AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖನಿಜ ತಿದ್ದುಪಡಿ ಮಸೂದೆ 2026 ಹಿಂಪಡೆಯಲು ಆಗ್ರಹ: ಪ್ರಧಾನಿ ಮೋದಿಗೆ ಪರಮೇಶ್ವರ್ ಪತ್ರ!

ಕೇಂದ್ರದ ಗಣಿಗಾರಿಕೆ ಮತ್ತು ಖನಿಜ ತಿದ್ದುಪಡಿ ಮಸೂದೆ 2026 ಹಿಂಪಡೆಯುವಂತೆ ಆಗ್ರಹಿಸಿ ಡಿಸಿಎಂ ಜಿ. ಪರಮೇಶ್ವರ್ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯಗಳ ಸಾಂವಿಧಾನಿಕ ಹಾಗೂ ಆರ್ಥಿಕ ಅಧಿಕಾರವನ್ನು ಕಸಿಯುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧ ಎಂದು ಆಕ್ಷೇಪಿಸಿದ್ದು, ಎಲ್ಲಾ ರಾಜ್ಯಗಳ ಜೊತೆ ಸಮಾಲೋಚನೆ ನಡೆಸಿ ಒಮ್ಮತದ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಖನಿಜ ತಿದ್ದುಪಡಿ ಮಸೂದೆ 2026 ಹಿಂಪಡೆಯಲು ಆಗ್ರಹ: ಪ್ರಧಾನಿ ಮೋದಿಗೆ ಪರಮೇಶ್ವರ್ ಪತ್ರ!
ಪ್ರಧಾನಿ ಮೋದಿಗೆ ಪರಮೇಶ್ವರ್ ಪತ್ರ!
ಪ್ರಸನ್ನ ಗಾಂವ್ಕರ್​
| Edited By: |

Updated on: Aug 18, 2026 | 1:14 PM

Share

ಮುಖ್ಯಾಂಶಗಳು

  • ಖನಿಜ ತಿದ್ದುಪಡಿ ಮಸೂದೆ 2026 ಹಿಂಪಡೆಯಲು ಪ್ರಧಾನಿಗೆ ಪರಮೇಶ್ವರ್ ಪತ್ರ.
  • ರಾಜ್ಯಗಳ ಸಾಂವಿಧಾನಿಕ ತೆರಿಗೆ ಅಧಿಕಾರ ನಿರ್ಬಂಧಿಸುವ ಅಂಶಗಳಿಗೆ ತೀವ್ರ ಆಕ್ಷೇಪ.
  • ಒಕ್ಕೂಟ ವ್ಯವಸ್ಥೆ ರಕ್ಷಿಸಲು ಎಲ್ಲಾ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಲು ಒತ್ತಾಯ.

ಬೆಂಗಳೂರು, ಆಗಸ್ಟ್ 18: ಗಣಿಗಾರಿಕೆ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2026 ಅನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್ ರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯಗಳ ಸಾಂವಿಧಾನಿಕ ಹಕ್ಕಿಗೆ ಧಕ್ಕೆ

ಖನಿಜ ಹಕ್ಕುಗಳು ಹಾಗೂ ಖನಿಜಯುಕ್ತ ಭೂಮಿಯ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಸಾಂವಿಧಾನಿಕ ಅಧಿಕಾರವನ್ನು ನಿರ್ಬಂಧಿಸುವ ಈ ಮಸೂದೆಯ ಅಂಶಗಳಿಗೆ ಪರಮೇಶ್ವರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂವಿಧಾನದ ರಾಜ್ಯ ಪಟ್ಟಿಯ 49 ಮತ್ತು 50ನೇ ನಮೂದುಗಳ ಅಡಿಯಲ್ಲಿ ಖನಿಜಗಳ ಮೇಲೆ ಶಾಸನಾತ್ಮಕ ಹಾಗೂ ಆರ್ಥಿಕ ಅಧಿಕಾರ ಸಂಪೂರ್ಣವಾಗಿ ರಾಜ್ಯಗಳಿಗೆ ಸೇರಿದ್ದಾಗಿದೆ. 2024ರ ಸುಪ್ರೀಂ ಕೋರ್ಟ್‌ನ ತೀರ್ಪು ಕೂಡ ರಾಜ್ಯಗಳ ಈ ಹಕ್ಕನ್ನು ಸ್ಪಷ್ಟವಾಗಿ ಎತ್ತಿಹಿಡಿದಿದೆ ಎಂಬುದನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಗೆ ವಿರೋಧ: ಸಮಾಲೋಚನೆಗೆ ಒತ್ತಾಯ

ಕೇಂದ್ರ ಸರ್ಕಾರದ ಈ ಏಕಪಕ್ಷೀಯ ನಡೆ ಭಾರತದ ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ಸಂಪೂರ್ಣ ವಿರೋಧವಾಗಿದ್ದು, ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರವು ತಕ್ಷಣವೇ ಈ ಮಸೂದೆಯನ್ನು ಹಿಂಪಡೆದು, ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ ಅರ್ಥಪೂರ್ಣ ಸಮಾಲೋಚನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಸಹಕಾರಿ ಒಕ್ಕೂಟದ ತತ್ವ ಎತ್ತಿಹಿಡಿಯಲು ಮನವಿ

ಸಹಕಾರಿ ಒಕ್ಕೂಟ ವ್ಯವಸ್ಥೆಯ ತತ್ವವನ್ನು ಎತ್ತಿಹಿಡಿಯುವ ಮೂಲಕ ರಾಷ್ಟ್ರೀಯ ಖನಿಜ ಹಿತಾಸಕ್ತಿ ಹಾಗೂ ರಾಜ್ಯಗಳ ಆರ್ಥಿಕ ಹಕ್ಕುಗಳೆರಡನ್ನೂ ರಕ್ಷಿಸುವ ಒಮ್ಮತ ಆಧಾರಿತ ಚೌಕಟ್ಟನ್ನು ರೂಪಿಸಬೇಕು ಎಂದು ಪರಮೇಶ್ವರ್ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿನಯ್​ನೇ ನಾಮಿನೇಟ್ ಮಾಡಿದ ಸ್ಪರ್ಧಿ; ಸ್ಟಾರ್ಟಪ್ ಕಾರಣ ನೀಡಿದ ಕಂಟೆಸ್ಟಂಟ್
ವಿನಯ್​ನೇ ನಾಮಿನೇಟ್ ಮಾಡಿದ ಸ್ಪರ್ಧಿ; ಸ್ಟಾರ್ಟಪ್ ಕಾರಣ ನೀಡಿದ ಕಂಟೆಸ್ಟಂಟ್
ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಪ್ರತಿಭಟನೆ: ಬಿಗಿ ಭದ್ರತೆ
ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಪ್ರತಿಭಟನೆ: ಬಿಗಿ ಭದ್ರತೆ
ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ 21 ಕಡೆ ಇಡಿ ಮೆಗಾ ರೇಡ್!
ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ 21 ಕಡೆ ಇಡಿ ಮೆಗಾ ರೇಡ್!
ವಿಟಿಯು ಸಿಂಡಿಕೇಟ್ ಸದಸ್ಯನಿಂದಲೇ ಪರೀಕ್ಷಾ ಗೋಲ್ಮಾಲ್!
ವಿಟಿಯು ಸಿಂಡಿಕೇಟ್ ಸದಸ್ಯನಿಂದಲೇ ಪರೀಕ್ಷಾ ಗೋಲ್ಮಾಲ್!
‘ನೀ ನಂಗೆ ಅಲ್ಲವ’ ಸಿನಿಮಾಗೆ ‘ಬಿಗ್ ಬಾಸ್’ ಮಾಜಿಸ್ಪರ್ಧಿ ರಾಶಿಕಾ ವಿಶ್
‘ನೀ ನಂಗೆ ಅಲ್ಲವ’ ಸಿನಿಮಾಗೆ ‘ಬಿಗ್ ಬಾಸ್’ ಮಾಜಿಸ್ಪರ್ಧಿ ರಾಶಿಕಾ ವಿಶ್
ಕಳಪೆ ಆಹಾರ ಪೂರೈಸುವ ಹೋಟೆಲ್​ಗಳಿಗೆ 5 ಲಕ್ಷ ರೂ. ವರೆಗೆ ದಂಡ!
ಕಳಪೆ ಆಹಾರ ಪೂರೈಸುವ ಹೋಟೆಲ್​ಗಳಿಗೆ 5 ಲಕ್ಷ ರೂ. ವರೆಗೆ ದಂಡ!
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!