Viral Video: ತನ್ನ ಗೆಳೆಯನ ಜತೆ ಬೇರೆ ಹುಡುಗಿಯನ್ನು ನೋಡಿ, ಮೆಟ್ರೋ ನಿಲ್ದಾಣದಲ್ಲೇ ಜಗಳವಾಡಿದ ಯುವತಿ

ಪ್ರೇಮಿಗಳ ದಿನದಂದು ತನ್ನ ಜತೆ ಇರಬೇಕಿದ್ದ ಗೆಳೆಯ ಬೇರೆ ಹುಡುಗಿಯ ಜತೆ ಇರುವುದನ್ನು ನೋಡಿ ಸಹಿಸಲಾಗದ ಯುವತಿ ಮೆಟ್ರೋ ನಿಲ್ದಾಣದಲ್ಲಿಯೇ ಆತನಿಗೆ ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಗೆಳೆಯನ ಬಗ್ಗೆ ಹತ್ತಾರು ಕನಸುಗಳನ್ನು ಕಂಡಿದ್ದ ಆಕೆ ತನಗೆ ಪ್ರೇಮಿಗಳ ದಿನದ ಶುಭಾಶಯ ತಿಳಿಸಬಹುದು ಎಂದು ಕಾದಿದ್ದಳು ಆದರೆ ಆತ ಬೇರೊಂದು ಹುಡುಗಿ ಜತೆ ಬ್ಯುಸಿಯಾಗಿದ್ದ. ಮೆಟ್ರೋ ನಿಲ್ದಾಣದ ಪ್ಲಾಟ್​ಫಾರಂನಲ್ಲಿ ನಿಂತಿರುವಾಗ ಆಕೆಯ ಕಣ್ಣಿಗೆ ಅಚಾನಕ್ಕಾಗಿ ಆತ ಬಿದ್ದಿದ್ದಾನೆ, ಜತೆಗೆ ಹುಡುಗಿಯೂ ಇರುವುದನ್ನು ನೋಡಿದ ಆಕೆಗೆ ಬೇಸರ ಉಂಟಾಗಿತ್ತು, ಕೂಡಲೇ ಆತನ ಬಳಿ ಹೋಗಿ ಜಗಳವಾಡಿದ್ದಾಳೆ.

Viral Video: ತನ್ನ ಗೆಳೆಯನ ಜತೆ ಬೇರೆ ಹುಡುಗಿಯನ್ನು ನೋಡಿ, ಮೆಟ್ರೋ ನಿಲ್ದಾಣದಲ್ಲೇ ಜಗಳವಾಡಿದ ಯುವತಿ
ಮೆಟ್ರೋ

Updated on: Feb 16, 2025 | 11:47 AM

ಪ್ರೇಮಿಗಳ ದಿನದಂದು ತನ್ನ ಜತೆ ಇರಬೇಕಿದ್ದ ಗೆಳೆಯ ಬೇರೆ ಹುಡುಗಿಯ ಜತೆ ಇರುವುದನ್ನು ನೋಡಿ ಸಹಿಸಲಾಗದ ಯುವತಿ  ದೆಹಲಿ ಮೆಟ್ರೋ ನಿಲ್ದಾಣದಲ್ಲಿಯೇ ಆತನಿಗೆ ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಗೆಳೆಯನ ಬಗ್ಗೆ ಹತ್ತಾರು ಕನಸುಗಳನ್ನು ಕಂಡಿದ್ದ ಆಕೆ ತನಗೆ ಪ್ರೇಮಿಗಳ ದಿನದ ಶುಭಾಶಯ ತಿಳಿಸಬಹುದು ಎಂದು ಕಾದಿದ್ದಳು ಆದರೆ ಆತ ಬೇರೊಂದು ಹುಡುಗಿ ಜತೆ ಬ್ಯುಸಿಯಾಗಿದ್ದ.

ಮೆಟ್ರೋ ನಿಲ್ದಾಣದ ಪ್ಲಾಟ್​ಫಾರಂನಲ್ಲಿ ನಿಂತಿರುವಾಗ ಆಕೆಯ ಕಣ್ಣಿಗೆ ಅಚಾನಕ್ಕಾಗಿ ಆತ ಬಿದ್ದಿದ್ದಾನೆ, ಜತೆಗೆ ಹುಡುಗಿಯೂ ಇರುವುದನ್ನು ನೋಡಿದ ಆಕೆಗೆ ಬೇಸರ ಉಂಟಾಗಿತ್ತು, ಕೂಡಲೇ ಆತನ ಬಳಿ ಹೋಗಿ ಜಗಳವಾಡಿದ್ದಾಳೆ. ಜಗಳ ತಾರಕ್ಕೇರುತ್ತಿದ್ದಂತೆ ಆಕೆಯನ್ನು ನೆಲಕ್ಕೆ ತಳ್ಳಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ವೈರಲ್ ಆಗಿರುವ ವಿಡಿಯೋದಲ್ಲಿ ಕೆಂಪು ಉಡುಪಿನಲ್ಲಿರುವ ಯುವತಿಯೊಬ್ಬಳು ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬನನ್ನು ಪ್ರಶ್ನಿಸುತ್ತಿರುವುದನ್ನು ಕಾಣಬಹುದು.

ಇಬ್ಬರ ನಡುವೆ ಜಗಳ ತೀವ್ರಗೊಳ್ಳುತ್ತಿದ್ದಂತೆ ಆ ಯುವಕ ಆಕೆಯನ್ನು ನೆಲಕ್ಕೆ ತಳ್ಳುತ್ತಾನೆ. ಆತನನ್ನು ಆಕೆ ಕೋಪದಿಂದ ಗದರಿಸುತ್ತಾಳೆ. ಈ ವೀಡಿಯೊ 50 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಪೋಸ್ಟ್‌ಗೆ 600 ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ಘರ್ಷಣೆಗಳು ತಪ್ಪು ಎಂದು ಕೆಲವರು ಹೇಳಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ