗಿದೆ. ಅದರಂತೆ ನಾವು ನಮ್ಮ ತಂಡವನ್ನು ನಿಯೋಜಿಸಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು ಎಂದು ಬರೆಯಲಾಗಿದೆ.
ಈ ಘಟನೆಯ ಕುರಿತು ಇನ್ನಷ್ಟು ಸಂಶೋದಿಸಿದಾಗ ನಮಗೆ ಶಂಶಾಬಾದ್‌ನ ಎಸಿಪಿ ಶ್ರೀನಿವಾಸ್ ರಾವ್ ಅವರ ಹೇಳಿಕೆ ಸಿಕ್ಕಿದೆ. ಇವರ ಪ್ರಕಾರ, ಶಂಶಾಬಾದ್‌ನ ಏರ್‌ಪೋರ್ಟ್ ಕಾಲೋನಿಯ ಹನುಮಾನ್ ದೇವಸ್ಥಾನದಲ್ಲಿ ಈ ದೇಗುಲವನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ಇದರಲ್ಲಿ ಶಂಕಿತ ವ್ಯಕ್ತಿಯನ್ನು ಶ್ರೀಪುತ್ರಿ ಲಾಲ್ ಗಣಪತಿ ಸಿಂಗ್ ಅವರ ಮಗ ಕೋರ್ಪಾಲ್ ಎಂದು ಗುರುತಿಸಲಾಗಿದ್ದು, ಆತ ಮಾನಸಿಕ ಅಸ್ವಸ್ಥನಾಗಿದ್ದಾನೆ. ಪ್ರಸ್ತುತ ಪೊಲೀಸ್ ಅಧಿಕಾರಿಗಳು ವಿಧ್ವಂಸಕತೆಯ ಹಿಂದಿನ ಉದ್ದೇಶವನ್ನು ತನಿಖೆ ನಡೆಸುತ್ತಿದ್ದಾರೆ ಮತ್ತು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವಂತಿಲ್ಲ; ಕಠಿಣ ಕಾನೂನು ಜಾರಿಗೊಳಿಸಿದ ಸ್ವಿಟ್ಜರ್ಲ್ಯಾಂಡ್ ಸರ್ಕಾರ
ನ್ಯೂಸ್ 9 ಕೂಡ ಈ ಘಟನೆ ಬಗ್ಗೆ ಸುದ್ದಿ ಪ್ರಕಟಿಸಿದೆ. ‘‘ಸೋಮವಾರ ರಾತ್ರಿ ಹನುಮಾನ್ ದೇಗುಲವನ್ನು ಧ್ವಂಸಗೊಳಿಸಿರುವುದನ್ನು ವಿರೋಧಿಸಿ ನಗರದ ಶಂಶಾಬಾದ್ ಪ್ರದೇಶದಲ್ಲಿ ಬಂದ್ ಆಚರಿಸಲಾಯಿತು. ಹಿಂದೂ ಸಂಘಟನೆಗಳು ಬಸ್ ನಿಲ್ದಾಣದ ಸುತ್ತಲೂ ಪ್ರತಿಭಟನೆ ನಡೆಸಿದವು ಮತ್ತು ಪದೇ ಪದೇ ದೇವಾಲಯ ಧ್ವಂಸಗೊಳಿಸುವ ಘಟನೆಗಳ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒತ್ತಡ ಹೇರಲು ವಾಣಿಜ್ಯ ಸಂಸ್ಥೆಗಳು ತಮ್ಮ ವ್ಯಾಪಾರಿಗಳನ್ನು ಮುಚ್ಚುವಂತೆ ಕೇಳಿಕೊಂಡವು. ದುಷ್ಕರ್ಮಿಗಳು ದೇವಾಲಯದ ದ್ವಾರಗಳನ್ನು ತೆರೆದು ವಿಗ್ರಹವನ್ನು ಕಲ್ಲುಗಳಿಂದ ಹಾನಿಗೊಳಿಸಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶ ಮೂಲದ 50ರ ಹರೆಯದ ಹಿಂದೂ ವ್ಯಕ್ತಿಯನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ’’ ಎಂದು ವರದಿಯಲ್ಲಿದೆ.
ಹೀಗಾಗಿ ಹನುಮಾನ್ ದೇವಸ್ಥಾನದಲ್ಲಿ ನಡೆದ ಧ್ವಂಸ ಘಟನೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಕೋಮು ಬಣ್ಣ ನೀಡಿ ಶೇರ್ ಮಾಡಿರುವುದು ಟಿವಿ9 ಕನ್ನಡ ಫ್ಯಾಕ್ಟ್ ಚೆಕ್ನಿಂದ ಸ್ಪಷ್ಟವಾಗಿದೆ. ಘಟನೆಯಲ್ಲಿ ಶಂಕಿತ ಕೋರ್ಪಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು ಈತ ಹಿಂದೂ ಆಗಿದ್ದಾನೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ