ಬ್ರ್ಯಾಂಡ್ ಬೆಂಗಳೂರಿನ ಹೆಸರಿನಲ್ಲಿ ಮಾಯನಗರಿ ಬೆಂಗಳೂರು ವೇಗಗತಿಯಲ್ಲಿ ಬೆಳೆಯುತ್ತಿದೆ. ಆದರೆ ಬೆಂಗಳೂರು ಬೆಳೆಯುತ್ತಾ ಹೋದಂತೆ ಕೆಲಸ ಅರಸುತ್ತ ಬರುತ್ತಿರುವ ಜನರ ಸಂಖ್ಯೆ, ವಾಹನ ಓಡಾಟ ಹಾಗೂ ಟ್ರಾಫಿಕ್ ಜಾಮ್ ಕೂಡ ಅಷ್ಟೇ ಹೆಚ್ಚಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ರಸ್ತೆ ಅಗಲೀಕರಣ, ಫುಟ್ ಪಾತ್ ಮೇಲೆ ಅಂಗಡಿಯಂತಹ ವ್ಯವಸ್ಥೆಯನ್ನು ಕಾಣಬಹುದು. ಇದರಿಂದಾಗಿ ಪಾದಚಾರಿಗಳಿಗೆ ಹಾಗೂ ವಿಕಲಚೇತನರಿಗೆ ಪುಟ್ ಪಾತ್ ನಲ್ಲಿ ಓಡಾಡಲು ಕಷ್ಟ ಎನ್ನುವಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಇದಕ್ಕೆ ಸಂಬಂಧಪಟ್ಟ ಪೋಸ್ಟ್ ವೊಂದು ವೈರಲ್ ಆಗಿದ್ದು, ವಿಕಲಚೇತನರೊಬ್ಬರು ವೀಲ್ ಚೇರ್ ನಲ್ಲಿ ರಸ್ತೆಯಲ್ಲಿ ಹೋಗುತ್ತಿರುವುದನ್ನು ನೋಡಬಹುದು.
ಆನಂದ್ ಗುಂಡ್ ರಾವ್ ಹೆಸರಿನ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ‘ದೈಹಿಕ ವಿಕಲಚೇತನ ವ್ಯಕ್ತಿಯೊಬ್ಬರು ಮಾರೇನಹಳ್ಳಿ ರಸ್ತೆ ಜಯನಗರ ಎಂಟನೇ ಬ್ಲಾಕ್ ಬಳಿ ವೀಲ್ ಚೇರ್ ನಲ್ಲಿ ರಸ್ತೆಯಲ್ಲಿ ಹೋಗುತ್ತಿರುವುದು ಕಂಡು ಬಂದಿದೆ. ರಸ್ತೆಯಲ್ಲಿ ಸರಿಯಾದ ಫುಟ್ ಪಾತ್ ವ್ಯವಸ್ಥೆ ಇಲ್ಲದೆ ವ್ಯಕ್ತಿ ರಸ್ತೆಯಲ್ಲಿ ಪ್ರಯಾಣಿಸುವ ಪರಿಸ್ಥಿತಿ ಬಂದೋಗಿದೆ’ ಎಂದು ಬರೆಯಲಾಗಿದೆ.
Bengaluru is very very unfair for physically challenged. This is Marenahalli Road Jayanagar 8th Block, with inaccessible and broken footpaths & vehicles coming in from the wrong direction. Do we expect them to be stuck indoors? @BBMPCOMM @osd_cmkarnataka @JnagarTr @TOIBengaluru pic.twitter.com/9YxGRZNbhg
— Ananda Gundurao (@Anandagundurao) December 5, 2024
ಈ ಫೋಟೋದಲ್ಲಿ ವಿಕಲಚೇತನ ವ್ಯಕ್ತಿಯ ಎದುರಿಗೆ ಬಿಎಂಟಿಸಿ ಬಸ್ ಗಳು ಹೋದರು ಕೂಡ ಆ ವ್ಯಕ್ತಿಯನ್ನು ಕೂರಿಸಿಕೊಳ್ಳದೆ ಹೋಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಅದಲ್ಲದೇ, ಈ ವಿಕಲ ಚೇತನ ವ್ಯಕ್ತಿ ಬರುತ್ತಿದ್ದರೂ ಕೂಡ ಮುಂಭಾಗದಲ್ಲಿ ವ್ಯಕ್ತಿಯೊಬ್ಬ ರಾಂಗ್ ರೂಟ್ ನಲ್ಲಿ ಬರುತ್ತಿರುವುದನ್ನು ಕಾಣಬಹುದು. ಫುಟ್ ಪಾತ್ ನಲ್ಲಿ ಕಸ, ಕಲ್ಲು, ಅಂಗಡಿಗಳು ಇರುವುದೇ ಈ ರೀತಿಯ ಪರಿಸ್ಥಿತಿಗೆ ಕಾರಣ ಎನ್ನಲಾಗಿದೆ. ಈ ಪೋಸ್ಟ್ ಹದಿನೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ.
ಇದನ್ನೂ ಓದಿ: ಜೈಲಿನಲ್ಲಿ ಕೈದಿಯ ವಿಚಿತ್ರ ವರ್ತನೆ; ಎಕ್ಸ್ ರೇ ನೋಡಿ ಪೊಲೀಸರು ಶಾಕ್
ಈ ಪೋಸ್ಟ್ ಗೆ ಜಯನಗರ ಸಂಚಾರ ಪೊಲೀಸ್ ಠಾಣೆ ಹೆಸರಿನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಿಬ್ಬಂದಿಯೂ ಪ್ರತಿಕ್ರಿಯೆ ‘ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ. ಮತ್ತೊಬ್ಬರು, ‘ಎಲ್ಲಾ ಸರಿ ಇದ್ದವರೇ ಹರಸಾಹಸ ಪಡುತ್ತಿದ್ದಾರೆ, ಈ ವಿಕಲ ಚೇತನರು ಹೇಗೆ ದಾಟಬೇಕು’ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ‘ಇದು ಭಾರತದ ಪರಿಸ್ಥಿತಿಯಾಗಿದೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ