
ಭಾರತೀಯರು (Indian)ಯಾವ ದೇಶಕ್ಕಾದ್ರೂ ಹೋಗಲಿ, ತಮ್ಮ ಆಚಾರ ವಿಚಾರವನ್ನು ಮರೆಯುವುದಿಲ್ಲ. ಕೆಲವರು ಫಾರಿನ್ ಟ್ರಿಪ್ ವೇಳೆ ಇಲ್ಲಿನ ಸಾಂಪ್ರದಾಯಿಕ ಉಡುಗೆಯಾದ ಸೀರೆಯನ್ನೇ ಉಡುತ್ತಾರೆ. ಸ್ಥಳೀಯ ಪದ್ಧತಿಗಳಿಗೆ ಅನುಗುಣವಾಗಿ ಉಡುಗೆ ತೊಡುತ್ತಾರೆ. ಇದೀಗ ರಾಜಸ್ಥಾನಿ ಮಹಿಳೆಯೊಬ್ಬರು ರಷ್ಯಾ ಪ್ರವಾಸದ (Russia Trip) ವೇಳೆ ರಾಜಸ್ಥಾನಿ ಶೈಲಿಯಲ್ಲಿ ಸೀರೆ ಉಟ್ಟಿದ್ದು, ಇದನ್ನು ನೋಡಿದ ವಿದೇಶಿಗರು ಫೋಟೋ ಕ್ಲಿಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
samboyvlogs ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ರಷ್ಯಾದಲ್ಲಿ ನಮ್ಮಮ್ಮ ಸೆಲೆಬ್ರಿಟಿ ಎಂದು ಶೀರ್ಷಿಕೆ ನೀಡಲಾಗಿದೆ. ರಾಜಸ್ಥಾನಿ ಮಹಿಳೆಯೊಬ್ಬರು ತನ್ನ ಪತಿ ಹಾಗೂ ಮಗನ ಜತೆಗೆ ರಷ್ಯನ್ ಪ್ರವಾಸ ಎಂಜಾಯ್ ಮಾಡುತ್ತಿರುವುದನ್ನು ನೋಡಬಹುದು. ಆದರೆ ಈ ಮಹಿಳೆಯು ಎಲ್ಲರ ಗಮನ ಸೆಳೆಯಲು ಕಾರಣವಾಗಿದ್ದು ರಾಜಸ್ಥಾನಿ ಶೈಲಿಯಲ್ಲಿ ಸೀರೆ ಧರಿಸಿದ್ದು. ಹೌದು, ಟ್ರಿಪ್ ವೇಳೆ ಈ ವಿದೇಶಿಗರು ಈ ಮಹಿಳೆಯೊಂದಿಗೆ ಸೆಲ್ಫಿ ಕ್ಲಿಕಿಸಿಕೊಳ್ಳುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ:ವಿದೇಶಿ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ, ಆಮೇಲೇನಾಯ್ತು?
ಈ ಪೋಸ್ಟ್ ಇದುವರೆಗೂ ಇಪ್ಪತ್ತೆಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿ ವಿಭಿನ್ನವಾಗಿದೆ, ಇಲ್ಲಿನ ಜನರಿಗೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಇನ್ನೊಬ್ಬರು, ನೀವು ನಿಮ್ಮ ಸಂಸ್ಕೃತಿಯನ್ನು ಗೌರವಿಸಿದಾಗ, ನಿಮ್ಮನ್ನು ಸಹ ಗೌರವಿಸಲಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಭಾರತೀಯ ಸಂಪ್ರದಾಯದ ಸೌಂದರ್ಯವಿದು ಎಂದು ಬರೆದುಕೊಂಡು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ