‘ಬೆಕ್ಕನ್ನು ಹುಡುಕಲು ಹೋಗಿ ತಲೆತಿರುಗಿತು, ಅಷ್ಟರಲ್ಲಿ ಬೆಕ್ಕು ಓಡಿಹೋಯಿತು’ ಹೌದೆ?

Viral Brain Teaser : ಗುಲಾಬಿ ಹಿಜಾಬ್​ ಮತ್ತು ಗುಲಾಬಿ ಹೆಡ್​ಬ್ಯಾಂಡ್​ ಧರಿಸಿರುವ ಯುವತಿಯರ ಮಧ್ಯೆ ಬೆಕ್ಕು ಅಡಗಿದೆ ಎನ್ನುತ್ತಿದ್ದಾರೆ ನೆಟ್ಟಿಗರೆಲ್ಲ. ಇವರು ಸುಮ್ಮನೇ ಹೇಳುತ್ತಿದ್ದಾರೋ, ನಿಜವೋ? ಸಮಯದ ಮಿತಿ ಏನೂ ಇಲ್ಲ, ಹುಡುಕಿ ನೋಡಿ.

ಬೆಕ್ಕನ್ನು ಹುಡುಕಲು ಹೋಗಿ ತಲೆತಿರುಗಿತು, ಅಷ್ಟರಲ್ಲಿ ಬೆಕ್ಕು ಓಡಿಹೋಯಿತು ಹೌದೆ?
ಇಲ್ಲಿ ಬೆಕ್ಕನ್ನು ಹುಡುಕಿ

Updated on: May 10, 2023 | 2:44 PM

Viral Brain Teaser : ಇಲ್ಲಿ ಕಿಕ್ಕಿರಿದಿರುವ ಜನರನ್ನು ನೋಡಿ. ಇವರ ಮಧ್ಯೆ ಎಲ್ಲೋ ಒಂದು ಬೆಕ್ಕು ಅಡಗಿ ಕುಳಿತಿದೆ. ನಿಮ್ಮ ಕಣ್ಣಿಗೇನಾದರೂ ಬೀಳಬಹುದಾ ನೋಡಿ. ನಳಪಾಕ ತಜ್ಞ ಕುನಾಲ್ ಕಪೂರ್ ಈ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನೂರಾರು ಜನರು, ಹಾಂ ನನಗೆ ಸಿಕ್ಕಿತು ಎಂದು ಹೇಳುತ್ತಿದ್ದಾರೆ. ಉತ್ತರ ಗೊತ್ತಾಗಿದೆ ಪ್ರತಿಕ್ರಿಯಿಸಲಾ ಎಂದು ಕೇಳುತ್ತಿದ್ದಾರೆ. ಸಾಕಷ್ಟು ಜನ ಹಿಜಾಬ್ ಧರಿಸಿದಾಕೆಯ ಕಂಕುಳಲ್ಲಿದೆ ಎಂದು ಹೇಳುತ್ತಿದ್ದಾರೆ!? ನೀವೇನಂತೀರಿ?

ನಿನ್ನೆ ಹಂಚಿಕೊಂಡ ಈ ಪೋಸ್ಟ್​ ಅನ್ನು ಈಗಾಗಲೇ ಸುಮಾರು 42,000 ಜನರು ಇಷ್ಟಪಟ್ಟಿದ್ಧಾರೆ. ಉತ್ತರ ಗೊತ್ತು ಎಂದೇ ಹೇಳುತ್ತಿದ್ದಾರೆ ವಿನಾ ನಿಖರವಾಗಿ ಯಾರೂ ಉತ್ತರವನ್ನು ಹೇಳುತ್ತಿಲ್ಲ. ಈ ಬ್ರೇನ್​ ಟೀಸರ್​ಗಳು ಹೀಗೇ. ನಿಮ್ಮ ಮೆದುಳಿಗೇ ಕೈ ಹಾಕುವಂಥವು. ಹುಡುಕುತ್ತಿರುವುದು ಎದುರಿಗೇ ಇದ್ದರೂ ನಿಮ್ಮ ಕಣ್ಣಿಗೆ ಕಾಣಿಸದು. ಅಂಥ ಚಾಕಚಕ್ಯತೆಯಿಂದ ಈ ಚಿತ್ರಗಳನ್ನು ರಚಿಸಿರುತ್ತಾರೆ.

ಇದನ್ನೂ ಓದಿ : 5 ಅಡಿ ಮೊಸಳೆಯನ್ನು ನುಂಗಿದ್ದ ಹೆಬ್ಬಾವಿನ ವಿಡಿಯೋ ವೈರಲ್

ಚಾಟ್​ ಜಿಪಿಟಿಗೆ ಕೇಳಿ ಹೇಳುತ್ತೇನೆ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಗುಲಾಬಿ ಬಣ್ಣದ ಹಿಜಾಬ್​ ಮತ್ತು ಗುಲಾಬಿ ಬಣ್ಣದ ಹೇರ್​ಬ್ಯಾಂಡ್​ ಧರಿಸಿರುವ ಯುವತಿಯರ ಮಧ್ಯೆ ಇದೆ ಎಂದು ಹೇಳುತ್ತಿದ್ದಾರೆ. ಕೊನೆಗೂ ನನಗೆ ಸಿಕ್ಕಿತು, ಬೆಕ್ಕನ್ನು ಹುಡುಕಲು 52 ಸೆಕೆಂಡುಗಳನ್ನು ತೆಗೆದುಕೊಂಡೆ ಎಂದು ಒಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ಹೇ ಬೆಕ್ಕೇಶ್ವರಿ, ಮೊಬೈಲ್​ ಟವರ್​ ಏರುವಂಥ ಸೆಳೆತ ಅಲ್ಲೇನಿತ್ತು?

ಬಿಳಿ ಮತ್ತು ಬೂದು ಬಣ್ಣದ ಬೆಕ್ಕನ್ನು ನಾನು ನೋಡಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಹುಡುಕಿ ಹುಡುಕಿ ತಲೆ ತಿರುಗಿತು, ಅಷ್ಟರಲ್ಲಿ ಬೆಕ್ಕು ಓಡಿ ಹೋಯಿತು ಎಂದು ಇನ್ನೂ ಒಬ್ಬರು ತಮಾಷೆ ಮಾಡಿದ್ದಾರೆ.

ಒಟ್ಟಿನಲ್ಲಿ ನಿಮಗೆ ಬೆಕ್ಕು ಸಿಕ್ಕಿತಾ ಇಲ್ಲವಾ? ಹೇಳಿ.

ಮತ್ತಷ್ಟೂ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:44 pm, Wed, 10 May 23