ಪ್ರಾಣಿಗಳ ಮಳೆ ಬೀಳುವುದನ್ನು ಈವರೆಗೆ ಕೇಳಿದ್ದೇವೆ. ಅದರೆ ಟೆಕ್ಸಾಸ್ನ ಟೆಕ್ಸಾರ್ಕನಾ ಸಿಟಿಯಲ್ಲಿ ಮೀನಿನಮಳೆ ಸುರಿದ ಘಟನೆ ವರದಿಯಾಗಿದೆ. ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಸಿಎನ್ಬಿಸಿ ಈ ಕುರಿತು ವರದಿ ಮಾಡಿದೆ. ಟೆಕ್ಸಾಸ್ ಬಳಿ ಕಳೆದ ಎರಡು ದಿನಗಳ ಹಿಂದೆ ಭಾರಿ ಮಳೆ ಸುರಿದಿತ್ತು. ಈ ವೇಳೆ ಮಳೆಯ ನೀರನ ಜತೆಗೆ ಆಕಾಶದಿಂದ ಮೀನೂಗಳು ಬಿದ್ದಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಕುರಿತು ಹಲವರು ವೀಡಿಯೋಗಳನ್ನೂ ಹಂಚಿಕೊಂಡಿದ್ದಾರೆ.
ವೀಡಿಯೋ ಟ್ವಿಟರ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ಇದು ಹೇಗೆ ಸಾಧ್ಯ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನ್ಯಾಷನಲ್ ಜಿಯೋಗ್ರಫಿಯ ಪ್ರಕಾರ ಭಾರೀ ಪ್ರವಾಹದ ವೇಳೆ ಪುಟ್ಟ ಜೀವಿಗಳು ಮುಳುಗಿ ಹೋಗುತ್ತವೆ. ನಂತರ ಬಲವಾದ ಗಾಳಿ ಬೀಸಿ ಮಳೆ ಬಂದಾಗ ಆಳದಲ್ಲಿರುವ ಜೀವಿಗಳು ಮೇಲೆ ಬಂದು ಮಳೆಯಂತೆ ಬೀಳುತ್ತವೆ ಎಂದು ಹೇಳಲಾಗಿದೆ.
Yep. It rained fish at my house too. pic.twitter.com/NRfT8veXT9
— C’mill™️ (@camillecwarren) December 30, 2021
ಮೀನುಗಳ ಮಳೆ ಬೀಳುತ್ತಿರುವುದು ಇದೇ ಮೊದಲೇನಲ್ಲ 2017ರಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಪ್ರಾಥಮಿಕ ಶಾಲೆಯೊಂದರ ಮೇಲೆ ನೂರಾರು ಮೀನುಗಳು ಮಳೆಯಂತೆ ಬಿದ್ದ ಘಟನೆ ವರದಿಯಾಗಿತ್ತು. ಅಲ್ಲದೆ ಕಪ್ಪೆಗಳ ಮಳೆ ಬಿದ್ದಿದ್ದರ ಬಗ್ಗೆಯೂ ಈ ಹಿಂದೆ ವರದಿಯಾಗಿತ್ತು. ಇದೀಗ ಮೀನಿನ ಮಳೆ ಟೆಕ್ಸಾಸ್ ಜನತೆಯನ್ನು ಅಚ್ಚರಿಗೊಳಿಸಿದೆ. 4ರಿಂದ 5 ಇಂಚಿನ ಬಿಳಿ ಬಣ್ಣದ ಮೀನುಗಳು ದಾರಿಯ ಮಧ್ಯೆ ಅಲ್ಲಲ್ಲಿ ಬಿದ್ದಿರುವುದನ್ನು ಕಾಣಬಹುದು. ಇದರ ವೀಡಿಯೋ ಈಗ ಜಗತ್ತಿನಾದ್ಯಂತ ವೈರಲ್ ಆಗಿದೆ.
ಇದನ್ನೂ ಓದಿ: