Viral Video: ಲತಾ ಮಂಗೇಶ್ಕರ್​ ಹಾಡನ್ನು ಹಾಡಿ ನೆಟ್ಟಿಗರ ಮನಗೆದ್ದ ತಂದೆ ಮಗಳ ಜೋಡಿ

ಲತಾ ಮಂಗೇಶ್ಕರ್​ ಮತ್ತು ಕಿಶೋರ್​ ಕುಮಾರ್​ ಅವರು ಹಾಡಿದ Tere Mere Milan Ki Yeh Raine ಹಾಡನ್ನು ತಂದೆ ಮಗಳ ಜೋಡಿಯೊಂದು ಹಾಡಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Viral Video: ಲತಾ ಮಂಗೇಶ್ಕರ್​ ಹಾಡನ್ನು ಹಾಡಿ ನೆಟ್ಟಿಗರ ಮನಗೆದ್ದ ತಂದೆ ಮಗಳ ಜೋಡಿ
ತಂದೆ ಮಗಳು
Updated By: Pavitra Bhat Jigalemane

Updated on: Mar 09, 2022 | 10:17 AM

ಹಾಡುಗಾರರು ಭೌತಿಕವಾಗಿ ಪ್ರಪಂಚವನ್ನು ತೊರೆದರೂ ಅವರ ಕಂಠದಲ್ಲಿ ಮೂಡಿ ಬಂದ ಒಂದಷ್ಟು ಹಾಡುಗಳು ಕೇಳುಗರಿಗೆ ಮುದ ನೀಡುತ್ತಲೇ ಇರುತ್ತವೆ.  ಅದೆಷ್ಟೂ ಮರೆಯಲಾಗದ ಹಾಡುಗಳನ್ನು ನೀಡಿ ಕಲಾವಿದರು ಮರೆಯಾಗಿದ್ದಾರೆ. ಅವರಲ್ಲಿ ಇತ್ತೀಚೆಗೆ ಮರೆಯಾದ ಭಾರತ ರತ್ನ ಲತಾ ಮಂಗೇಶ್ಕರ್​ ಕೂಡ ಒಬ್ಬರು. ಗಾನ ಕೋಗಿಲೆ ಎಂದೇ ಖ್ಯಾತಿಗಳಿಸಿದ್ದ ಅವರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಹಾಡುಗಳು ಮಾತ್ರ ಎಲ್ಲರನ್ನೂ ಖುಷಿಗೊಳಿಸುತ್ತವೆ. ಇದೀಗ ಲತಾ ಮಂಗೇಶ್ಕರ್​ ಮತ್ತು ಕಿಶೋರ್​ ಕುಮಾರ್​ ಅವರು ಹಾಡಿದ Tere Mere Milan Ki Yeh Raine ಹಾಡನ್ನು ತಂದೆ ಮಗಳ ಜೋಡಿಯೊಂದು ಹಾಡಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

 


ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ತಂದೆ ಮಗಳ ಹಾಡನ್ನು ಕೇಳಿ ಕಿವಿಗಳು ಪಾವನವಾಯಿತು ಎಂದು ಕಾಮೆಂಟ್​ ಮಾಡಿದ್ದಾರೆ. ವಿಡಿಯೋದಲ್ಲಿ ಮೊದಲು ಯುವತಿ ಹಾಡನ್ನು ಆರಂಭ ಮಾಡಿದ್ದು, ನಂತರ ಆಕೆಯ ತಂದೆ ಜತೆಯಾಗಿದ್ದಾರೆ. 1973ರಲ್ಲಿ ಬಿಡುಗಡೆಯಾದ ಅಭಿಮಾನ್​ ಚಿತ್ರದ ಹಾಡು ಇದಾಗಿದೆ. ಗಿಟಾರ್​ ನುಡಿಸುತ್ತಾ ತಂದೆ ಮಗಳು ಹಾಡನ್ನು ಹಾಡಿದ್ದಾರೆ.

ಜೂಹಿ ಸಿಂಗ್​ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ ವಿಡಿಯೋ ಹಂಚಿಕೊಂಡಿದ್ದು, 25 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಸದ್ಯ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚಿಕೊಂಡು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ಮಿಲಿಟರಿ ಚೆಕ್​ಪಾಯಿಂಟ್​ನಲ್ಲಿ ಮಂಡಿಯೂರಿ ಯುವತಿಗೆ ಪ್ರಪೋಸ್​ ಮಾಡಿದ ಉಕ್ರೇನ್​ ಸೈನಿಕ: ವಿಡಿಯೋ ವೈರಲ್​

Published On - 10:14 am, Wed, 9 March 22