Father Son: ‘ನನಗೀಗ ಇಪ್ಪತ್ತು ವರ್ಷ. ಕಳೆದ ವರ್ಷ ಇದ್ದಕ್ಕಿದ್ದ ಹಾಗೆ ಹಸಿವು ಮಾಯವಾಯಿತು. ಬರುಬರುತ್ತ ಉಸಿರಾಡುವುದೂ ಕಷ್ಟವೆನ್ನಿಸತೊಡಗಿತು. ಆಗ ವೈದ್ಯರು ಕೆಲ ಪರೀಕ್ಷೆಗಳನ್ನು ಮಾಡಿದ ಮೇಲೆ ತೀವ್ರತರವಾದ ಕಿಡ್ನಿ ಸಮಸ್ಯೆ ಇದೆ ಎಂದರು. ವಾರದಲ್ಲಿ ಎರಡು ಸಲ ಡಯಲಾಸಿಸ್ಗೆ ಒಳಗಾಗಬೇಕಾಯಿತು. ಕಿಡ್ನಿ ಕಸಿ (Kidney Transplant) ಮಾಡದಿದ್ದರೆ ಬದುಕುಳಿಯುವುದು ಕಷ್ಟ ಎಂದರು. ಆಗ ನನ್ನ ಅಪ್ಪ, ನಾನು ಕಿಡ್ನಿ ಕೊಡುತ್ತೇನೆ ಎಂದರು. ಅವರು ಕಿಡ್ನಿ ಕೊಡಲು ಅಡ್ಡಿಯಿಲ್ಲ ಎಂದು ವೈದ್ಯರು ಹೇಳಿದರು. ಇಬ್ಬರೂ ಶಸ್ತ್ರಚಿಕಿತ್ಸೆಗೆ ಒಳಗಾದೆವು. ಕೆಲ ತಿಂಗಳುಗಳ ನಂತರ ಇಬ್ಬರೂ ಸುಧಾರಿಸಿಕೊಂಡೆವು. ಈಗ ನನ್ನ ಮತ್ತು ಅಪ್ಪನ ಬಂಧ ಎಂದಿಗಿಂತಲೂ ಗಟ್ಟಿಯಾಗಿದೆ.’ ಹರ್ಷ ಗುಪ್ತಾ
ಇದನ್ನೂ ಓದಿ : Viral Video: ರಸ್ತೆಬದಿ ತರಕಾರಿ ಮಾರಲು ಔಡಿ ಎ4 ಕಾರಿನಲ್ಲಿ ಬರುವ ಕೇರಳದ ರೈತ
2 ದಿನಗಳ ಹಿಂದೆ ಇನ್ಸ್ಟಾಗ್ರಾಂನ officialpeopleofindia ಪುಟದಲ್ಲಿ ಈ ಪೋಸ್ಟ್ ಮಾಡಲಾಗಿದೆ. ಈತನಕ ಎರಡು ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 1.8 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಅಪ್ಪ ಮಗನ ಆರೋಗ್ಯ ಸುಧಾರಿಸಲಿ, ಈ ಬಂಧ ಗಟ್ಟಿಯಾಗಿರಲಿ ಎಂದು ಹಾರೈಸಿದ್ದಾರೆ.
ನಿಮ್ಮ ಯೋಗಕ್ಷೇಮಕ್ಕಾಗಿ ಬೇಷರತ್ತಾಗಿ ತ್ಯಾಗ ಮಾಡುವವರು ನಿಮ್ಮ ಪೋಷಕರು ಮಾತ್ರ. ಇದನ್ನು ಸಾಬೀತುಪಡಿಸಿದ ನಿಮ್ಮ ತಂದೆಗೆ ನಮಸ್ಕಾರ ಎಂದಿದ್ಧಾರೆ ಒಬ್ಬರು. ತನ್ನ ಮಕ್ಕಳನ್ನು ರಕ್ಷಿಸಲು ತಂದೆ ಏನು ಬೇಕಾದರೂ ಮಾಡುತ್ತಾರೆ ಎಂದಿದ್ದಾರೆ ಇನ್ನೊಬ್ಬರು. ತಾಯಿ ಜನ್ಮ ನೀಡುತ್ತಾಳೆ ತಂದೆ ಜೀವನವನ್ನು ನೀಡುತ್ತಾರೆ ಎಂದಿದ್ದಾರೆ ಮತ್ತೊಬ್ಬರು. ದಾನಿಗಳು ದೇವರಿಗೆ ಸಮಾನ ಎಂದಿದ್ದಾರೆ ಮಗದೊಬ್ಬರು. ಹೆತ್ತವರು ತೋರುವ ಪ್ರೀತಿ ಮಾತ್ರ ಶಾಶ್ವತ ಎಂದಿದ್ದಾರೆ ಮಗದೊಬ್ಬರು. ನನ್ನ ತಂದೆ ಕೂಡ 2020ರಲ್ಲಿ ನನಗೆ ಕಿಡ್ನಿ ದಾನ ಮಾಡಿ ನನ್ನನ್ನು ಉಳಿಸಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ಧಾರೆ. ಈ ವಿಡಿಯೋ ನೋಡಿ ನಾನು ಬಿಕ್ಕುತ್ತಿದ್ದೇನೆ ಎಂದಿದ್ದಾರೆ ಇನ್ನೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ