AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಕಿಸ್ ಮಾಡ್ಕೊಂಡು ಪ್ರಯಾಣಿಸಿದ ಜೋಡಿ

ವಿಡಿಯೋದಲ್ಲಿ ಜೋಡಿಯೊಂದು ಅಪ್ಪಿಕೊಂಡು ನಿಂತು ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ ಅವರಿಗೆ ಸೀಟು ಸಿಕ್ಕಿದೆ. ಬಳಿಕ ಪರಸ್ಪರ ಪಕ್ಕದಲ್ಲಿ ಕುಳಿತು ಯುವತಿ ಪ್ರಿಯಕರನಿಗೆ ಮುತ್ತಿಕ್ಕುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

Video Viral: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಕಿಸ್ ಮಾಡ್ಕೊಂಡು ಪ್ರಯಾಣಿಸಿದ ಜೋಡಿ
ಮೆಟ್ರೋದಲ್ಲಿ ಕಿಸ್ ಮಾಡ್ಕೊಂಡು ಪ್ರಯಾಣಿಸಿದ ಜೋಡಿImage Credit source: instagram
ಅಕ್ಷತಾ ವರ್ಕಾಡಿ
|

Updated on: Aug 20, 2024 | 9:47 AM

Share

ಎಷ್ಟೋ ಸಲ ಕೆಲವೊಂದಿಷ್ಟು ಜೋಡಿ ಅವರಿರುವ ಜಾಗವನ್ನೇ ಮರೆತು ಸರಸ ಸಲ್ಲಾಪದಲ್ಲಿ ತೊಡಗಿಸಿಕೊಳ್ಳುತ್ತಾರೆ ಇದೀಗ ದೆಹಲಿ ಮೆಟ್ರೋದಲ್ಲಿ ಜೋಡಿಯೊಂದು ಪರಸ್ಪರ ಚುಂಬಿಸುತ್ತಾ ಪ್ರಯಾಣಿಸಿದ್ದು, ಪ್ರಯಾಣಿಕರೊಬ್ಬರು ತಮ್ಮ ಫೋನಿನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದು, ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಜೋಡಿಯ ಅಸಭ್ಯ ವರ್ತನೆಗೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

delhi.connection ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗುತ್ತಿದೆ. ವಿಡಿಯೋ ಹಂಚಿಕೊಂಡ ಕೇವ ಎರಡೇ ದಿನದಲ್ಲಿ 1ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಮಧ್ಯರಾತ್ರಿ ಪಾರ್ಕ್​​ನಲ್ಲಿ ಯುವಕನ ಮುಂದೆ ಬೆತ್ತಲೆಯಾಗಿ ಲೈಂಗಿಕ ದೌರ್ಜನ್ಯ ಎಸಗಿದ ಮಹಿಳೆ

ವೈರಲ್ ಆಗಿರುವ ವಿಡಿಯೋದಲ್ಲಿ ಮೆಟ್ರೋದಲ್ಲಿ ಜೋಡಿಯೊಂದು ಅಪ್ಪಿಕೊಂಡು ನಿಂತು ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ ಅವರಿಗೆ ಮೆಟ್ರೋದಲ್ಲಿ ಸೀಟು ಸಿಕ್ಕಿದೆ. ಪರಸ್ಪರ ಪಕ್ಕದಲ್ಲಿ ಕುಳಿತು ಯುವತಿ ಪ್ರಿಯಕರನಿಗೆ ಮುತ್ತಿಕ್ಕುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ನೋಡಿ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ