Viral Video: ಪುಟ್ಟ ಕಂದಮ್ಮನನ್ನು ರಂಜಿಸಲು ಅಪ್ಪ ನುಡಿಸಿದ ಗಿಟಾರ್ ವಾದ್ಯ; ನೀವೂ ಕೇಳಿ ಆನಂದಿಸಿ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲವು ವಿಡಿಯೋಗಳಂತೂ ಮನಸ್ಸಿಗೆ ಭಾರೀ ಇಷ್ಟವಾಗಿ ಪದೇ ಪದೇ ನೋಡಬೇಕು ಅನಿಸುತ್ತದೆ. ಅಂಥಹುದೇ ಒಂದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

Viral Video: ಪುಟ್ಟ ಕಂದಮ್ಮನನ್ನು ರಂಜಿಸಲು ಅಪ್ಪ ನುಡಿಸಿದ ಗಿಟಾರ್ ವಾದ್ಯ; ನೀವೂ ಕೇಳಿ ಆನಂದಿಸಿ
ಮಗುವನ್ನು ರಂಜಿಸಲು ಅಪ್ಪ ಗಿಟಾರ್ ನುಡಿಸುತ್ತಿರುವ ದೃಶ್ಯ
Updated By: shruti hegde

Updated on: Oct 06, 2021 | 10:16 AM

ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಅಪ್ಪ, ಮಗನ ನಡುವಿನ ಬಾಂಧವ್ಯದ ಸುಂದರ ವಿಡಿಯೋಗಳನ್ನು ನೋಡಿರಬಹುದು. ಅವುಗಳಲ್ಲಿ ಕೆಲವು ವಿಡಿಯೋಗಳು ಮನಸ್ಸಿಗೆ ತುಂಬಾ ಇಷ್ಟವಾಗುತ್ತವೆ. ಇನ್ನು ಕೆಲವು ವಿಡಿಯೋಗಳಂತೂ ಮನಸ್ಸಿಗೆ ಭಾರೀ ಇಷ್ಟವಾಗಿ ಪದೇ ಪದೇ ನೋಡಬೇಕು ಅನಿಸುತ್ತದೆ. ಅಂಥಹುದೇ ಒಂದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಮಗುವನ್ನು ರಂಜಿಸಲು ಅಪ್ಪ ಹಾಡು ಹೇಳುತ್ತಾ ಗಿಟಾರ್ ನುಡಿಸುತ್ತಿದ್ದಾರೆ. ಹೃದಯಸ್ಪರ್ಶಿ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ವಿಡಿಯೋದಲ್ಲಿ ಗಮನಿಸುವಂತೆ ಅಪ್ಪನ ಭುಜದ ಮೇಲೆ ಪುಟ್ಟ ಮಗು ಮಲಗಿದೆ. ಅಪ್ಪ ಸುಂದರವಾಗಿ ಗಿಟಾರ್ ನುಡಿಸುವುದನ್ನು ಆನಂದಿಸುತ್ತಿದೆ. ಹಾಡು ಹೇಳುತ್ತಿದ್ದಂತೆಯೇ ಕೈ ಬೆರಳುಗಳನ್ನು ಅಲುಗಾಡಿಸುತ್ತಾ ತನ್ನ ಖುಷಿಯನ್ನು ಹೊರಹಾಕುತ್ತಿದೆ. ಯಾವುದೇ ಗಲಾಟೆ ಮಾಡದೇ ಸುಮ್ಮನೆ ಕುಳಿತ ಮಗು, ಅಪ್ಪ ಗಿಟಾರ್ ನುಡಿಸುವುದನ್ನು ಇಷ್ಟಪಟ್ಟಿದೆ.

ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕೆಲವರಿಗೆ ವಿಡಿಯೋ ತುಂಬಾ ಇಷ್ಟವಾಗಿದ್ದು ಮನಗೆದ್ದ ದೃಶ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮೊದಲಿಗೆ ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಬಳಿಕ ಇತರ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದೀಗ ವಿಡಿಯೋ ಫುಲ್ ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದಿದೆ.

ಅಕ್ಟೋಬರ್ 5ರಂದು ಟ್ವಿಟರ್​ನಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇಲ್ಲಿಯವರೆಗೆ ಸುಮಾರು 300ಕ್ಕೂ ಹೆಚ್ಚು ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ. 14 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮನಸ್ಸಿಗೆ ಇಷ್ಟವಾಗುವಂತಹ ವಿಡಿಯೋ ಹಂಚಿಕೊಂಡಿದ್ದಕ್ಕೆ ಕೆಲವರು ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ:

Viral Video: ತಲೆ ಕೂದಲನ್ನು ಹೀಗೂ ಕತ್ತರಿಸಬಹುದು; ಒಮ್ಮೆ ನೋಡಿ ಬಿಡಿ

Viral Video: ಕತ್ತೆಯನ್ನು ಅಪ್ಪಿಕೊಂಡು ಲಾಲಿ ಹಾಡಿ ಮಲಗಿಸಿದ ವ್ಯಕ್ತಿ; ಹೃದಯಸ್ಪರ್ಶಿ ಈ ವಿಡಿಯೋವನ್ನು ನೋಡಿದ್ದೀರಾ?