AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ, ಸುಮ್ನಿರು ಇಲ್ದಿದ್ರೆ ನಿನ್ನನ್ನೂ ಕೋಟೆಯಿಂದ ತಳ್ತೀನಿ, ಪ್ರತ್ಯಕ್ಷದರ್ಶಿಯನ್ನು ಬೆದರಿಸಿದ್ದ ಚೇತನ್

ಪುಣೆ ಲೋಹಗಡ್ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ಭಾವಿ ಪತ್ನಿ ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್, ಕೇತನ್‌ನನ್ನು ಬಂಡೆಯಿಂದ ತಳ್ಳಿ ಹತ್ಯೆ ಮಾಡಿದ್ದಾರೆ. ಪ್ರತ್ಯಕ್ಷದರ್ಶಿ ಸ್ಫೋಟಕ ಹೇಳಿಕೆ, ಡಿಜಿಟಲ್ ಸಾಕ್ಷ್ಯಗಳು, ಮತ್ತು ಅಳಿಸಲಾದ ಚಾಟ್‌ಗಳ ಮರುಪಡೆಯುವಿಕೆ ಈ ಸಂಚನ್ನು ಬಯಲಿಗೆಳೆದಿವೆ. ಆರೋಪಿಗಳು ಕೃತ್ಯಕ್ಕೆ ಪೂರ್ವ ತಯಾರಿ ನಡೆಸಿದ್ದರು. ಮೂವರು ಬಂಧಿತರಾಗಿದ್ದಾರೆ.

ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ, ಸುಮ್ನಿರು ಇಲ್ದಿದ್ರೆ ನಿನ್ನನ್ನೂ ಕೋಟೆಯಿಂದ ತಳ್ತೀನಿ, ಪ್ರತ್ಯಕ್ಷದರ್ಶಿಯನ್ನು ಬೆದರಿಸಿದ್ದ ಚೇತನ್
ಸಿಯಾ ಗೋಯಲ್ Image Credit source: PTI
ನಯನಾ ರಾಜೀವ್
|

Updated on:Sep 28, 2026 | 2:39 PM

Share

ಪುಣೆ, ಸೆಪ್ಟೆಂಬರ್ 28: ಮಹಾರಾಷ್ಟ್ರದ ಪುಣೆ ಸಮೀಪದ ಪ್ರಸಿದ್ಧ ಲೋಹಗಡ್ ಕೋಟೆಯಲ್ಲಿ ನಡೆದ 25 ವರ್ಷದ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಹೊಸ ತಿರುವು ಸಿಕ್ಕಿದೆ. ಕೇತನ್‌ನನ್ನು ಆತನ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ರಹಸ್ಯ ಪ್ರಿಯಕರ ಚೇತನ್ ಚೌಧರಿ ಬಂಡೆಯಿಂದ ಕಂದಕಕ್ಕೆ ತಳ್ಳುವುದನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರ ಮುಂದೆ ಹಾಜರಾಗಿ ಸ್ಫೋಟಕ ಹೇಳಿಕೆ ದಾಖಲಿಸಿದ್ದಾರೆ.

ಪ್ರತ್ಯಕ್ಷದರ್ಶಿ ಕಂಡಿದ್ದೇನು?

ಜೂನ್ 18 ರಂದು ನಡೆದ ಈ ಘಟನೆಯನ್ನು ಕಂಡಿದ್ದ ಪ್ರತ್ಯಕ್ಷದರ್ಶಿಯು ಕೊಲೆ ನಡೆದು ಐದು ದಿನಗಳ ನಂತರ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ನೋಡಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪ್ರತ್ಯಕ್ಷದರ್ಶಿಯ ಪ್ರಕಾರ, ಕೋಟೆಯ ತುದಿಯಲ್ಲಿದ್ದಾಗ ಸಿಯಾ ತನ್ನ ಪ್ರಿಯಕರ ಚೇತನ್‌ಗೆ ಕಣ್ಣಿನಲ್ಲೇ ಸನ್ನೆ ಮಾಡಿದ್ದಳು. ತಕ್ಷಣವೇ ಚೇತನ್ ಕೇತನ್​ನ ಕಾಲಿಗೆ ಬಲವಾಗಿ ಒದ್ದಿದ್ದ, ಇದರಿಂದ ಸಮತೋಲನ ಕಳೆದುಕೊಂಡ ಕೇತನ್ ನೂರಾರು ಅಡಿ ಆಳದ ಕಂದಕಕ್ಕೆ ಜಾರಿಬಿದ್ದರು.

ಕೊಲೆ ನಡೆಯುತ್ತಿದ್ದಂತೆ ಗಾಬರಿಗೊಂಡ ಪ್ರತ್ಯಕ್ಷದರ್ಶಿಯನ್ನು ಬೆದರಿಸಿದ ಹಂತಕ ಚೇತನ್, ಬಾಯಿ ಮುಚ್ಚಿಕೊಂಡು ಸುಮ್ಮನಿರು, ಇಲ್ಲದಿದ್ದರೆ ನಿನ್ನನ್ನೂ ಕೋಟೆಯಿಂದ ಕೆಳಗೆ ಎಸೆಯುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾರೆ. ಘಟನೆ ನಡೆದ ದಿನ ವಿಪರೀತ ಬಿಸಿಲಿದ್ದರೂ ಚೇತನ್ ಮುಖ ಮುಚ್ಚಿಕೊಳ್ಳುವ ಹೂಡಿ ಧರಿಸಿದ್ದ. ಇನ್ನೊಬ್ಬ ಪ್ರವಾಸಿಗ ಇಷ್ಟು ಬಿಸಿಲಿನಲ್ಲಿ ಹೂಡಿ ಏಕೆ ಹಾಕಿದ್ದೀರಿ? ಎಂದು ಕೇಳಿದ್ದರಿಂದ ಸಾಕ್ಷಿಗೆ ಆತನ ಮುಖ ಮತ್ತು ನಡವಳಿಕೆ ಸ್ಪಷ್ಟವಾಗಿ ನೆನಪಿನಲ್ಲಿ ಉಳಿದಿತ್ತು.

ಕೇತನ್ (25) ಮತ್ತು ಸಿಯಾ (20) ಅವರಿಗೆ ನವೆಂಬರ್‌ನಲ್ಲಿ ಮದುವೆ ನಿಶ್ಚಯವಾಗಿತ್ತು. ಜೂನ್ 18 ರಂದು ಕೇತನ್‌ನನ್ನು ಟ್ರೆಕ್ಕಿಂಗ್ ನೆಪದಲ್ಲಿ ಲೋಹಗಡ್ ಕೋಟೆಗೆ ಕರೆದೊಯ್ಯಲಾಗಿತ್ತು. ಬೆಳಗ್ಗೆ 10.45 ರ ಸುಮಾರಿಗೆ ಸಿಯಾ ಕೇತನ್ ತಾಯಿಗೆ ಕರೆ ಮಾಡಿ, “ಕೇತನ್ ಆಕಸ್ಮಿಕವಾಗಿ ಕಾಲು ಜಾರಿ ಕಂದಕಕ್ಕೆ ಬಿದ್ದಿದ್ದಾನೆ” ಎಂದು ನಾಟಕವಾಡಿದ್ದಳು. ಆರಂಭದಲ್ಲಿ ಪೊಲೀಸರು ಇದನ್ನು ಆಕಸ್ಮಿಕ ಸಾವು ಎಂದೇ ದಾಖಲಿಸಿದ್ದರು. ಆದರೆ, ಸಿಯಾಳ ನಡವಳಿಕೆಯ ಮೇಲೆ ಕೇತನ್ ಸಹೋದರಿಗೆ ತೀವ್ರ ಅನುಮಾನ ಬಂದು ಪ್ರಶ್ನಿಸಿದಾಗ ಪೊಲೀಸರು ಮರು ತನಿಖೆ ಕೈಗೆತ್ತಿಕೊಂಡರು.

ಮತ್ತಷ್ಟು ಓದಿ: ಬಂಟ್ವಾಳ ರಹಿಮಾನ್ ಹತ್ಯೆ ಕೇಸ್: ಕಲ್ಲಡ್ಕ ಪ್ರಭಾಕರ ಭಟ್​ಗೆ ನೊಟೀಸ್, ಸಿಡಿದೆದ್ದ ವಿಹೆಚ್​​ಪಿ

12 ಟಿಬಿ ಡೇಟಾ, ಅಳಿಸಿದ ಚಾಟ್‌ಗಳು ಪತ್ತೆ:

ಪೊಲೀಸರು ಆರೋಪಿಗಳಿಂದ 6 ಮೊಬೈಲ್‌ಗಳು, 9 ಪೆನ್‌ಡ್ರೈವ್‌ಗಳು ಸೇರಿದಂತೆ ಬರೋಬ್ಬರಿ 12 ಟಿಬಿ (TB) ಡಿಜಿಟಲ್ ಡೇಟಾವನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಯ ವೇಳೆ, ಐಫೋನ್‌ನಿಂದ ಚಾಟ್‌ಗಳು ಮತ್ತು ಡೇಟಾವನ್ನು ಶಾಶ್ವತವಾಗಿ ಅಳಿಸುವುದು ಹೇಗೆ ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿರುವುದು ಪತ್ತೆಯಾಗಿದೆ. ಸಿಯಾ ಮನೆಯಲ್ಲಿ ಅಡಗಿಸಿಟ್ಟು ನಂತರ ಪುಡಿಪುಡಿ ಮಾಡಿದ್ದ ಮತ್ತೊಂದು ರಹಸ್ಯ ಮೊಬೈಲ್ ಫೋನ್‌ನ ಬ್ಯಾಕಪ್ ಡೇಟಾವನ್ನು ಸೈಬರ್ ಪೊಲೀಸರು ಯಶಸ್ವಿಯಾಗಿ ರಿಕವರಿ ಮಾಡಿದ್ದಾರೆ.

ಈ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದ ಚೇತನ್‌ನ ಆಪ್ತ ಸ್ನೇಹಿತ ರಿತೇಶ್ ಹಾಂಗೆ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು (ಸಿಯಾ ಗೋಯಲ್, ಚೇತನ್ ಚೌಧರಿ, ರಿತೇಶ್ ಹಾಂಗೆ) ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಕೃತ್ಯ ಎಸಗುವ ಮುನ್ನ ಮೇ 31 ಮತ್ತು ಜೂನ್ 14 ರಂದು ಎರಡು ಬಾರಿ ಲೋಹಗಡ್ ಕೋಟೆಗೆ ತೆರಳಿ, ಸಿಸಿಟಿವಿ ಇಲ್ಲದ ಹಾಗೂ ಜನಸಂಚಾರ ಕಡಿಮೆ ಇರುವ ಕಡಿದಾದ ಪ್ರಪಾತದ ಜಾಗವನ್ನು ಆಯ್ಕೆ ಮಾಡಿಕೊಂಡು ಪೂರ್ವಸಿದ್ಧತೆ ನಡೆಸಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಕಾನೂನು ಕ್ರಮ ಮತ್ತು ಸೆಕ್ಷನ್‌ಗಳು: ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಕೊಲೆ ಸಂಚು , ಸಾಕ್ಷ್ಯ ನಾಶ ಮತ್ತು ಜೀವ ಬೆದರಿಕೆ ಕಾಯ್ದೆಗಳಡಿ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿಗಳು ಸಾಕ್ಷಿಗೆ ಜೀವ ಬೆದರಿಕೆ ಹಾಕಿರುವುದರಿಂದ, ಸುಪ್ರೀಂ ಕೋರ್ಟ್‌ನ ‘ಸಾಕ್ಷಿ ಸಂರಕ್ಷಣಾ ಯೋಜನೆ’ ಅಡಿಯಲ್ಲಿ ಪ್ರತ್ಯಕ್ಷದರ್ಶಿಯ ವಿವರಗಳನ್ನು ಗೌಪ್ಯವಾಗಿಟ್ಟು ಪೊಲೀಸರು ಸೂಕ್ತ ರಕ್ಷಣೆ ಒದಗಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:39 pm, Mon, 28 September 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ