Viral Video: ಬೇಸ್​ಬಾಲ್​ ಆಟದಲ್ಲಿ ಚೆಂಡು​ ಹಿಡಿಯೋಕ್​ ಹೋಗಿ ಎತ್ತಿಕೊಂಡಿದ್ದ ಚಿಕ್ಕ ಮಗುವನ್ನೇ ಬಿಟ್ಟುಬಿಡ್ತಾರಾ ಅಪ್ಪ? ಮುಂದೆನಾಯ್ತು ವಿಡಿಯೋ ನೋಡಿ

ತಂದೆ ಒಂದು ಕೈಯಲ್ಲಿ ಬಿಯರ್​ ಗ್ಲಾಸ್​ ಹಿಡಿದುಕೊಂಡಿದ್ದಾರೆ. ಇನ್ನೊಂದು ಕೈಯಲ್ಲಿ ಮಗುವನ್ನು ಎತ್ತಿಕೊಂಡಿದ್ದಾರೆ. ತಕ್ಷಣವೇ ಅವರಿದ್ದ ಸ್ಥಳಕ್ಕೆ ಚೆಂಡು ಹಾರಿ ಬಂದಿದೆ. ಉತ್ಸಾಹದಲ್ಲಿದ್ದ ಅವರು ಚೆಂಡು ಹಿಡಿಯಲು ಎದ್ದು ನಿಂತಿದ್ದಾರೆ. ಮಗುವನ್ನು ಬಿಟ್ಟು ಚೆಂಡು ಹಿಡಿದಿದ್ದಾರೆ.

Viral Video: ಬೇಸ್​ಬಾಲ್​ ಆಟದಲ್ಲಿ ಚೆಂಡು​ ಹಿಡಿಯೋಕ್​ ಹೋಗಿ ಎತ್ತಿಕೊಂಡಿದ್ದ ಚಿಕ್ಕ ಮಗುವನ್ನೇ ಬಿಟ್ಟುಬಿಡ್ತಾರಾ ಅಪ್ಪ? ಮುಂದೆನಾಯ್ತು ವಿಡಿಯೋ ನೋಡಿ
ಬೇಸ್​ಬಾಲ್​ ಆಟದಲ್ಲಿ ಚೆಂಡು​ ಹಿಡಿಯೋಕ್​ ಹೋಗಿ ಎತ್ತಿಕೊಂಡಿದ್ದ ಚಿಕ್ಕ ಮಗುವನ್ನೇ ಬಿಟ್ಟುಬಿಡ್ತಾರಾ ಅಪ್ಪ?
Updated By: shruti hegde

Updated on: Jul 08, 2021 | 9:50 AM

ಬೇಸ್​ಬಾಲ್​ ಪಂದ್ಯ ಕೊನೆ ಕ್ಷಣದಲ್ಲಿ ಪ್ರೇಕ್ಷಕರಿಗೆ ಕುತೂಹಲ ಮೂಡಿಸುತ್ತಿತ್ತು. ಯಾವ ಪಂದ್ಯ ಗೆಲ್ಲುತ್ತೆ ಎಂಬ ನಿರೀಕ್ಷೆಯಲ್ಲಿ ಎಲ್ಲರೂ ಕಾದು ಕುಳಿತಿದ್ದರು.ಅರಿಜೋನಾದ ಫಿನಿಕ್ಸ್​​ನಲ್ಲಿ ಭಾನುವಾರ ಆಟ ನಡೆಯುತ್ತಿತ್ತು. ಪ್ರೇಕ್ಷಕರೊಬ್ಬರು ತನ್ನ ಚಿಕ್ಕ ಮಗುವನ್ನು ಎತ್ತಿಕೊಂಡು ಬಹಳ ಉತ್ಸುಕರಾಗಿ ಆಟ ನೋಡುತ್ತಿದ್ದರು. ಅದಾಗ ಚೆಂಡು ಅವರಲ್ಲಿಯೇ ಬಂದಿದೆ ಉತ್ಸಾಹದಲ್ಲಿದ್ದ ಅವರು ಚೆಂಡನ್ನು ಹಿಡಿಯಲು ಹೋಗಿ ಮಗುವನ್ನೇ ಬಿಟ್ಟು ಬಿಡುತ್ತಾರೆ. ವಿಡಿಯೋ ಒಮ್ಮೆಲೆ ಭಯಂಕರ ಅನಿಸಿದರೂ ಸಹ ಕೊನೆ ಕ್ಷಣದಲ್ಲಿ ಸಮಾಧಾನವಾಗುತ್ತೆ! ಮುಂದೇನಾಯ್ತು.. ವಿಡಿಯೋ ಇದೆ ನೀವೇ ನೋಡಿ.

ತಂದೆ ಒಂದು ಕೈಯಲ್ಲಿ ಬಿಯರ್​ ಗ್ಲಾಸ್​ ಹಿಡಿದುಕೊಂಡಿದ್ದಾರೆ. ಇನ್ನೊಂದು ಕೈಯಲ್ಲಿ ಮಗುವನ್ನು ಎತ್ತಿಕೊಂಡಿದ್ದಾರೆ. ತಕ್ಷಣವೇ ಅವರಿದ್ದ ಸ್ಥಳಕ್ಕೆ ಚೆಂಡು ಹಾರಿ ಬಂದಿದೆ. ಉತ್ಸಾಹದಲ್ಲಿದ್ದ ಅವರು ಚೆಂಡು ಹಿಡಿಯಲು ಎದ್ದು ನಿಂತಿದ್ದಾರೆ. ಮಗುವನ್ನು ಬಿಟ್ಟು ಚೆಂಡು ಹಿಡಿದಿದ್ದಾರೆ. ತಡ ಮಾಡದೇ ಮಗುವನ್ನೂ ಸಹ ಬೀಳಿಸಲು ಕೊಡದೇ ಬ್ಯಾಲೆನ್ಸ್​ ಮಾಡಿದ್ದಾರೆ. ಮತ್ತೊಂದು ಕೈಯಲ್ಲಿದ್ದ ಬಿಯಲ್​ ಗ್ಲಾಸ್​ಅನ್ನು ಕೂಡಾ ಅವರು ಬಿಡಲು ತಯಾರೇ ಇಲ್ಲ! ವಿಡಿಯೋ ನೋಡಿದಾಕ್ಷಣ ಒಮ್ಮೆಲೆ ಮೈ ಜುಂ.. ಅನ್ನುವುದಂತೂ ಸತ್ಯ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆ ಪುಟ್ಟ ಮಗುವಿಗಿಂತ ಚೆಂಡು ಹಿಡಿಯುವುದೇ ಅವರಿಗೆ ಮುಖ್ಯವಾಗಿತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಯಲ್ಲಿ ಬಿಯಲ್ ಬಾಟಲ್​ ಕೂಡಾ ಅವರು ಬಿಡಲು ತಯಾರಿಲ್ವಲ್ಲಾ! ಎಂದು ಇನ್ನು ಕೆಲವರು ಆಶ್ಚರ್ಯಗೊಂಡಿದ್ದಾರೆ.

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. 12 ಸೆಕೆಂಡೆಗಳ ಕ್ಲಿಪ್​ ಇದೀಗ ವೈರಲ್​ ಆಗಿದೆ. ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಆಟ ಅಂದಾಕ್ಷಣ ಉತ್ಸಾಹ ಇರಬೇಕು, ಆದರೆ ಇಷ್ಟರ ಮಟ್ಟಿಗಲ್ಲ ಎಂದು ಓರ್ವರು ಹೇಳಿದ್ದಾರೆ. ನಿಮ್ಮ ಮಗುವಿಗಿಂತ ನಿಮಗೆ ಬೇಸ್​ಬಾಲ್​ ಮುಖ್ಯವಾದುದೆ? ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಇದನ್ನೂ ಓದಿ:

Viral Video: ಸಿಪಿಆರ್ ಮೂಲಕ ಕಪ್ಪೆಯನ್ನು ಬದುಕಿಸಲು ಹರಸಾಹಸ ಪಡುತ್ತಿರುವ ಮಹಿಳೆ! ಮುಂದೆನಾಯ್ತು? ವಿಡಿಯೋ ನೋಡಿ​

Viral Video: ಜೀಪು ವೇಗವಾಗಿ ಚಲಿಸುತ್ತಿರುವಾಗಲೇ ರಸ್ತೆಗಿಳಿಯುವ ದುಸ್ಸಾಹಸ! ಶಾಂಕಿಂಗ್​ ವಿಡಿಯೋ ನೋಡಿ

Published On - 9:48 am, Thu, 8 July 21