ಉಕ್ರೇನ್ (Ukraine) ರಷ್ಯಾ (Russia) ನಡುವೆ ಯುದ್ಧ ಆರಂಭವಾಗಿದೆ. ಈಗಾಗಲೆ ರಷ್ಯಾಕ್ಕೆ ಸಮವಾಗಿ ದಾಳಿ ನೀಡುತ್ತಿರುವ ಉಕ್ರೇನ್ನ ನಾಗರಿಕರ ಪರಿಸ್ಥಿತಿ ಹದಗೆಟ್ಟಿದೆ. ಜನ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಬಾಂಬ್, ಕ್ಷಿಪಣಿ ದಾಳಿಗಳ ಭಯದಿಂದ ಅಂಡರ್ ಗ್ರೌಂಡ್ನಲ್ಲಿ ಜನ ಅಡಗಿಕುಳಿತುಕೊಳ್ಳುತ್ತಿದ್ದಾರೆ. ಉಕ್ರೇನ್ನಲ್ಲಿ ಈಗಾಗಲೇ 137 ಜನರ ದುರ್ಮರಣವಾಗಿದೆ. ಎಲ್ಲೆಂದರಲ್ಲಿ ದಾಳಿಗಳು ನಡೆದು ಜನ ಛಿದ್ರ ಛಿದ್ರವಾಗಿ ಸಾವನ್ನಪ್ಪುತ್ತಿದ್ದಾರೆ. ಈ ರೀತಿಯ ಭಯ ಹುಟ್ಟಿಸುವ ದೃಶ್ಯಗಳು ಉಕ್ರೇನ್ನಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ನಡುವೆ ಜೀವ ಉಳಸಿಕೊಳ್ಳಲು ಮಗಳನ್ನು ಸುರಕ್ಷಿತ ತಾಣಕ್ಕೆ ಕಳುಹಿಸುವ ತಂದೆ ಮಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿರುವ ಉಕ್ರೇನ್ ಪರಿಸ್ಥತಿಯಿಂದ ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿ ಯುದ್ಧಕ್ಕೆ ಕಳುಹಿಸಲಾಗುತ್ತಿದೆ. ಈ ಸಂದರ್ಭದ ಕೆಲವು ದೃಶ್ಯಗಳು ನಿಜಕ್ಕೂ ಮನಕರಗುವಂತಿದೆ.
UNBEARABLE. ? A Ukrainian father says goodbye to his family as he sends them to a safe zone and prepares to stay back and fight. (via straightoutathesixtv) #RussiaUkraineConflict pic.twitter.com/M7logpDlNS
— Josh Benson (@WFLAJosh) February 24, 2022
ಸದ್ಯ ವೈರಲ್ ಆದ ವಿಡಿಯೋದಲ್ಲಿ ತಂದೆಯೊಬ್ಬ ತನ್ನ ಮಗಳನ್ನು ಸುರಕ್ಷಿತ ಜಾಗಕ್ಕೆ ಕಳುಹಿಸಿ ತಾನು ದೇಶಕ್ಕಾಗಿ ಯುದ್ಧದಲ್ಲಿ ತೊಡಗಿಗೊಳ್ಳಲು ತಯಾರಿ ನಡೆಸಿದ್ದಾರೆ. ಮಗಳಿಗೆ ಬಿಳಿ ಟೋಪಿ ತೊಡಿಸಿ ಪ್ರೀತಿಯಿಂದ, ಕಣ್ಣೀರಿಡುತ್ತಾ ಕಳುಹಿಸಿಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಭಾವುಕ ವಿಡಿಯೋ ನೋಡಿ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ಸ್ಥಿತಿ ಕಂಡು ಮರುಗಿದ್ದಾರೆ.
ವರದಿಯ ಪ್ರಕಾರ ಯುದ್ಧದಿಂದ ತತ್ತರಿಸಿದ ಉಕ್ರೇನ್ ಜನತೆ ಹಣ, ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಉಕ್ರೇನ್ ಸರ್ಕಾರ ಕೂಡ ದೇಶದ ಪರವಾಗಿ ಹೋರಾಡಲು ಸಿದ್ಧರಿರುವ ನಾಗರಿಕರಿಗೆ ಶಸ್ತ್ರಾಸ್ತ್ರ ನೀಡುವುದಾಗಿ ಹೇಳಿದೆ. ಹೀಗಾಗಿ ಉಕ್ರೇನ್ನ ನೂರಾರು ನಾಗರಿಕರು ದೇಶಕ್ಕಾಗಿ ಮಡದಿ, ಮಕ್ಕಳು, ಕುಟುಂಬವನ್ನು ತೊರೆದು ಯುದ್ಧಕ್ಕೆ ತಯಾರಾಗಿದ್ದಾರೆ.
ಇದನ್ನೂ ಓದಿ:
Published On - 9:45 am, Fri, 25 February 22