Viral Video: ಈ ಮುದ್ದಿನ ಸೊಕ್ಕು ಗೋಲ್​ಕೀಪರ್ ಆದೀತೇ?

Cats : ಬೆಕ್ಕುಗಳು ಯಾರ ಮಾತನ್ನೂ ಕೇಳದೇ ತಮಗೆ ತಿಳಿದಂತೆಯೇ ಮಾಡುವುವು. ಹೀಗಾಗಿ ಅವುಗಳ ಇಂಥ ಆಟ ಸೆರೆ ಹಿಡಿಯುವುದಕ್ಕೆ ದಕ್ಷತೆ ಚಾಕಚಕ್ಯತೆ ಅಷ್ಟೇ ಅಲ್ಲದೇ ಅದೃಷ್ಟವೂ ಬೇಕು. ಇದನ್ನು ಸೆರೆಹಿಡಿದವರಿಗೆ ಧನ್ಯವಾದ.

Viral Video: ಈ ಮುದ್ದಿನ ಸೊಕ್ಕು ಗೋಲ್​ಕೀಪರ್ ಆದೀತೇ?
ಪರದೆಯ ಮೇಲೆ ನಡೆಯುತ್ತಿರುವ ಫುಟ್​ಬಾಲ್​ ಪಂದ್ಯಕ್ಕೆ ಈ ಬೆಕ್ಕು ಗೋಲ್​ಕೀಪರ್?
Edited By:

Updated on: Jun 21, 2023 | 4:04 PM

Goal Keeper : “ಇದಂತೂ ಹೆಣ್ಣುಮಕ್ಕಳ ಫುಟ್‌ಬಾಲ್. ಹೀಗಾಗಿ ಇಲ್ಲಿ ಬೆಕ್ಕಿಗೆ ಒಳ್ಳೆಯ ಅವಕಾಶವೇ?” ಮಹಿಳೆಯರ ಫುಟ್‌ಬಾಲ್ (Football) ಆಟವನ್ನು ದೊಡ್ಡ ಪರದೆಯ ಟೀವಿಯಲ್ಲಿ ಪರದೆಗಂಟಿಕೊಂಡು ನೋಡುತ್ತಾ ಕುಳಿತಿದ್ದ ಬೆಕ್ಕೊಂದು ಎದುರಾಳಿ ಒದ್ದ ಬಾಲು ಗೋಲ್‌ಪೋಸ್ಟಿನತ್ತ ಬಂದದ್ದೇ ಹಾರಿ ಅದನ್ನು ಹಿಡಿಯಲು ಪ್ರಯತ್ನಿಸಿದ ವಿಡಿಯೋ ವೈರಲ್ ಆಗಿದೆ. ಅದರ ಈ ಆಟ, ಹಿಂದೆ ಕುಳಿತು ಆಟ ನೋಡುತ್ತಿದ್ದ ಮಂದಿಗೆ ಆ ಬೆಕ್ಕು ಚೆಂಡನ್ನು ಗೋಲಿನೊಳಗೆ ಹೋಗದಂತೆ ತಡೆಯುವ ಪ್ರಯತ್ನದಂತೆ ಕಂಡದ್ದರಲ್ಲಿ ಆಶ್ಚರ್ಯವಿಲ್ಲ. ಅಷ್ಟು ಚೆನ್ನಾಗಿದೆ ಈ ಮಾರ್ಜಾಲದ ಗೋಲ್​ ಕೀಪಿಂಗ್​ ಯತ್ನ.

ಸಾಮಾಜಿಕ ಜಾಲತಾಣಗಳಲ್ಲಿ ಬೆಕ್ಕು ಮತ್ತು ನಾಯಿಗಳ ಫೋಟೋ ಹಾಗೂ ವಿಡಿಯೋಗಳಿಗೇನೂ ಕೊರತೆಯಿಲ್ಲ. ಎಲ್ಲೆಡೆ ಬಹುತೇಕ ಅವೇ ತುಂಬಿರುತ್ತವೆ. ಅವುಗಳ “ಕ್ಯೂಟ್‌ನೆಸ್”ನಿಂದಾಗಿ ಚಿಕ್ಕಮಕ್ಕಳಂತೇ ಅವೂ ಏನೇ ಮಾಡಿದರೂ ಮುದ್ದಾಗಿಯೇ ಕಾಣಿಸುವುದರಿಂದ ಕೆಲಸದ ನಡುವೆ ಮಂದಿ ಇವನ್ನು ಒತ್ತಡ ನಿವಾರಕಗಳಂತೆ (stressbuster) ನೋಡುವುದರಿಂದಾಗಿ ಇಂಥ ವಿಡಿಯೋಗಳ ಜನಪ್ರಿಯತೆ ಎಂದೂ ಕುಗ್ಗಿಲ್ಲ. ಅಂಥವುಗಳ ನಡುವೆಯೂ ಇದು ಸ್ವಲ್ಪ ವಿಶೇಷವಾಗಿಯೇ ಇದೆ.

ಇದನ್ನೂ ಓದಿ : Viral Video: ನಾಯಿಯಿಂದ ಯೋಗ ಮಾಡಿಸಿ ಯೋಗವನ್ನು ಅವಮಾನಿಸಿದ್ದೀರಿ

ಫೋಟೋಗ್ರಫಿ ಮತ್ತು ವಿಡಿಯೋಗ್ರಫಿಯಲ್ಲಿ ಸರಿಯಾದ ಗಳಿಗೆಯನ್ನು ತಕ್ಷಣವೇ ಸೆರೆ ಹಿಡಿಯುವುದು ತುಂಬ ಮುಖ್ಯವಲ್ಲವೇ. ಮಕ್ಕಳಿಗಾದರೆ ಸ್ವಲ್ಪ ಅಭಿನಯ ಕಲಿಸಬಹುದು, ನಾಯಿಗಳಿಗೆ ತಕ್ಕಮಟ್ಟಿಗೆ ತರಬೇತಿ ಕೊಡಬಹುದು. ಆದರೆ ಬೆಕ್ಕುಗಳು ಹಾಗಲ್ಲವಲ್ಲ! ಯಾರ ಮಾತನ್ನೂ ಕೇಳದೇ ತಮಗೆ ತಿಳಿದಂತೇ ಮಾಡುವುವು. ಹೀಗಾಗಿ ಅವುಗಳ ಇಂಥ ಆಟ ಸೆರೆ ಹಿಡಿಯುವುದಕ್ಕೆ ದಕ್ಷತೆ ಚಾಕಚಕ್ಯತೆ ಅಷ್ಟೇ ಅಲ್ಲದೇ ಅದೃಷ್ಟವೂ ಬೇಕು. ಈ ವಿಡಿಯೋ ಮಾಡಿದವರನ್ನು ನಾವು ಅಭಿನಂದಿಸಲೇಬೇಕು. ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ