ಮರಣದಂಡನೆ ಶಿಕ್ಷೆ ಜಾರಿ ಹೇಗೆ ಇರಲಿ? ಇಂಜೆಕ್ಷನ್, ಶೂಟ್, ಗ್ಯಾಸ್ ವಿಧಾನ ಬೇಡ, ಗಲ್ಲಿಗೇರಿಸುವ ಪದ್ಧತಿಯೇ ಇರಲಿ ಎಂದ ಸುಪ್ರೀಂ
Supreme Court wants hanging to be continued for death sentence execution: ಭಾರತದಲ್ಲಿ ಮರಣದಂಡನೆ ಜಾರಿಗೊಳಿಸುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಗಲ್ಲಿಗೇರಿಸುವ ಪದ್ಧತಿಗಿಂತ ಕಡಿಮೆ ನೋವು ತರುವ ಇತರ ಪರ್ಯಾಯ ವಿಧಾನಗಳಿಂದ ಮರಣದಂಡನೆ ಜಾರಿಗೊಳಿಸಿ ಎನ್ನುವ ಮನವಿಯನ್ನು ಕೋರ್ಟ್ ತಳ್ಳಿಹಾಕಿದೆ. ಸರಿಯಾದ ವೈಜ್ಞಾನಿಕ ಆಧಾರ ಸಿಗುವವರೆಗೂ ಸದ್ಯಕ್ಕೆ ಮರಣದಂಡನೆ ಪದ್ಧತಿಯೇ ಮುಂದುವರಿಯಲಿ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಮಾನಿಸಿದೆ.

ನವದೆಹಲಿ, ಆಗಸ್ಟ್ 18: ಭಾರತದಲ್ಲಿ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಲು ಪ್ರಸ್ತುತ ಇರುವ ‘ಗಲ್ಲಿಗೇರಿಸುವ’ ಪದ್ಧತಿಯನ್ನೇ ಮುಂದುವರಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಮರಣದಂಡನೆಯನ್ನು ಕಡಿಮೆ ನೋವಿನಿಂದ ಕೂಡಿದ ಇತರ ವಿಧಾನಗಳಾದ ಮಾರಣಾಂತಿಕ ಇಂಜೆಕ್ಷನ್ ಅಥವಾ ಗುಂಡಿಕ್ಕುವ ವಿಧಾನ ಮೂಲಕ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Surpeme Court) ವಜಾಗೊಳಿಸಿದೆ.
ಮರಣದಂಡನೆಯನ್ನು ಗಲ್ಲಿಗೇರಿಸುವ ಬದಲಾಗಿ ಕಡಿಮೆ ನೋವಿನ ವಿಧಾನಗಳನ್ನು ಬಳಸಬೇಕು ಮತ್ತು ಇದು ಘನತೆಯಿಂದ ಕೂಡಿರಬೇಕು ಎಂದು ಕೋರಿ ವಕೀಲ ರಿಷಿ ಮಲ್ಹೋತ್ರಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಗಲ್ಲಿಗೇರಿಸುವಿಕೆಯು ಕ್ರೂರ ಮತ್ತು ನೋವಿನಿಂದ ಕೂಡಿರುತ್ತದೆ. ವ್ಯಕ್ತಿಯ ಘನತೆಗೆ ಕುಂದು ಬರುವಂತಿರುತ್ತದೆ ಎಂಬುದು ಅವರ ವಾದ. ಆದರೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಈ ಅರ್ಜಿಯನ್ನು ತಳ್ಳಿಹಾಕಿದೆ.
ಇದನ್ನು ಓದಿ: 14 ರಾಜ್ಯಗಳ ಮುಖ್ಯಮಂತ್ರಿಗಳ ವಿರುದ್ಧ ಇವೆ ಗಂಭೀರ ಕ್ರಿಮಿನಲ್ ಪ್ರಕರಣಗಳು: ತೆಲಂಗಾಣ ಸಿಎಂ ಮೇಲೆ ಅತೀ ಹೆಚ್ಚು ಕೇಸ್
ಅರ್ಜಿದಾರರ ವಾದದ ಪ್ರಕಾರ, ಗಲ್ಲಿಗೇರಿಸುವ ವ್ಯಕ್ತಿ ದೀರ್ಘಕಾಲ ಬಾಧೆ ಪಡಬೇಕಾಗುತ್ತದೆ. ಆತ ಸತ್ತಿದ್ದಾನೆಂದು ಖಚಿತಪಡಿಸಲು 40 ನಿಮಿಷ ಬೇಕಾಗುತ್ತದೆ. ಆದರೆ, ಗ್ಯಾಸ್ ಚೇಂಬರ್, ಲೆಥಲ್ ಇಂಜೆಕ್ಷನ್, ಶೂಟ್ ವಿಧಾನಗಳಲ್ಲಿ 5 ನಿಮಿಷದಲ್ಲಿ ವ್ಯಕ್ತಿಯ ಸಾವನ್ನು ಖಚಿತಪಡಿಸಬಹುದು.
ಮರಣದಂಡನೆ ವಿಧಾನ ಮುಂದುವರಿಯುತ್ತದೆ, ಆದರೆ, ಇದು ಅಂತಿಮ ತೀರ್ಪಲ್ಲ…
ಸದ್ಯಕ್ಕೆ ದೇಶದಲ್ಲಿ ಮರಣದಂಡನೆಗಾಗಿ ಗಲ್ಲಿಗೇರಿಸುವ ಪದ್ಧತಿಯು ಸಂವಿಧಾನಬದ್ಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದೇ ವೇಳೆ, ಇದು ಅಂತಿಮ ತೀರ್ಪಲ್ಲ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: ಚಂಪತ್ ರಾಯ್, ಅನಿಲ್ ಮಿಶ್ರಾಗೆ ಎಸ್ಐಟಿ ಕ್ಲೀನ್ ಚಿಟ್
ಮರಣದಂಡನೆಗೆ ಸಂಬಂಧಿಸಿದಂತೆ ವೈಜ್ಞಾನಿಕ ಮತ್ತು ವೈದ್ಯಕೀಯ ಸಾಕ್ಷ್ಯಾಧಾರಗಳು ಮುಂದೆ ಬಂದರೆ, ಪರ್ಯಾಯ ಮರಣದಂಡನೆ ಜಾರಿ ವಿಧಾನಗಳ ಕುರಿತು ಮರುಪರಿಶೀಲನೆ ನಡೆಸುವ ಅಧಿಕಾರ ಸರ್ಕಾರಕ್ಕಿದೆ. ಕೇಂದ್ರ ಸರ್ಕಾರವು ಬೇಕಿದ್ದರೆ ತಜ್ಞರ ಸಮಿತಿಯನ್ನು ರಚಿಸಿ ಪರ್ಯಾಯ ವಿಧಾನಗಳ ಬಗ್ಗೆ ಚರ್ಚಿಸಬಹುದು ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
ಸರ್ಕಾರದ ನಿಲುವು: ಈ ಹಿಂದೆ ವಿಚಾರಣೆಯ ವೇಳೆ, ಗಲ್ಲಿಗೇರಿಸುವಿಕೆಗೆ ಬದಲಾಗಿ ಬೇರೆ ಪದ್ಧತಿಯನ್ನು ಅಳವಡಿಸುವುದು ಪ್ರಾಯೋಗಿಕವಾಗಿ ಅಸಾಧ್ಯವೆಂದು ಕೇಂದ್ರ ಸರ್ಕಾರವು ತನ್ನ ಅಫಿಡವಿಟ್‌ನಲ್ಲಿ ತಿಳಿಸಿತ್ತು. ಈ ತೀರ್ಪಿನ ಮೂಲಕ, ಮರಣದಂಡನೆ ಶಿಕ್ಷೆಯ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತನ್ನ ಹಿಂದಿನ ನಿಲುವನ್ನೇ ಎತ್ತಿಹಿಡಿದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




