Viral: ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಹಾಡಿಗೆ ಮಸ್ತ್‌ ಆಗಿ ಕುಣಿದ ಫಾರಿನ್‌ ಹುಡುಗೀರು

ವಿದೇಶಿಗರು ನಮ್ಮ ಭಾಷೆಯನ್ನು ಮಾತಾಡಿದ್ರೆ ಅಥವಾ ನಮ್ಮ ಸಂಸ್ಕೃತಿಯನ್ನು ಅನುಸರಿಸಿದ್ರೆ ಅದನ್ನು ನೋಡೋದೇ ಚೆಂದ. ಇದೀಗ ಅಂತಹದ್ದೇ ಚೆಂದದ ವಿಡಿಯೋವೊಂದು ವೈರಲ್‌ ಆಗಿದ್ದು, ವಿದೇಶಿ ಯುವತಿಯರಿಬ್ಬರು ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ… ಮತದಲ್ಲಿ ಮೇಲ್ಯಾವುದೋ ಕನ್ನಡ ಹಾಡಿಗೆ ಸ್ಟೇಜ್‌ ಮೇಲೆ ಸಖತ್‌ ಆಗಿ ಕುಣಿದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಈ ವಿಡಿಯೋ ನೋಡಿ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

Viral: ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಹಾಡಿಗೆ ಮಸ್ತ್‌ ಆಗಿ ಕುಣಿದ ಫಾರಿನ್‌ ಹುಡುಗೀರು
ವೈರಲ್​​ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Sep 12, 2024 | 6:15 PM

ವಿದೇಶಿಗರು ನಮ್ಮ ಭಾಷೆಯನ್ನು ಮಾತಾಡಿದ್ರೆ ಅಥವಾ ನಮ್ಮ ಸಂಸ್ಕೃತಿಯ ಪ್ರಕಾರ ಬಟ್ಟೆಯನ್ನು ತೊಟ್ಟುಕೊಂಡರೆ ಅಥವಾ ನಮ್ಮ ಹಾಡುಗಳನ್ನು ಹಾಡಿದ್ರೆ ಅದನ್ನೂ ನೋಡೋಕೆ ತುಂಬಾ ಖುಷಿ ಎನಿಸುತ್ತದೆ. ವಿದೇಶಿಯರಿಗೆ ಸಂಬಂದಪಟ್ಟ ಇಂತಹ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಮೊನ್ನೆಯಷ್ಟೇ ವಿದೇಶಿ ಯುವತಿಯೊಬ್ಬಳು ಅಚ್ಚುಕಟ್ಟಾಗಿ ಕನ್ನಡ ಮಾತನಾಡುತ್ತಾ ವ್ಲಾಗ್‌ ಮಾಡಿದಂತಹ ವಿಡಿಯೋವೊಂದು ವೈರಲ್‌ ಆಗಿತ್ತು, ಇದೀಗ ಅಂತಹದ್ದೇ ಸುಂದರ ವಿಡಿಯೋವೊಂದು ವೈರಲ್‌ ಆಗಿದ್ದು, ಫಾರಿನ್‌ ಯುವತಿಯರಿಬ್ಬರು ವಿದೇಶಿ ನೆಲದಲ್ಲಿ ಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ… ಮತದಲ್ಲಿ ಮೇಲ್ಯಾವುದೋ ಎಂಬ ಕನ್ನಡ ಹಾಡಿಗೆ ಸಖತ್‌ ಆಗಿ ಹೆಜ್ಜೆ ಹಾಕಿದ್ದಾರೆ.

ಕಳೆದ ವರ್ಷ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿನ ವಿಡಿಯೋ ಇದಾಗಿದ್ದು, ಕಳೆದ ವರ್ಷ ಜರ್ಮನಿಯ ಬರ್ಲಿನ್‌ನಲ್ಲಿ ʼಬರ್ಲಿನ್‌ ಕನ್ನಡ ಬಳಗʼವು ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜರ್ಮನಿಯ ಜೆನ್ನಿಫರ್‌ ಹಾಗೂ ನೊಟಯ ಎಂಬ ಯುವತಿಯರು ಡಾ. ರಾಜ್‌ಕುಮಾರ್‌ ನಟನೆಯ ʼಸತ್ಯ ಹರಿಶ್ಚಂದ್ರʼ ಸಿನಿಮಾದ ಕುಲದಲ್ಲಿ ಕೀಳ್ಯಾವುದೋ… ಹಾಡಿಗೆ ನೃತ್ಯ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಈ ವಿಡಿಯೋ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಲಿಂಕ್ಡ್‌ಇನ್‌ ಪೋಸ್ಟ್‌ ಲೈಕ್‌ ಮಾಡಿದ್ದಕ್ಕೆ ಕೆಲಸದಿಂದ ವಜಾಗೊಳಿಸಿದ ಕಂಪೆನಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ಪೋಸ್ಟ್‌ ಒಂದನ್ನು ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಥ್ರೆಡ್‌ ಅಲ್ಲಿ ಅಹಮದ್‌ ಶರೀಫ್‌ (1whopraises) ಎಂಬವರು ಹಂಚಿಕೊಂಡಿದ್ದಾರೆ. ವೈರಲ್‌ ಆಗುತ್ತಿರು ವಿಡಿಯೋದಲ್ಲಿ ಜರ್ಮನಿಯ ಯುವತಿಯರಿಬ್ಬರು ಸ್ಟೇಜ್‌ ಮೇಲೆ ನೆಲದಲ್ಲಿ ಅಣ್ಣಾವ್ರ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ… ಮತದಲ್ಲಿ ಮೇಲ್ಯಾವುದೋ ಹಾಡಿಗೆ ಸಖತ್‌ ಆಗಿ ನೃತ್ಯ ಮಾಡುವಂತಹ ದೃಶ್ಯವನ್ನು ಕಾಣಬಹುದು. ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ ಸಖತ್‌ ವೈರಲ್‌ ಆಗುತ್ತಿದ್ದು, ವಿದೇಶಿಯ ಯುವತಿಯರ ಕನ್ನಡ ಪ್ರೇಮಕ್ಕೆ ನೆಟ್ಟಿಗರು ಮನಸೋತಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ