Video : ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ, ಪವಾಡ ಸದೃಶದಂತೆ ಪಾರಾದ ಮಹಿಳೆ

ಗ್ಯಾಸ್ ಸಿಲಿಂಡರ್ ವಿಷಯದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲದು. ಕೆಲವೊಮ್ಮೆ ನಮ್ಮ ನಿರ್ಲಕ್ಷ್ಯದಿಂದ ಆಗುವ ಎಡವಟ್ಟುಗಳು ಪ್ರಾಣಕ್ಕೆ ಕುತ್ತು ತರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೇ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದ್ದು, ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಹಿಳೆ ಹಾಗೂ ವ್ಯಕ್ತಿಯೊಬ್ಬ ಪವಾಡ ಸದೃಶವೆಂಬಂತೆ ಅವಘಡದಿಂದ ಪಾರಾಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆತಂಕಗೊಂಡಿದ್ದಾರೆ.

ಪ್ರತಿಯೊಬ್ಬರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ಇದ್ದೆ ಇರುತ್ತದೆ. ಈ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾದರೆ ಆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವುದು ಮುಖ್ಯ. ನಿರ್ಲಕ್ಷ್ಯ ವಹಿಸಿದರೆ ಅವಘಡ ಸಂಭವಿಸಿ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೇ ಹೆಚ್ಚು. ಇದೀಗ ಇಂತಹದ್ದೇ ಆಘಾತಕಾರಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ (social media) ಹರಿದಾಡುತ್ತಿದೆ. ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ ಮಹಿಳೆ ಹಾಗೂ ವ್ಯಕ್ತಿಯೊಬ್ಬನು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಯಸ್ಸು ಗಟ್ಟಿ ಇತ್ತು ಕಾಣಿಸ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

@Satyamraj in ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, “ಅದೃಷ್ಟವಶಾತ್ ಅನಿಲ ಸೋರಿಕೆಯ ವೇಳೆಯಲ್ಲಿ ಮಹಿಳೆ ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ತೆರೆದಿಟ್ಟಿದ್ದರಿಂದ ಸ್ಫೋಟದ ಪರಿಣಾಮ ಕಡಿಮೆಯಾಗಿದೆ’ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಮನೆಯಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿದ್ದು, ಸಿಲಿಂಡರ್ ಸ್ಫೋಟಗೊಳ್ಳುತ್ತಿದ್ದಂತೆ ಇಬ್ಬರೂ ವ್ಯಕ್ತಿಗಳು ಹೊರಗೆ ಓಡಿಹೋಗುವುದನ್ನು ಕಾಣಬಹುದು. ಪ್ರಾರಂಭದಲ್ಲಿ ಮಹಿಳೆಯೊಬ್ಬಳು ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗುತ್ತಿದ್ದಂತೆ ಆ ಸಿಲಿಂಡರ್‌ನ್ನು ಅಡುಗೆ ಮನೆಯಿಂದ ಹೊರಗೆ ತಂದಿದ್ದಾಳೆ. ಅನಿಲ ಸೋರಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದು ಕೊನೆಗೆ ಮಹಿಳೆ ಸಹಾಯಕ್ಕಾಗಿ ಅತ್ತಿಂದ ಇತ್ತ ಓಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ
ಚಲಿಸುವ ರೈಲಿನ ಕೆಳಗೆ ಬಿದ್ದ ಮಗಳು, ಸೂಪರ್ ಮ್ಯಾನ್ ಆದ ಅಪ್ಪ
ಫುಡ್ ಡೆಲಿವರಿ ಬಾಯ್‌ಗೆ ಬರ್ತ್ಡೇ ಸರ್ಪ್ರೈಸ್ ನೀಡಿದ ಮನೆಮಂದಿ
ಶ್ವಾನದ ಮೇಲೆ ಕಾರು ಹತ್ತಿಸಿ, ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ವ್ಯಕ್ತಿ
ನಿಂತ ಮಳೆನೀರಲ್ಲಿ ಕುಣಿಯಲು ಹೋಗಿ ಮುಗ್ಗರಿಸಿ ಬಿದ್ದ ಯುವತಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಒಂದೆರಡು ಸೆಕೆಂಡುಗಳ ಬಳಿಕ ಮಹಿಳೆಯೂ ಒಂದು ಬಾಗಿಲಿನಿಂದ ಕೋಣೆಯನ್ನು ಪ್ರವೇಶಿಸಿದರೆ, ಇನ್ನೊರ್ವ ವ್ಯಕ್ತಿ ಇನ್ನೊಂದು ಬಾಗಿಲಿನಿಂದ ಪ್ರವೇಶಿಸಿ ಸಿಲಿಂಡರ್ ಇರುವಲ್ಲಿ ಬರುತ್ತಾನೆ. ಈ ಇಬ್ಬರೂ ಸಿಲಿಂಡರ್‌ನಿಂದ ಅನಿಲ ಸೋರಿಕೆಯನ್ನು ತಡೆಯಲು ಪ್ರಯತ್ನಿಸುವ ವೇಳೆಗೆ ಅಡುಗೆಮನೆಯಿಂದ ಸ್ಫೋಟವೊಂದು ಸಂಭವಿಸಿದ್ದು, ಕೋಣೆಯೇ ಬೆಂಕಿಯಿಂದ ತುಂಬಿಹೋಗಿದೆ. ಈ ವೇಳೆಯಲ್ಲಿ ಈ ಇಬ್ಬರೂ ಮನೆಯಿಂದ ಹೊರಗೆ ಓಡಿ ಹೋಗಿದ್ದು, ಪವಾಡ ಸದೃಶವೆಂಬಂತೆ ಪ್ರಾಣಪಾಯದಿಂದ ಪಾರಾಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಘಟನೆಯೂ ಎಲ್ಲಿ ಯಾವಾಗ ಸಂಭವಿಸಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಇದನ್ನೂ ಓದಿ: Video : ಚಲಿಸುವ ರೈಲಿನ ಕೆಳಗೆ ಬಿದ್ದ ಮಗಳು, ಸೂಪರ್ ಮ್ಯಾನ್ ಆದ ಅಪ್ಪ

ಜೂನ್ 22 ರಂದು ಶೇರ್ ಮಾಡಲಾದ ಈ ವಿಡಿಯೋವೊಂದು ಹಲವಾರು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ರೆಗ್ಯುಲೇಟರ್ ಆಫ್ ಮಾಡಿ ಎಂದಿದ್ದಾರೆ. ಇನ್ನೊಬ್ಬರು, ಅದೃಷ್ಟವಶಾತ್ ಮನೆಯ ಕಿಟಕಿ ಬಾಗಿಲುಗಳು ತೆರೆದಿದ್ದವು, ಸ್ಫೋಟದ ಪರಿಣಾಮವು ಸ್ವಲ್ಪ ಕಡಿಮೆಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ಘಟನೆ ನಡೆದದ್ದು ಎಲ್ಲಿ, ಇದು ಹೇಗೆ ಸಂಭವಿಸಿತು ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:28 pm, Mon, 23 June 25