
ವೃತ್ತಿಜೀವನ (worklife) ಎಂದ ಮೇಲೆ ಏರಿಳಿತಗಳು ಸರ್ವೇ ಸಾಮಾನ್ಯ. ಆದರೆ ಎಲ್ಲರ ಬದುಕನ್ನು ಅತ್ಯುತ್ತಮವಾಗಿ ರೂಪಿಸಲು ಕೆಲವೊಂದು ಅಂಶಗಳು ಕಾರಣವಾಗುತ್ತದೆ. ಇದೀಗ ಬೆಂಗಳೂರಿನಿಂದ (Bengaluru) ಕ್ಯಾಲಿಫೋರ್ನಿಯಾಗೆ ಸ್ಥಳಾಂತರಗೊಂಡ ಗೂಗಲ್ ಇಂಜಿನಿಯರ್ ಒಬ್ಬರು ತಮ್ಮ ವೃತ್ತಿಜೀವನದ ಕೆಲವು ಮಹತ್ವದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
2018 ರಿಂದ ಗೂಗಲ್ ಉದ್ಯೋಗಿಯಾಗಿರುವ ದೀಪ್ ಶಾ, ಬಿಸಿನೆಸ್ ಇನ್ಸೈಡರ್ ಜೊತೆ ಮಾತನಾಡಿದ್ದು, ಬಾಲ್ಯದಲ್ಲಿ ಕಂಪ್ಯೂಟರ್ ಆಟಗಳನ್ನು ಆಡುವುದರಿಂದ ಹಿಡಿದು ಟೆಕ್ ದೈತ್ಯ ಸಂಸ್ಥೆಯ ಮೌಂಟೇನ್ ವ್ಯೂ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುವವರೆಗಿನ ತಮ್ಮ ಪ್ರಯಾಣ, ತಂತ್ರಜ್ಞಾನ ಪ್ರಪಂಚ ಹಾಗೂ ವಿದೇಶದಲ್ಲಿನ ಜೀವನ ಈ ಎರಡನ್ನೂ ಮುನ್ನಡೆಸಲು ಸಹಾಯ ಮಾಡಿದ ಅಂಶಗಳ ಬಗ್ಗೆ ಮಾತನಾಡಿದ್ದಾರೆ. ನಾನು 2018 ರಲ್ಲಿ ಗೂಗಲ್ ಸೇರಿದಾಗಿನಿಂದ, ನನ್ನ ಮೇಲೆ ಬೀರಿದ ಪ್ರಭಾವವನ್ನು ನೋಡುವುದು ಅದ್ಭುತವಾಗಿದೆ. ಭಾರತದಲ್ಲಿ ಮೂರು ವರ್ಷಗಳ ಕಾಲ ಕಳೆದ ನಂತರದಲ್ಲಿ 2021ರಲ್ಲಿ ಕಂಪನಿಯ ಮೌಂಟೇನ್ ವ್ಯೂ ಕಚೇರಿಗೆ ಸ್ಥಳಾಂತರಗೊಂಡೆ. ಈ ಬದಲಾವಣೆಯೂ ದೇಶಾದ್ಯಂತ ಗೂಗಲ್‌ನ ಒಂದೇ ರೀತಿಯ ಕೆಲಸದ ಸಂಸ್ಕೃತಿಯಿಂದ ಸುಗಮವಾಯಿತು, ಆದರೆ ಉಳಿದೆಲ್ಲವುದಕ್ಕೂ ಮಾರ್ಗದರ್ಶನದ ಅಗತ್ಯವಿತ್ತು. ಮಾರ್ಗದರ್ಶಕರಲ್ಲಿ ಸಾಕಷ್ಟು ವ್ಯತ್ಯಾಸವಿತ್ತು ಎಂದು ಹೇಳಿದ್ದಾರೆ.
ಕಂಪ್ಯೂಟರ್ ಆಟಗಳನ್ನು ರಚಿಸುವ ಬಾಲ್ಯದ ಕನಸಿನೊಂದಿಗೆ ತನ್ನ ತಾಂತ್ರಿಕ ಪ್ರಯಾಣ ಪ್ರಾರಂಭವಾಯಿತು. ಅದು ನನ್ನನ್ನು ಕಂಪ್ಯೂಟರ್ ಇಂಜಿನಿಯರಿಂಗ್ ಆಗಿ ಮುಂದುವರೆಯಲು ಪ್ರೇರೇಪಿಸಿತು. ತಮ್ಮ ಪದವಿ ವೇಳೆಯಲ್ಲಿ ಸ್ಪರ್ಧಾತ್ಮಕ ಪ್ರೋಗ್ರಾಮಿಂಗ್ ಅನ್ನು ಕೈಗೆತ್ತಿಕೊಂಡೆ. ಇದು ಪ್ರಮುಖ ತಂತ್ರಜ್ಞಾನ ಕಂಪನಿಗಳೊಂದಿಗೆ ಉದ್ಯೋಗಾವಕಾಶಗಳಿಗೆ ಕಾರಣವಾಯಿತು. ಜಾಹೀರಾತು ಕ್ಲೈಂಟ್‌ಗಳನ್ನು ಬೆಂಬಲಿಸುವ ಎಐ ಹಾಗೂ ಯಂತ್ರ ಕಲಿಕೆ ತಂಡದಲ್ಲಿ ಮೊದಲು ಕೆಲಸ ಮಾಡಿದೆ. ಒಂದೂವರೆ ವರ್ಷದ ನಂತರ ನಾನು ಗೂಗಲ್‌ಗೆ ಅರ್ಜಿ ಸಲ್ಲಿಸಿದೆ, ಸಂದರ್ಶನದಲ್ಲಿ ಭಾಗಿಯಾದೆ. ನಂತರದಲ್ಲಿ ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದು ನನ್ನ ಬದುಕಿನ “ದೊಡ್ಡ ಪರಿವರ್ತನೆ” ಎಂದು ತಿಳಿಸಿದ್ದಾರೆ.
ಆದರೆ ಗೂಗಲ್ ಹುಡುಕಾಟವನ್ನು ಸುಧಾರಿಸುವ ಅವಕಾಶ ಸಿಕ್ಕಿದ್ದು ಈ ನಡೆಯನ್ನು ಸಾರ್ಥಕಗೊಳಿಸಿದೆ. ಅಮೆರಿಕದಲ್ಲಿರುವ ಹಿರಿಯ ಗೆಳೆಯರು ಮತ್ತು ಸ್ನೇಹಿತರು ಭಾರತದ ಹೊರಗಿನ ಜೀವನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡಿದರು. ನನ್ನ ವೃತ್ತಿಜೀವನದುದ್ದಕ್ಕೂ ಮತ್ತು ನನ್ನ ಪದವಿಪೂರ್ವದಲ್ಲಿಯೂ ನನಗೆ ಬೆಂಬಲ ನೀಡಿದ ಮತ್ತು ನನಗೆ ಉತ್ತಮ ವಿಚಾರಗಳನ್ನು ನೀಡಿದ ಅನೇಕ ಉತ್ತಮ ಮಾರ್ಗದರ್ಶಕರನ್ನು ಹೊಂದಲು ನಾನು ಅದೃಷ್ಟಶಾಲಿಯಾಗಿದ್ದೇನೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಟ್ಯಾಟೂ ಹಾಕಿದ ಉದ್ಯೋಗಿಯನ್ನೇ ನಿಂದಿಸಿದ ಬಾಸ್
ನಿಮ್ಮ ಮಾರ್ಗದರ್ಶಕರನ್ನು ನೀವು ಯಾವ ನಿರ್ದಿಷ್ಟ ವಿಷಯಗಳಿಗೆ ಬಳಸಿಕೊಳ್ಳಲು ಬಯಸುತ್ತೀರಿ ಎಂಬುದು ಬಹಳ ಸ್ಪಷ್ಟವಾಗಿರಬೇಕು. ಇದು ನಿಮಗೆ ಸರಿಯಾದ ಸಲಹೆಯನ್ನು ನೀಡಲು ಸಹಾಯ ಮಾಡುತ್ತದೆ. ಹಾಗೂ ನೀವು ಸ್ಪಷ್ಟವಾದ ನಿರೀಕ್ಷೆಗಳನ್ನು ಹೊಂದಬಹುದು. ಆದರೆ ಪ್ರತಿಯೊಬ್ಬ ಮಾರ್ಗದರ್ಶಕರು ನಿಮಗೆ ವಿಭಿನ್ನ ವಿಷಯಗಳನ್ನು ಕಲಿಸುತ್ತಾರೆ. ಆದರೆ ಆ ವ್ಯಕ್ತಿಗಳು ಪ್ರಾಧ್ಯಾಪಕರಾಗಿರಬೇಕಾಗಿಲ್ಲ. ಅವರು ಹಳೆ ವಿದ್ಯಾರ್ಥಿಯಾಗಿರಬಹುದು ಅಥವಾ ನಿಮ್ಮ ಕಾಲೇಜಿನಲ್ಲಿ ಹಿರಿಯರಾಗಿರಬಹುದು. ನೀವು ಅವರನ್ನು ಹೇಗೆ ಕಂಡುಕೊಂಡರೂ ಪರವಾಗಿಲ್ಲ, ಆದರೆ ಮಾರ್ಗದರ್ಶಕರು ಮಾದರಿ ವ್ಯಕ್ತಿಗಳು ಎಂದು ಭಾವಿಸಬೇಕು ಎಂದು ಹೇಳಿಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ