Viral : ವ್ಯಾಲೆಂಟೈನ್ಸ್ ಡೇಯಂದು ಮಾಜಿ ಪ್ರೇಮಿಯ ಮನೆಗೆ 100 ಪಿಜ್ಜಾ ಆರ್ಡರ್ ಮಾಡಿ ಸೇಡು ತೀರಿಸಿಕೊಂಡ ಯುವತಿ, ವಿಡಿಯೋ ವೈರಲ್
ಪ್ರೀತಿಸಿದವರು ಕೈ ಕೊಟ್ಟರೆ ಆ ನೋವನ್ನು ಮರೆಯಲಾಗದು. ಕೆಲವರು ಬ್ರೇಕಪ್ ನೋವಿನಿಂದ ಹೊರ ಬರಲಾರದೆ ಜೀವ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಾರೆ. ಕೆಲವರು ಕೈ ಕೊಟ್ಟ ಹುಡುಗಿಗೆ ನಾನಾ ರೀತಿಯಲ್ಲಿ ಹಿಂಸೆ ನೀಡುತ್ತಾರೆ. ಆದರೆ ಇಲ್ಲೊಬ್ಬ ಯುವತಿಯೂ ಕೈ ಕೊಟ್ಟು ಪ್ರೇಮಿಗೆ ಸೇಡು ತೀರಿಸಿಕೊಳ್ಳಲು ಮಾಜಿ ಗೆಳೆಯನ ಮನೆಗೆ ಬರೋಬ್ಬರಿ 100 ಪಿಜ್ಜಾಗಳನ್ನು ಆರ್ಡರ್ ಮಾಡಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಪ್ರೀತಿ ಮಾಯೆ ಹುಷಾರು ಕಣ್ಣೀರು ಮಾರೋ ಬಜಾರು ಎನ್ನುವ ಹಾಡಿದೆ. ಪ್ರೀತಿಯಲ್ಲಿ ಬಿದ್ದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಅದರಲ್ಲಿಯೂ ಈಗಿನ ಕಾಲದಲ್ಲಿ ಪ್ರಾಮಾಣಿಕವಾಗಿ ಪ್ರೀತಿಸುವವರು ಸಿಗುವುದೇ ವಿರಳ. ಕೆಲವರು ಸಣ್ಣಪುಟ್ಟ ಕಾರಣಗಳಿಗೆ ಬ್ರೇಕಪ್ ಮಾಡಿಕೊಂಡರೆ, ಇನ್ನೂ ಕೆಲವರು ಸಂಗಾತಿಗೆ ಕೈ ಕೊಡುತ್ತಾರೆ. ಆದರೆ ಇಲ್ಲೊಬ್ಬ ಯುವತಿಯೂ ತನ್ನಿಂದ ದೂರವಾದ ಪ್ರೇಮಿಗೆ ವಿಭಿನ್ನವಾಗಿ ಸೇಡು ತೀರಿಸಿಕೊಂಡಿದ್ದಾಳೆ. 24 ವರ್ಷದ ಆಯುಷಿ ರಾವತ್ ಎಂಬ ಯುವತಿಯೂ ಪ್ರೇಮಿಗಳ ದಿನದಂದು ತನ್ನ ಮಾಜಿ ಗೆಳೆಯನ ಮನೆಗೆ ಬರೋಬ್ಬರಿ 100 ಪಿಜ್ಜಾಗಳನ್ನು ಆರ್ಡರ್ ಮಾಡಿದ್ದಾಳೆ. ಹಣ ಪಾವತಿ ಮಾಡಿಲ್ಲ. ಡೆಲಿವರಿ ವೇಳೆ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿದ್ದು, ಈ ಘಟನೆಯೂ ಗುರುಗಾಂವ್‌ನಲ್ಲಿ ನಡೆದಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಯಶ್ ಹಾಗೂ ಆಯುಷಿ ರಾವತ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ನಡುವೆ ಸಣ್ಣ ಪುಟ್ಟ ವಿಷಯಕ್ಕೆ ಮನಸ್ತಾಪವೊಂದು ಮೂಡಿತ್ತು. ಇದೇ ವೇಳೆ ಎಲ್ಲವನ್ನು ಮರೆತು ಪ್ರೀತಿ ಮುಂದುವರಿಸಲು ಆಯುಷಿ ಬಯಸಿದ್ದಳು. ಆದರೆ ಪ್ರಿಯತಮ ಯಶ್ ಸಂಬಂಧ ಮುಂದುವರೆಸಲು ಸಿದ್ಧವಿಲ್ಲದೇ ಬ್ರೇಕಪ್ ಮಾಡಿಕೊಂಡು ದೂರವಾಗಿದ್ದನು. ತನ್ನ ಪ್ರೇಮಿ ಕೈ ಕೊಟ್ಟ ಎನ್ನುವ ನೋವು ಆಕೆಯನ್ನು ಕಾಡಿತ್ತು. ಆದರೆ ಆಯುಷಿಗೆ ಮಾತ್ರ ಆ ನೋವಿನಿಂದ ಹೊರ ಬರಲು ಸಾಧ್ಯವಾಗಲಿಲ್ಲ.
AMAZING 🚨 Girl seeks revenge from Ex-Boyfriend on Valentine’s Day 😂🔥
24-year-old Ayushi Rawat from Gurgaon sent 100 cash-on-delivery pizzas to her ex-boyfriend’s house on Valentine’s Day.
Yash Sanghvi, a resident of Sector 53, ended up arguing with the delivery person 🤣… pic.twitter.com/EF3CYvjBWM
— Times Algebra (@TimesAlgebraIND) February 14, 2025
ಹೀಗಿರುವಾಗ ಪ್ರೇಮಿಗಳ ದಿನದಂದು ಮಾಜಿ ಪ್ರಿಯತಮನ ನೆನಪು ಕಾಡಿದ್ದು, ತನಗೆ ಮೋಸ ಮಾಡಿದವನ ವಿರುದ್ಧ ವಿಭಿನ್ನವಾಗಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಹೌದು, ಆನ್‌ಲೈನ್ ಮೂಲಕ 100 ಪಿಜ್ಜಾಗಳನ್ನು ಮಾಜಿ ಗೆಳೆಯನ ಮನೆ ವಿಳಾಸಕ್ಕೆ ಆರ್ಡರ್ ಮಾಡಿದ್ದಾಳೆ. ಆದರೆ ಆನ್‌ಲೈನ್ ಮೂಲಕ ಹಣ ಪಾವತಿ ಮಾಡದೇ, ಡೆಲಿವರಿ ವೇಳೆ ಹಣ ಪಾವತಿ ಮಾಡುವ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇಗೆ ಬಾಡಿಗೆ ಬಾಯ್ ಫ್ರೆಂಡ್: ಬೆಂಗಳೂರಿನಲ್ಲಿ ಸಂಚನ ಮೂಡಿಸಿದ QR ಕೋಡ್
ಟೈಮ್ಸ್ ಅಲ್ಗೆಬ್ರಾ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ, ಫುಡ್ ಡೆಲಿವರಿ ಏಜೆಂಟ್ 100 ಪಿಜ್ಜಾಗಳನ್ನು ತಲುಪಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಆರ್ಡರ್ ಮಾಡಿರುವ ಆ ವ್ಯಕ್ತಿಯನ್ನು ಸಂಪರ್ಕಿಸುತ್ತಿರುವುದನ್ನು ಕಾಣಬಹುದು. ಆದರೆ ಯಶ್ ಡೆಲಿವರಿ ಏಜೆಂಟ್ ನೊಂದಿಗೆ ವಾಗ್ವಾದಕ್ಕೆ ಇಳಿದಿರುವುದನ್ನು ಕಾಣಬಹುದು. ಏನೇ ಆಗಲಿ, ಪ್ರಿಯತಮೆಯ ಸೇಡಿಗೆ ಮಾಜಿ ಗೆಳೆಯನು ಹದಿನೈದು ಸಾವಿರ ರೂಪಾಯಿ ಪಾವತಿಸಬೇಕಾಗಿ ಬಂದಿದೆ. ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದು, ಬಳಕೆದಾರರೊಬ್ಬರು, ‘ಇದು ಆಹಾರ ವಿತರಣಾ ಕಂಪನಿಯ ವೇದಿಕೆಯ ಮಾರ್ಕೆಟಿಂಗ್ ಸ್ಟಂಟ್ ‘ ಎಂದಿದ್ದಾರೆ. ಮತ್ತೊಬ್ಬರು, “ಇದು ಬಹುಶಃ ಜಾಹೀರಾತಾಗಿರಬಹುದು, ಇಲ್ಲದಿದ್ದರೆ, ಇದನ್ನು ಯಾರು ಮತ್ತು ಯಾರಿಗಾಗಿ ಆರ್ಡರ್ ಮಾಡಿದ್ದಾರೆಂದು ಯಾರಿಗೆ ಹೇಗೆ ತಿಳಿಯುತ್ತದೆ?. ಇಲ್ಲಿ ಬ್ರ್ಯಾಂಡ್ ಹೆಸರನ್ನು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




