New Year 2022: ಕಲರ್ಫುಲ್ ಡೂಡಲ್ ಮೂಲಕ ಹೊಸ ವರ್ಷ ಸ್ವಾಗತಿಸಿದ ಗೂಗಲ್
ಆನಿಮೇಟೆಡ್ ಡೂಡಲ್ನಲ್ಲಿ 2021 ಒಡೆದು 2022ರ ಅಕ್ಷರ ಚಿಮ್ಮುವಂತೆ ಮಾಡಿದೆ. ಬಳಕೆದಾರರಿಗೆ ಹೊಸ ಹುಮ್ಮಸ್ಸನ್ನು ನೀಡುವಂತೆ ಈ ಬಾರಿಯ ಹೊಸ ವರ್ಷದ ಗೂಗಲ್ ಡೂಡಲ್ ಇದೆ.
2021 ಮುಗಿದು 2022ರ ಹೊಸ ವರ್ಷವನ್ನು ಸ್ವಾಗತಿಸಿಯಾಗಿದೆ. ಹೊಸ ಭರವಸೆ, ಹೊಸ ಕನಸುಗಳೊಂದಿಗೆ ಹಳೆಯ ವರ್ಷದ ಕಹಿ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಿ 365 ದಿನದವನ್ನು ಫೂರ್ಣವಾಗಿ ಜೀವಿಸುವ ದಿನ ಬಂದಾಗಿದೆ. ಹೊಸ ವರ್ಷವನ್ನು ಗೂಗಲ್ ಕೂಡ ವಿಶೇಷವಾಗಿ ಸ್ವಾಗತಿಸಿದೆ. ಪ್ರತೀ ವಿಶೇಷ ಸಂದರ್ಭಗಳಲ್ಲಿ ತನ್ನದೇ ವಿಭಿನ್ನ ರೀತಿಯ ಡೂಡಲ್ ಮೂಲಕ ಗೂಗಲ್ ಬಳಕೆದಾರರಿಗೆ ಶೂಭ ಕೋರುತ್ತದೆ. ನಿನ್ನೆ ವರ್ಷದ ಕೊನೆಯ ದಿನದ ಹಿನ್ನೆಲೆಯಲ್ಲಿ ಗೂಗಲ್ ನ್ಯೂ ಇಯರ್ ಈವ್ಅನ್ನು ಡೂಡಲ್ ಮೂಲಕ ಅಚರಿಸಿತ್ತು. ಇಂದು ಹೊಸ ವರ್ಷವನ್ನು ಕಲರ್ಫುಲ್ ಆಗಿ ವೆಲ್ಕಮ್ ಮಾಡಿ, ಬಳಕೆದಾರರಿಗೆ ಶುಭಕೋರಿದೆ.
So this is what hitting refresh feels like ?
Wishing you and your dear ones a happy new year ? #GoogleDoodle pic.twitter.com/BYtPzEMFiK
— Google India (@GoogleIndia) January 1, 2022
ಆನಿಮೇಟೆಡ್ ಡೂಡಲ್ನಲ್ಲಿ 2021 ಒಡೆದು 2022ರ ಅಕ್ಷರ ಚಿಮ್ಮುವಂತೆ ಮಾಡಿದೆ. ಬಳಕೆದಾರರಿಗೆ ಹೊಸ ಹುಮ್ಮಸ್ಸನ್ನು ನೀಡುವಂತೆ ಈ ಬಾರಿಯ ಹೊಸ ವರ್ಷದ ಗೂಗಲ್ ಡೂಡಲ್ ಇದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಜನವರಿ 1 ರಂದು ಹೊಸ ವರ್ಷ ಎಂದು ಆಚರಿಸಲಾಗುತ್ತದೆ. ಹೀಗಾಗಿಟೆಕ್ ದೈತ್ಯ ಗೂಗಲ್ ಕೂಡ ತನ್ನ ಮುಖ ಪುಟದಲ್ಲಿ ಡೂಡಲ್ ಅನ್ನು ವಿನ್ಯಾಸಗೊಳಿಸಿ ಬಳಕೆದಾರರಿಗೆ ವಿಶ್ ಮಾಡುತ್ತದೆ. ಅದೇ ರೀತಿ ಈ ಬಾರಿಯೂ ಗುಲಾಬಿ ಬಣ್ಣದಲ್ಲಿ 2022 ಅನ್ನು ಸ್ವಾಗತಿಸಿದೆ.