Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಲೆಂಟೈನ್ಸ್ ಡೇಗೆ ಬಾಡಿಗೆ ಬಾಯ್ ಫ್ರೆಂಡ್: ಬೆಂಗಳೂರಿನಲ್ಲಿ ಸಂಚನ ಮೂಡಿಸಿದ QR ಕೋಡ್​​

ಫೆಬ್ರವರಿ 14 ಇಂದು ಪ್ರೇಮಿಗಳ ದಿನ. ಪ್ರೇಮಿಗಳು ಇವತ್ತು ಪ್ರೇಮೋಲ್ಲಾಸದಲ್ಲಿದ್ದಾರೆ. ತಮ್ಮ ದಿನವನ್ನ ಸ್ವಂತವಾಗಿಸಿಕೊಳ್ಳಲು ಪ್ರೇಮ ಲೋಕಕ್ಕೆ ಜಾರಿದ್ದಾರೆ. ಇನ್ನೂ ಕೆಲವರು ಸಂಗಾತಿ ಇಲ್ಲದೇ ನಮಗೆ ಯಾರು ಬೀಳ್ತಾರೆ ಗುರು ಎಂದು ಕೊರಗುತ್ತಿದ್ದಾರೆ. ಅವರಲ್ಲಿ ಹುಡುಗ, ಹುಡುಗಿ ಇಬ್ಬರೂ ಸೇರಿದ್ದಾರೆ. ವಿಷಯ ಹೀಗಿರುವಾಗ ಬೆಂಗಳೂರಿನಲ್ಲಿ ಬಾಡಿಗೆಗೆ‌ ಬಾಯ್ ಫ್ರೆಂಡ್ ಪೋಸ್ಟ್​ರ್​ ಭಾರೀ ಸಂಚಲನ ಮೂಡಿಸಿದೆ. ಹಾಗಾದ್ರೆ, ಈ ಕ್ಯೂರ್​ ಕೋಡ್​ನ ಅಸಲಿಯತ್ತು ಏನು?

ವ್ಯಾಲೆಂಟೈನ್ಸ್ ಡೇಗೆ ಬಾಡಿಗೆ ಬಾಯ್ ಫ್ರೆಂಡ್: ಬೆಂಗಳೂರಿನಲ್ಲಿ ಸಂಚನ ಮೂಡಿಸಿದ QR ಕೋಡ್​​
Boy Friend poster
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 14, 2025 | 4:49 PM

ಬೆಂಗಳೂರು, (ಫೆಬ್ರವರಿ 14): ವ್ಯಾಲೆಂಟೈನ್ಸ್ ಡೇಗೆ ಬಾಯ್ ಫ್ರೆಂಡ್ ಬೇಕಾ…? ಹಾಗಾದ್ರೆ ಜಸ್ಟ್ ಸ್ಕ್ಯಾನ್ ಮಾಡಿ, ಪೇ ಮಾಡಿ. ದುಡ್ಡು ಕೊಟ್ರೆ ಬಾಡಿಗೆಗೆ‌ ಬಾಯ್ ಫ್ರೆಂಡ್ ಸಿಗುತ್ತಾನೆ. ಹೌದು….ಅಚ್ಚರಿ ಅನ್ನಿಸಿದರೂ ಸತ್ಯ. ಇವತ್ತು ಒಂದು ದಿನಕ್ಕೆ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್ ಮಾಡಲು ಬಾಯ್ ಫ್ರೆಂಡ್ ಸಿಗುತ್ತಾನೆ. ಬೆಂಗಳೂರಿನಲ್ಲಿ ಹೀಗೊಂದು ವಿಚಿತ್ರ ಆಚರಣೆಗೆ ಮುಂದಾಗಿದ್ದಾರೆ. ಕೇವಲ 389ರೂ ‌ಕೊಟ್ಟರೆ ಸಾಕು ಒಂದು ದಿನದ ಬಾಯ್ ಫ್ರೆಂಡ್ ಲಭ್ಯ. ನಗರದ ಜಯನಗರ, ಬನಶಂಕರಿ ಭಾಗದಲ್ಲಿ ಈ ರೀತಿ ಪೋಸ್ಟರ್ ರಾರಾಜಿಸುತ್ತಿವೆ. ಗೋಡೆಗಳಿಗೆ ಈ ರೀತಿಯ ವಿಚಿತ್ರ ಪೋಸ್ಟರಗಳನ್ನು ಅಂಟಿಸಲಾಗಿದ್ದು, ಬಾಯ್ ಫ್ರೆಂಡ್‌ ಬೇಕಾದ್ರೆ ಸ್ಕ್ಯಾನ್ ಮಾಡಿ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.

‘Rent a BOYFRIEND’ ಹೆಸರಲ್ಲಿ ಕ್ಯೂ-ಆರ್ ಕೋಡ್​ ಸೃಷ್ಟಿಸಿ ಸಂಗಾತಿ ಇಲ್ಲದವರ ಎದೆಬಡಿತ ಹೆಚ್ಚಿಸಿದ್ದಾರೆ. ನಿಮಗೆ ಯಾರೂ ಬಾಯ್​​ ಫ್ರೆಂಡ್ ಇಲ್ವಾ? ಹಾಗಿದ್ದರೆ ಯಾಕೆ ಚಿಂತೆ ಮಾಡ್ತೀರಿ. ಇಲ್ಲಿರುವ QR ಕೋಡ್​​ಗೆ ಸ್ಕ್ಯಾನ್ ಮಾಡಿ ಕೇವಲ 389 ರೂಪಾಯಿ ಪೇ ಮಾಡಿ. ಒಂದು ದಿನ ಸೆಲೆಬ್ರೇಟ್ ಮಾಡೋಕೆ ಹುಡುಗ ಸಿಗ್ತಾನೆ ಎಂದು ಪೋಸ್ಟರ್​ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: Valentines Day 2025: ಫೆ 14ರಂದೇ ಪ್ರೇಮಿಗಳ ದಿನ ಆಚರಿಸುವುದರ ಹಿಂದಿದೆ ಈ ಕಾರಣ, ಇಲ್ಲಿದೆ ಮಾಹಿತಿ

ಈ QR ಕೋಡ್​ ಸ್ಕ್ಯಾನ್ ಮಾಡಿದ್ರೆ ಗೆಳೆಯ ಸಿಗಲ್ಲ. ಇದೊಂದು ಮಾರ್ಕೆಟಿಂಗ್ ತಂತ್ರಗಾರಿಕೆ. ಪ್ರೇಮಿಗಳ ದಿನವನ್ನು ಬಂಡವಾಳವನ್ನಾಗಿಸಿಕೊಂಡ ಕಿಡಿಗೇಡಿಗಳು ಈ ರೀತಿಯ ಪೋಸ್ಟರ್ ಅಂಟಿಸುತ್ತಿದ್ದಾರೆ. ಒಂದು ವೇಳೆ QR ಕೋಡ್ ಸ್ಕ್ಯಾನ್ ಮಾಡಿದ್ರೆ, ಹೆಣ್ಮಕ್ಕಳಿಗೆ ಬೇಕಾಗಿರುವ ಬ್ಯೂಟಿ ಪ್ರಾಡೆಕ್ಟ್​​ಗಳ ಕುರಿತ ಮಾಹಿತಿ ಸಿಗಲಿದೆ.

ಈ ಪೋಸ್ಟರ್ ನೋಡಿದ‌ ಕೆಲವರು ವಿರೋಧ ವ್ಯಕ್ತಪಡಿಸಿದ್ದು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್