AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನೂರು ಪ್ರಕರಣ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ತಮಿಳುನಾಡು ಸರ್ಕಾರ

ಚಾಮರಾಜನಗರ ಜಿಲ್ಲೆಯ ಹನೂರು ಬಳಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರವು ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ನೆರೆ ರಾಜ್ಯದ ವಿಧಾನ ಸಭೆಯಲ್ಲಿ ಕರ್ನಾಟಕದಲ್ಲಿ ನಡೆದ ಘಟನೆ ಸಂಬಂಧ ಭಾರಿ ಚರ್ಚೆಯಾಗಿದ್ದು, ಪ್ರಕರಣದ ತನಿಖೆಯನ್ನು ಕರ್ನಾಟಕ ಸಿಬಿಐಗೆ ವಹಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.

ಹನೂರು ಪ್ರಕರಣ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ತಮಿಳುನಾಡು ಸರ್ಕಾರ
ತಲಾ 10 ಲಕ್ಷ ಪರಿಹಾರ ಘೋಷಿಸಿದ ತಮಿಳುನಾಡು ಸರ್ಕಾರ Image Credit source: PTI
ದಿಲೀಪ್​, ಚೌಡಹಳ್ಳಿ
| Edited By: |

Updated on:Aug 18, 2026 | 1:55 PM

Share

ಚೆನ್ನೈ, ಆಗಸ್ಟ್​​ 18: ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿಯಾದ ಘಟನೆಯನ್ನು ತಮಿಳುನಾಡು ಸಿಎಂ ವಿಜಯ್​​ ಖಂಡಿಸಿದ ಬೆನ್ನಲ್ಲೇ, ಮೃತ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರವನ್ನೂ ನೆರೆ ರಾಜ್ಯದ ಸರ್ಕಾರ ಘೋಷಿಸಿದೆ. ಅಲ್ಲಿನ ವಿಧಾನ ಸಭೆಯಲ್ಲೂ ಹನೂರು ಶೂಟೌಟ್​​ ವಿಚಾರ ಪ್ರಸ್ತಾಪವಾಗಿದ್ದು, ಡಿಎಂಕೆ ಮತ್ತು ಎಐಡಿಎಂಕೆ ಮುಖಂಡರು ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ಅರಣ್ಯ ಸಚಿವ ರಂಜಿತ್ ಕುಮಾರ್ ಘೋಷಿಸಿದ್ದು, ಕರ್ನಾಟಕ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.

ತಮಿಳುನಾಡು ಸದನದಲ್ಲಿ ಭಾರಿ ಚರ್ಚೆ

ಹನೂರಿನಲ್ಲಿ ನಡೆದಿರುವ ಘಟನೆ ಬಗ್ಗೆ ತಮಿಳುನಾಡು ವಿಧಾನ ಸಭೆಯಲ್ಲಿ ಭಾರಿ ಚರ್ಚೆಯಾಗಿದ್ದು, ಮೃತರೆಲ್ಲರೂ ತಮಿಳುನಾಡು ಮೂಲದವರು. ಮೆಟ್ಟೂರು ಜಲಾಶಯ ನಿರ್ಮಾಣದಿಂದ ಹನೂರಿನಲ್ಲಿ ಅವರು ವಾಸವಿದ್ದು, ಅವರೆಲ್ಲ ತಮಿಳರು, ಅವರ ರಕ್ಷಣೆಯಾಗಬೇಕು ಎಂಬ ಅಭಿಪ್ರಾಯಗಳು ಸದನದಲ್ಲಿ ವ್ಯಕ್ತವಾಗಿವೆ. ಅರಣ್ಯಾಧಿಕಾರಿಗಳು ಬಿಡುಗಡೆ ಮಾಡಿದ ಫೋಟೋಗಳಲ್ಲಿ ಸ್ಟಿಕ್ಕರ್ ತೆಗೆಯದ ಹೊಸ ಚಪ್ಪಲಿ ಇರುವ ಬಗ್ಗೆಯೂ ಚರ್ಚೆಯಾಗಿದೆ. ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಮತ್ತು ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹನೂರು ಶೂಟೌಟ್‌ಗೆ ಬಿಗ್ ಟ್ವಿಸ್ಟ್: ಅರಣ್ಯ ಇಲಾಖೆ ಸಾಕ್ಷ್ಯಗಳ ಮೇಲೆ ಅನುಮಾನ!

ತೋಮಿಯರ್​ಪಾಳ್ಯಕ್ಕೆ ತಮಿಳುನಾಡಿನ ಮಾಜಿ ಶಾಸರ ಭೇಟಿ

ಮತ್ತೊಂದೆಡೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತೋಮಿಯರ್​ಪಾಳ್ಯಕ್ಕೆ ತಮಿಳುನಾಡಿನ ಮಾಜಿ ಶಾಸರ ತಂಡ ಭೇಟಿ ನೀಡಿದೆ. ತೋಮಿಯರ್​ಪಾಳ್ಯದ ಚರ್ಚ್​ನಲ್ಲಿ ಘಟನೆ ಸಂಬಂಧ ಸಭೆಯನ್ನೂ ನಡೆಸಲಾಗಿದೆ. ತಮಿಳರ ಹತ್ಯೆಯಾಗಿದೆ ಎಂದು ಉಲ್ಲೇಖಿಸಿ ಘಟನೆಯನ್ನು ಖಂಡಿಸಿ ತಮಿಳುನಾಡು ಸಿಎಂ ವಿಜಯ್​​ ಎಕ್ಸ್​​ ಪೋಸ್ಟ್​​ ಮಾಡಿದ್ದ ಬೆನ್ನಲ್ಲೇ ಮಹತ್ವದ ಬೆಳವಣಿಗೆಗಳು ನಡೆದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:54 pm, Tue, 18 August 26

Follow Us
ನಾಗರ ಪಂಚಮಿಯಂದು ದುಂಡಯ್ಯ ಕಾರ್ಣಿಕ ನುಡಿ
ನಾಗರ ಪಂಚಮಿಯಂದು ದುಂಡಯ್ಯ ಕಾರ್ಣಿಕ ನುಡಿ
ವಿನಯ್​ನೇ ನಾಮಿನೇಟ್ ಮಾಡಿದ ಸ್ಪರ್ಧಿ; ಸ್ಟಾರ್ಟಪ್ ಕಾರಣ ನೀಡಿದ ಕಂಟೆಸ್ಟಂಟ್
ವಿನಯ್​ನೇ ನಾಮಿನೇಟ್ ಮಾಡಿದ ಸ್ಪರ್ಧಿ; ಸ್ಟಾರ್ಟಪ್ ಕಾರಣ ನೀಡಿದ ಕಂಟೆಸ್ಟಂಟ್
ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಪ್ರತಿಭಟನೆ: ಬಿಗಿ ಭದ್ರತೆ
ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಪ್ರತಿಭಟನೆ: ಬಿಗಿ ಭದ್ರತೆ
ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ 21 ಕಡೆ ಇಡಿ ಮೆಗಾ ರೇಡ್!
ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ 21 ಕಡೆ ಇಡಿ ಮೆಗಾ ರೇಡ್!
ವಿಟಿಯು ಸಿಂಡಿಕೇಟ್ ಸದಸ್ಯನಿಂದಲೇ ಪರೀಕ್ಷಾ ಗೋಲ್ಮಾಲ್!
ವಿಟಿಯು ಸಿಂಡಿಕೇಟ್ ಸದಸ್ಯನಿಂದಲೇ ಪರೀಕ್ಷಾ ಗೋಲ್ಮಾಲ್!
‘ನೀ ನಂಗೆ ಅಲ್ಲವ’ ಸಿನಿಮಾಗೆ ‘ಬಿಗ್ ಬಾಸ್’ ಮಾಜಿಸ್ಪರ್ಧಿ ರಾಶಿಕಾ ವಿಶ್
‘ನೀ ನಂಗೆ ಅಲ್ಲವ’ ಸಿನಿಮಾಗೆ ‘ಬಿಗ್ ಬಾಸ್’ ಮಾಜಿಸ್ಪರ್ಧಿ ರಾಶಿಕಾ ವಿಶ್
ಕಳಪೆ ಆಹಾರ ಪೂರೈಸುವ ಹೋಟೆಲ್​ಗಳಿಗೆ 5 ಲಕ್ಷ ರೂ. ವರೆಗೆ ದಂಡ!
ಕಳಪೆ ಆಹಾರ ಪೂರೈಸುವ ಹೋಟೆಲ್​ಗಳಿಗೆ 5 ಲಕ್ಷ ರೂ. ವರೆಗೆ ದಂಡ!
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ