Video: ತಾಯಿಯ ಅಂತ್ಯಕ್ರಿಯೆಗೆ ಹಣವಿಲ್ಲದೆ ಮೃತದೇಹದ ಮುಂದೆ ಕುಳಿತು ಭಿಕ್ಷೆ ಬೇಡಿದ ಬಾಲಕಿ
ಕೆಲವು ತಿಂಗಳ ಹಿಂದೆಯಷ್ಟೇ ಅನಾರೋಗ್ಯದಿಂದ ತನ್ನ ತಂದೆಯನ್ನು ಕಳೆದುಕೊಂಡಿದ್ದ ಬಾಲಕಿ, ಇದೀಗ ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದಾಳೆ. ತಾಯಿಯ ಮೃತದೇಹದ ಮುಂದೆ ಕುಳಿತು ಬಾಲಕಿ ಬಿಕ್ಷೆ ಬೇಡುತ್ತಿರುವುದನ್ನು ಕಂಡು ಸಾಕಷ್ಟು ಜನರು ನೆರವಿಗೆ ಧಾವಿಸಿದ್ದಾರೆ.
ತೆಲಂಗಾಣ: ತೆಲಂಗಾಣದ ನಿರ್ಮಲ್ ಜಿಲ್ಲೆಯ ತಾನೂರ್ ಮಂಡಲದಲ್ಲಿರುವ ಭೇಲ್ ಥರೋಡಾ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. 11 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ತಾಯಿಯ ಅಂತಿಮ ಸಂಸ್ಕಾರಕ್ಕೆ ಹಣವಿಲ್ಲದ ಕಾರಣ ಮೃತದೇಹದ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡಿದ್ದಾಳೆ. ಅಪ್ರಾಪ್ತ ಬಾಲಕಿ ಭಿಕ್ಷೆ ಬೇಡುತ್ತಾ ತನ್ನ ತಾಯಿಯ ಅಂತ್ಯಕ್ರಿಯೆಗೆ ಹಣ ಹೊಂದಿಸಲು ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆಲವು ತಿಂಗಳ ಹಿಂದೆಯಷ್ಟೇ ಅನಾರೋಗ್ಯದಿಂದ ತನ್ನ ತಂದೆಯನ್ನು ಕಳೆದುಕೊಂಡಿದ್ದ ಬಾಲಕಿ, ಇದೀಗ ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದಾಳೆ. ಅನಾರೋಗ್ಯದಿಂದ ಸಾವನ್ನಪ್ಪಿದ ಬಳಿಕ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇದೀಗ ಮಗಳನ್ನು ಬಿಟ್ಟು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಕಿಸ್ ಮಾಡ್ಕೊಂಡು ಪ್ರಯಾಣಿಸಿದ ಜೋಡಿ
ತಾಯಿಯ ಮೃತದೇಹದ ಮುಂದೆ ಕುಳಿತು ಬಾಲಕಿ ಬಿಕ್ಷೆ ಬೇಡುತ್ತಿರುವುದನ್ನು ಕಂಡು ಸಾಕಷ್ಟು ಜನರು ನೆರವಿಗೆ ಧಾವಿಸಿದ್ದಾರೆ. ಪ್ರಕರಣದ ತನಿಖೆಗೆ ಬಂದಿದ್ದ ಪೊಲೀಸ್ ಅಧಿಕಾರಿಗಳು ಕೂಡ ಆಕೆಯ ಪರಿಸ್ಥಿತಿಯನ್ನು ಮನಗಂಡು ಸಹಾಯ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಜನರು ಆನ್ಲೈನ್ ಮೂಲಕ ಬಾಲಕಿಗೆ ಹಣದ ಸಹಾಯ ಮಾಡಲು ಮುಂದಾಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ