ಉತ್ತರ ಪ್ರದೇಶ: ಚಲಿಸುತ್ತಿರುವ ಜಾಯಿಂಟ್ ವೀಲ್ನಿಂದ ಬಾಲಕಿ ಆಯಾತಪ್ಪಿ ಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಲಖಿಂಪುರ ಖೇರಿಯ ನಿಘಾಸನ್ ಪ್ರದೇಶದ ರಾಕೆಹ್ತಿ ಗ್ರಾಮದ ಜಾತ್ರೆಯಲ್ಲಿ ನಡೆದ ಈ ಆಘಾತಕಾರಿ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕಿ ಜಾಯಿಂಟ್ ವೀಲ್ನಿಂದ ಹೊರಬಿದಿದ್ದು, ಸುಮಾರು 60 ಅಡಿ ಎತ್ತರದಲ್ಲಿ ನೇತಾಡುತ್ತಾ ತನ್ನ ಪ್ರಾಣವನ್ನು ಉಳಿಸಿದ್ದಾಳೆ. ಆಕೆ ಜಾಯಿಂಟ್ ವೀಲ್ನ ಕಬ್ಬಿಣದ ಸರಳು ಹಿಡಿದು ನೇತಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಾಲಕಿ ಜಾರಿಬೀಳುವುದನ್ನು ಮತ್ತು ರಾಡ್‌ನಲ್ಲಿ ತೂಗಾಡುತ್ತಿರುವುದನ್ನು ಗಮನಿಸಿದ ಅಲ್ಲಿದ್ದ ಜನರು ಆಕೆಯನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
The girl got hung up on the big swing at the fair and kept swinging for about a minute, Lakhimpur Khiri
pic.twitter.com/nzNCIqkrYA— Ghar Ke Kalesh (@gharkekalesh) December 5, 2024
ಇದನ್ನೂ ಓದಿ: Viral Video: ಉಂಗುರು ಹುಡುಕುವ ಶಾಸ್ತ್ರದಲ್ಲಿ ಪರಸ್ಪರ ಕಿತ್ತಾಡಿಕೊಂಡ ನವ ಜೋಡಿ
ಬಾಲಕಿ ಸುರಕ್ಷಿತವಾಗಿದ್ದಾರೆ ಎಂದು ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ನಿಗಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. @gharkekalesh ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಡಿ.05 ರಂದು ಹಂಚಿಕೊಂಡಿರುವ ವಿಡಿಯೋ ಒಂದೇ ದಿನದಲ್ಲಿ 30 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Fri, 6 December 24