Gold Paan : ಈ ಪಾನ್ ಬೀಡಾದ ಬೆಲೆ ಬರೋಬ್ಬರಿ 1 ಲಕ್ಷ ರೂ.; ಏನಿದರ ವಿಶೇಷತೆ?
20, 30 ರೂಪಾಯಿಗೆ ಸಿಗುವ ಪಾನ್ ಬೀಡಾ ಬಿಟ್ಟು ಲಕ್ಷ ಲಕ್ಷ ಹಣ ಖರ್ಚು ಮಾಡಲು ಈ ಪಾನ್ನಲ್ಲಿ ಅಂತಹ ವಿಶೇಷತೆ ಏನಿದೆ ಅಂತಾ ನಿಮಗೆ ಅನಿಸಬಹುದು. ಆದರೆ ಇದು ಸಾಮಾನ್ಯ ಪಾನ್ ಅಲ್ಲ, ತೆಳುವಾದ ಬಂಗಾರದ ಲೇಪನದಿಂದ ತಯಾರಿಸಲಾದ ಪಾನ್. ಇನ್ನಷ್ಟು ವಿವರ ಇಲ್ಲಿದೆ ಓದಿ.
ಊಟ ಆದ ಮೇಲೆ ಒಂದ್ ಪಾನ್ ತಿಂದರೆ ಅಜೀರ್ಣದ ಸಮಸ್ಯೆ ಇರುವುದಿಲ್ಲ, ತಿಂದ ಆಹಾರ ಸರಿಯಾಗಿ ಜೀರ್ಣ ಆಗುತ್ತೆ ಎಂದು ಸಾಕಷ್ಟು ಜನರು ಪಾನ್ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದಲ್ಲದೇ ಮದುವೆಯಂತಹ ಶುಭ ಸಮಾರಂಭ ಇದ್ದಾಗ ಪಾನ್ ಬೀಡಾದ ವ್ಯವಸ್ಥೆ ಮಾಡಿರುತ್ತಾರೆ. ಸಾಮಾನ್ಯವಾಗಿ ಪಾನ್ ಬೀಡಾಗೆ 20 ರೂಪಾಯಿ ಇರುತ್ತದೆ. ಆದರೆ ಎಂದಾದರೂ ಲಕ್ಷ ರೂ. ಬೆಲೆ ಬಾಳುವ ಬೀಡಾವನ್ನು ತಿಂದಿದ್ದೀರಾ? ಸದ್ಯ ಇದಕ್ಕೆ ಸಂಬಂಧಿಸಿದ ಫೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮುಂಬೈನ ಮಹೀಮ್ ಪಾನ್ ಸ್ಟಾಲ್ನಲ್ಲಿ ಸಿಗುವ ಈ ದುಬಾರಿ ಪಾನ್ ಬೀಡಾಗೆ ಎಲ್ಲಿಲ್ಲದ ಬೇಡಿಕೆ. ಈ ಅಂಗಡಿಯ ಮಾಲೀಕ ನೌಶಾದ್ ಶೇಖ್. ಎಂಬಿಎ ಪದವೀಧರ ನೌಶಾದ್ ಶೇಖ್ ಸಾಕಷ್ಟು ಕಂಪನಿಗಳ ಉದ್ಯೋಗ ತೊರೆದು ಪಾನ್ ಬೀಡಾ ಸ್ಟಾಲ್ ನಡೆಸುತ್ತಿದ್ದಾರೆ.
View this post on Instagram
ಇದನ್ನೂ ಓದಿ: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಕಿಸ್ ಮಾಡ್ಕೊಂಡು ಪ್ರಯಾಣಿಸಿದ ಜೋಡಿ
20, 30 ರೂಪಾಯಿಗೆ ಸಿಗುವ ಪಾನ್ ಬೀಡಾ ಬಿಟ್ಟು ಲಕ್ಷ ಲಕ್ಷ ಹಣ ಖರ್ಚು ಮಾಡಲು ಈ ಪಾನ್ನಲ್ಲಿ ಅಂತಹ ವಿಶೇಷತೆ ಏನಿದೆ ಅಂತಾ ನಿಮಗೆ ಅನಿಸಬಹುದು. ಆದರೆ ಇದು ಸಾಮಾನ್ಯ ಪಾನ್ ಅಲ್ಲ, ತೆಳುವಾದ ಬಂಗಾರದ ಲೇಪನದಿಂದ ತಯಾರಿಸಲಾದ ಪಾನ್. ಇದಲ್ಲದೇ ಇದಕ್ಕೆ ಸಾಕಷ್ಟು ಡ್ರೈ ಫೂಟ್ಸ್ಗಳನ್ನು ಹಾಕುವುದರಿಂದ ಇದರ ಬೆಲೆ ಇಷ್ಟೊಂದು ಎಂದು ಹೇಳಲಾಗುತ್ತದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:45 am, Tue, 20 August 24