10 ವರ್ಷದ ಬಾಲಕಿಗೆ ಮಾರಣಾಂತಿಕ ಚಾಲೆಂಜ್​ ನೀಡಿದ ಅಲೆಕ್ಸಾ: ಆಕ್ರೋಶಗೊಂಡ ಬಳಕೆದಾರರು

ಘಟನೆಯ ಕುರಿತು ಟ್ವಿಟರ್​ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು,  ಜನರ ಪ್ರಾಣಕ್ಕೆ ಕುತ್ತು ತರುವ ಸಾಮರ್ಥ್ಯವಿರುವ ಇಂತಹ ಟೆಕ್​ ವ್ಯವಸ್ಥೆಗಳು ಪರಿಸರಕ್ಕೆ ಹಾನಿಯುಂಟುಮಾಡಲಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 

10 ವರ್ಷದ ಬಾಲಕಿಗೆ ಮಾರಣಾಂತಿಕ ಚಾಲೆಂಜ್​ ನೀಡಿದ ಅಲೆಕ್ಸಾ: ಆಕ್ರೋಶಗೊಂಡ ಬಳಕೆದಾರರು
ಅಲೆಕ್ಸಾ
Follow us
TV9 Web
| Updated By: Pavitra Bhat Jigalemane

Updated on:Jan 01, 2022 | 12:30 PM

ಟೆಕ್ನಾಲಜಿ ಮುಂದುವರೆದಂತೆ ಅವುಗಳಿಂದ ಅಪಾಯವೂ ಅಷ್ಟೇ ಇರುತ್ತದೆ. ಬಳಕೆದಾರರಿಗೆ ಅನುಕೂಲವಾಗುವ ಕೆಲವು ತಂತ್ರಜ್ಞಾನಗಳು ಜೀವಕ್ಕೇ ಕುತ್ತು ತರುತ್ತವೆ. ಅದರಲ್ಲೂ ಇಂದಿನ ದಿನಗಳಲ್ಲಿ ಎಲ್ಲ ರೀತಿಯ ತಂತ್ರಜ್ಞಾನಗಳನ್ನು ಚಿಕ್ಕ ಮಕ್ಕಳೂ ಬಳಸುತ್ತಾರೆ. ಹೀಗಾಗಿ ಅದರಲ್ಲಿನ ಕೆಲವು ವಿಷಯಗಳು ಮಕ್ಕಳಿಗೆ ಹಾನಿ ಮಾಡುತ್ತವೆ. ಅಂಥಹದ್ದೇ ಒಂದು ಘಟನೆ ಅಲೆಕ್ಸಾ ಬಳಕೆದಾರರು ಎದುರಿಸಿದ್ದಾರೆ. ಹೌದು 10 ವರ್ಷದ ಮಗುವಿಗೆ ಅಲೆಕ್ಸಾ ಮಾರಣಾಂತಿಕ ಚಾಲೆಂಜ್​ ನೀಡಿ ಅಪಾಯ ತಂದೊಡ್ಡಿದ ಘಟನೆ ನಡೆದಿದೆ. ಅಲೆಕ್ಸಾ ಬಳಿ 10 ವರ್ಷದ ಬಾಲಕಿ ಏನಾದರೂ ಚಾಲೆಂಜ್​ ನೀಡುವಂತೆ ಕೇಳಿದ್ದಾಳೆ. ಈ ವೇಳೆ ಅಲೆಕ್ಸಾ ಗೋಡೆಯ ಮೇಲಿರುವ ಪ್ಲಗ್​ಗೆ ಚಾರ್ಜರ್​ಅನ್ನು ಅರ್ಧ ಅಳವಡಿಸಿ, ಅದರ ಮೇಲೆ ನಾಣ್ಯವನ್ನು ಇಡುವಂತೆ ಅಲೆಕ್ಸಾ ಚಾಲೆಂಜ್​ ನೀಡಿದೆ.

ಅಲೆಕ್ಸಾ ನೀಡಿದ ಚಾಲೆಂಜ್​ ಕೇಳಿ 10 ವರ್ಷದ ಬಾಲಕಿಯ ತಾಯಿ ಗಾಬರಿಗೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ವಲ್ಪ ಯಾಮಾರಿದ್ದರೂ ನನ್ನ ಮಗುವಿನ ಸಾವು ಸಂಭವಿಸುತ್ತಿತ್ತು ಎಂದು ಅಮೇಜಾನ್​ ಅಲೆಕ್ಸಾ ವಿರುದ್ಧ ಕಿಡಿಕಾರಿದ್ದಾರೆ.  ಇದನ್ನು ನೋಡಿ ನೆಟ್ಟಿಗರು ಇಂತಹ ಮಾರಣಾಂತಿಕ  ಚಾಲೆಂಜ್​ಗಳನ್ನು ನೀಡುವ ಟೆಕ್ನಿಕಲ್​ ಡಿವೈಸ್​ಗಳು ಅಪಾಯಕಾರಿಯಾಗಿದೆ ಎಂದಿದ್ದಾರೆ. ಘಟನೆಯ ಕುರಿತು ಟ್ವಿಟರ್​ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು,  ಜನರ ಪ್ರಾಣಕ್ಕೆ ಕುತ್ತು ತರುವ ಸಾಮರ್ಥ್ಯವಿರುವ ಇಂತಹ ಟೆಕ್​ ವ್ಯವಸ್ಥೆಗಳು ಪರಿಸರಕ್ಕೆ ಹಾನಿಯುಂಟುಮಾಡಲಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್​ 27ರಂದು ಹಂಚಿಕೊಂಡ ಸ್ಕ್ರೀನ್​ ಶಾಟ್​ ವೈರಲ್​ ಆಗಿದೆ. ಈ ಕುರಿತು ಅಮೆಜಾನ್​ ಗೂ ಗಮನಕ್ಕೆ ತರಲಾಗಿದ್ದು ದೋಷವನ್ನು ಸರಿಪಡಿಸಲಾಗಿದೆ ಎಂದು ಅಮೇಜಾನ್​ ಹೇಳಿಕೊಂಡಿದೆ. ಇತ್ತೀಚೆಗೆ ಈ ರೀತಿಯ ನಾಣ್ಯದ ಚಾಲೆಂಜ್​ಗಳಿ ಟಿಕ್​ ಟಾಕ್​ನಲ್ಲಿ ಹರಿದಾಡುತ್ತಿತ್ತು.  ಸ್ವಿಚ್​ ಆನ್​ ಮಾಡಿ ಕರೆಂಟ್​ ಪಾಸ್​ ಆಗುವಾಗ ನಾಣ್ಯಗಳನ್ನು ಹಾಕುವುದು ಅಪಾಯಕಾರಿಯಾಗಿದೆ. ಇಂತಹ ಚಾಲೆಂಜ್​ಗಳನ್ನು ನೀಡುವ ಟೆಕ್ನಾಲಜಿ ನಿಜಕ್ಕೂ ಅಪಾಯಕಾರಿಯಾಗಿದೆ.

ಇದನ್ನೂ ಓದಿ:

New Year 2022: ಕಲರ್​ಫುಲ್​ ಡೂಡಲ್​ ಮೂಲಕ ಹೊಸ ವರ್ಷ ಸ್ವಾಗತಿಸಿದ ಗೂಗಲ್​

Published On - 12:28 pm, Sat, 1 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ