AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಲಿಂಕ್ಡ್‌ಇನ್‌ ಪೋಸ್ಟ್‌ ಲೈಕ್‌ ಮಾಡಿದ್ದಕ್ಕೆ ಕೆಲಸದಿಂದ ವಜಾಗೊಳಿಸಿದ ಕಂಪೆನಿ

ಸೋಷಿಯಲ್‌ ಮೀಡಿಯಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ರೆಡ್ಡಿಡ್‌ನಲ್ಲಿ ಬಳಕೆದಾರರು ಹಂಚಿಕೊಳ್ಳುವ ಕೆಲವೊಂದು ಸ್ಟೋರಿಗಳು ಬಹಳನೇ ವೈರಲ್‌ ಆಗುತ್ತವೆ. ಇದೀಗ ಮಹಿಳೆಯೊಬ್ಬರು ಕೆಲಸದ ಸ್ಥಳದಲ್ಲಾದ ಕಹಿ ಅನುಭವದ ಬಗೆಗಿನ ಕಥೆಯನ್ನು ಹಂಚಿಕೊಂಡಿದ್ದು, ಆಕೆ ಕೆಲಸದ ಸ್ಥಳದಲ್ಲಿ ಲಿಂಕ್ಡ್‌ ಇನ್‌ ಪೋಸ್ಟ್‌ ಒಂದನ್ನು ಲೈಕ್‌ ಮಾಡಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಆಕೆಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂಬ ಸ್ಟೋರಿಯನ್ನು ಕೇಳಿ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

Viral: ಲಿಂಕ್ಡ್‌ಇನ್‌ ಪೋಸ್ಟ್‌ ಲೈಕ್‌ ಮಾಡಿದ್ದಕ್ಕೆ ಕೆಲಸದಿಂದ ವಜಾಗೊಳಿಸಿದ ಕಂಪೆನಿ
ವೈರಲ್​​ ಪೋಸ್ಟ್​​
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Sep 12, 2024 | 3:03 PM

Share

ಕೆಲಸದ ಸ್ಥಳಗಳಲ್ಲಿ ಕಂಪೆನಿಗಳು ಕೆಲವೊಂದು ಕಟ್ಟುನಿಟ್ಟಾದ ಕ್ರಮಗಳು, ನಿಯಮಗಳನ್ನು ಪಾಲಿಸುತ್ತವೆ. ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಬರಬೇಕು, ನಡವಳಿಕೆ ಸರಿಯಾಗಿರಬೇಕು ಹೀಗೆ ಪ್ರತಿಯೊಂದು ಕಂಪೆನಿಯಲ್ಲೂ ಕಟ್ಟುನಿಟ್ಟಿನ ನಿಯಮಾವಳಿಗಳು ಇದ್ದೇ ಇರುತ್ತದೆ. ಒಂದು ವೇಲೆ ನೌಕರರು ಇದನ್ನೆನಾದ್ರೂ ಪಾಲಿಸಿಲ್ಲ ಅಂದ್ರೆ ಅಥವಾ ಕೆಲಸದ ಸಮಯದಲ್ಲಿ ಹರಟೆ ಹೊಡೆಯುತ್ತಾ ಕೂತ್ರೆ ಮ್ಯಾನೇಜರ್‌ ಅಥವಾ ಸಿ.ಇ.ಒ ಕೈಯಿಂದ ಬೈಗುಳ ತಿನ್ನುವುದು ಗ್ಯಾರಂಟಿ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಕೆಲಸದ ಸಮಯದಲ್ಲಿ ಲಿಂಕ್ಡ್‌ ಇನ್‌ ಪೋಸ್ಟ್‌ ಒಂದನ್ನು ಲೈಕ್‌ ಮಾಡಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಮೆಂಟಲ್‌ ಹೆಲ್ತ್‌ ಸ್ಟಾರ್ಟ್‌ಅಪ್‌ ಕಂಪೆನಿಯೊಂದು ಮಹಿಳೆಯೊಬ್ಬರನ್ನು ಕೆಲಸದಿಂದ ತೆಗೆದುಹಾಕಿದೆ. ಈ ಬಗ್ಗೆ ಮಹಿಳೆ ಸೋಷಿಯಲ್‌ ಮೀಡಿಯಾದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಆಶಿಯನ್‌ ಎಂಬವರು ಈ ಕುರಿತ ಸುದೀರ್ಘ ಸ್ಟೋರಿಯೊಂದನ್ನು ರೆಡ್ಡಿಡ್‌ನಲ್ಲಿ ಹಂಚಿಕೊಂಡಿದ್ದಾರೆ. “ಈ ಟಾಕ್ಸಿಕ್‌ ಕಂಪೆನಿಗೆ ಕೆಲಸಕ್ಕೆ ಸೇರೋದೇ ನನಗೆ ಇಷ್ಟ ಇರ್ಲಿಲ್ಲ. ಮ್ಯಾನೇಜರ್‌, ಸಿ.ಇ.ಒ ಕಾಟ, ಇಲ್ಲಿನ ಚಿತ್ರ ವಿಚಿತ್ರ ನಿಯಮಗಳು ನಿಜಕ್ಕೂ ನನ್ನನ್ನು ನರಕಕ್ಕೆ ತಳ್ಳಿತ್ತು. ಇವರುಗಳ ಟಾರ್ಚರ್‌ ನನ್ನ ಮೇಲೆ ಕೆಟ್ದಾಗಿ ಪರಿಣಾಮ ಬೀರಿದ್ದವು. ಇದರಿಂದ ನೋವು ತಿಂದು ಆಫೀಸ್‌ನ ಟಾಯ್ಲೆಟ್‌ ಅಲ್ಲಿ ಕೂತು ಒಬ್ಬಂಟಿಯಾಗಿ ಅಳುತ್ತಾ ಕೂತ ದಿನಗಳೂ ಇದ್ದವು. ಇದೀಗ ಟಾಕ್ಸಿಟ್‌ ವರ್ಕ್‌ ಪ್ಲೇಸ್‌ ಬಗೆಗಿನ ಲಿಂಕ್ಡ್‌ಇನ್‌ ಪೋಸ್ಟ್‌ ಅನ್ನು ಲೈಕ್‌ ಮಾಡಿದ್ದಕ್ಕೆ, ಈ ಕಂಪೆನಿಯ ಸಿ.ಇ.ಒ ನನ್ನನ್ನು ಕೆಲಸದಿಂದಲೇ ವಜಾಗೊಳಿಸಿದ್ದಾರೆ. ಅಲ್ಲಾ ಪೋಸ್ಟ್‌ ಲೈಕ್‌ ಮಾಡೋದರಲ್ಲಿ ಏನಿದೆ, ನಿಜಕ್ಕೂ ಇವರ ಈ ನಡವಳಿಕೆ ನನಗೆ ಬೇಸರ ತರಿಸಿದೆ” ಎಂಬ ಸುದೀರ್ಘ ಬರಹವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  ಚಂಡಮಾರುತದಿಂದ ಕೈ ಕೊಟ್ಟ ಕರೆಂಟ್, ‌ಜನರೇಟರ್‌ ಮೂಲಕ ಮೊಬೈಲ್‌ ಚಾರ್ಜ್‌ ಮಾಡಲು ಮುಗಿಬಿದ್ದ ಜನ

ವೈರಲ್​ ಪೋಸ್ಟ್​​ ಇಲ್ಲಿದೆ ನೋಡಿ:

Woman fired for liking toxic workplace post

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಿಪರ್ಯಾಸ ಎಂದ್ರೆ ಮೆಂಟಲ್‌ ಹೆಲ್ತ್‌ ಕಂಪೆನಿಯಲ್ಲಿಯೇ ಉದ್ಯೋಗಿಗಳ ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಿಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ನಿಜಕ್ಕೂ ಬೇಸರದ ಸಂಗತಿʼ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?