ಆಹಾರ ಸುರಕ್ಷತೆ ಅತಿಮುಖ್ಯ. ಆದರೆ ಕೆಲವೊಮ್ಮೆ ನಾವು ಅದನ್ನು ತುಂಬಾ ಲಘುವಾಗಿ ಪರಿಗಣಿಸುತ್ತೇವೆ. ಹೊರಗಡೆ ಆಹಾರವನ್ನು ಸೇವಿಸುವಾಗ ಆದಷ್ಟು ಜಾಗರೂಕರಾಗಿರುವುದು ಅತ್ಯಂತ ಅಗತ್ಯ. ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋ ಕಂಡಾಕ್ಷಣ ಸಮೋಸಾ ಪ್ರಿಯರು ಶಾಕ್ ಆಗುವುದಂತೂ ಖಂಡಿತಾ.
ಹೌದು ರಸ್ತೆ ಬದಿಯ ಅಂಗಡಿಯೊಂದರಲ್ಲಿ ಗರಿಗರಿಯಾದ ಸಮೋಸ ಕಂಡ ವ್ಯಕ್ತಿಯೊರ್ವ ಸಮೋಸಾ ಖರೀದಿಸಿ ತಿಂದಿದ್ದಾನೆ. ಒಂದು ಬೈಟ್ ತಿನ್ನುವಷ್ಟರಲ್ಲಿ ಸಮೋಸದೊಳಗೆ ಸತ್ತ ಕಪ್ಪೆ ಕಂಡು ದಂಗಾಗಿ ಹೋಗಿದ್ದಾನೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವರದಿಗಳ ಪ್ರಕಾರ, ಉತ್ತರ ಪ್ರದೇಶದ ಗಾಜಿಯಾಬಾದ್‌ನ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
गाजियाबाद, UP में समोसे के अंदर मेंढक की टांग निकली है। मामला बीकानेर स्वीट्स का है। पुलिस ने दुकानदार को कस्टडी में लिया। फूड विभाग ने सैंपल जांच को भेजे। pic.twitter.com/SBcsEs8nMr
— Sachin Gupta (@SachinGuptaUP) September 12, 2024
ಇದನ್ನೂ ಓದಿ: ವಿಪರೀತ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ಮಹಿಳೆಯ CT ಸ್ಕ್ಯಾನ್ ಕಂಡು ಬೆಚ್ಚಿಬಿದ್ದ ವೈದ್ಯರು
@SachinGuptaUP ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಇಂದು ಬೆಳಗ್ಗೆ(ಸೆ.12) ಹಂಚಿಕೊಂಡಿರುವ ವಿಡಿಯೋ ಈಗಾಗಲೇ 90 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಹೊರಗಡೆ ತಿನ್ನುವಾಗ ಜಾಗ್ರತೆ ವಹಿಸಿ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ