ಮಾನವನ ಮುಖವನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ

ಹುಟ್ಟಿದ ಮೇಕೆ ಮರಿಯ ಕಣ್ಣು, ಮೂಗು, ಬಾಯಿ ಮನುಷ್ಯರನ್ನು ಹೋಲುತ್ತಿದ್ದು, ಕಿವಿ ಮಾತ್ರ ಮೇಕೆಯನ್ನು ಹೋಲುತ್ತದೆ. ವಿಚಿತ್ರವಾಗಿ ಹುಟ್ಟಿದ ಈ ಕರುವಿಗೆ ಎರಡೇ ಕಾಲುಗಳಿವೆ ಎಂದು ವರದಿ ತಿಳಿಸಿದೆ. 

ಮಾನವನ ಮುಖವನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ
Edited By:

Updated on: Dec 28, 2021 | 1:23 PM

ಕೆಲವೊಮ್ಮೆ ವಿಚಿತ್ರ ಘಟನೆಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಅಸಹಜ ರೀತಿಯ ಕೆಲವು ದೃಶ್ಯಗಳು ನಂಬಲು ಅಸಾಧ್ಯ ಎನ್ನುವಂತೆ ಮಾಡುತ್ತದೆ. ಇದೀಗ ಅಸ್ಸಾಂನಲ್ಲಿ ಮೇಕೆಯೊಂದು ಮನುಷ್ಯನ ಮುಖಹೋಲುವ ಕರುವಿಗೆ ಜನ್ಮ ನೀಡಿದೆ. ಹೌದು ಇಂತಹದ್ದೊಂದು ವಿಲಕ್ಷಣ ಘಟನೆ ಅಸ್ಸಾಂ ನ ಧೋಲಾಯಿ ವಿಧಾನಸಭಾ ಕ್ಷೇತ್ರದ ಗಂಗಾಪುರ ಎನ್ನುವ ಹಳ್ಳಿಯಲ್ಲಿ ನಡೆದಿದೆ. ಈ ಘಟನೆಯಿಂದ ಸ್ಥಳೀಯರು ಕೂಡ ಬೆರಗುಗೊಂಡಿದ್ದಾರೆ. ಮಾನವನ ಮುಖವನ್ನು ಹೋಲುವ ಕರು ಹುಟ್ಟಿದ ಮೇಲೂ ಬದುಕಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

ಹುಟ್ಟಿದ ಮೇಕೆ ಮರಿಯ ಕಣ್ಣು, ಮೂಗು, ಬಾಯಿ ಮನುಷ್ಯರನ್ನು ಹೋಲುತ್ತಿದ್ದು, ಕಿವಿ ಮಾತ್ರ ಮೇಕೆಯನ್ನು ಹೋಲುತ್ತದೆ. ವಿಚಿತ್ರವಾಗಿ ಹುಟ್ಟಿದ ಈ ಕರುವಿಗೆ ಎರಡೇ ಕಾಲುಗಳಿವೆ ಎಂದು ವರದಿ ತಿಳಿಸಿದೆ.  ಈ ರೀತಿ ವಿಚಿತ್ರ ಕರುವಿನ ಜನನದ ಸುದ್ದಿ ಕೇಳಿ ಅಕ್ಕಪಕ್ಕದ ಸ್ಥಳೀಯರು ಕೂಡ ಅಚ್ಚರಿಗೊಂಡಿದ್ದಾರೆ. ಸದ್ಯ ವಿಚಿತ್ರ ಕರುವನ್ನು ನೋಡಲು  ನೂರಾರು ಸಂಖ್ಯೆ ಜನ ಸೇರುತ್ತಿದ್ದಾರೆ.

ಮಾನವನನ್ನು ಹೋಲುವ ಮೇಕೆ ಮರಿ

ವರದಿಯ ಪ್ರಕಾರ ಶಂಕರ್​ದಾಸ್​ ಎನ್ನುವವರ ಎನ್ನು ವ್ಯಕ್ತಿಯ ಮನೆಯಲ್ಲಿ ಸಾಕಿದ್ದ ಮೇಕೆ ಈ ರೀತಿ ಮಾನವನನ್ನು ಹೋಲುವ ಮರಿಗೆ ಜನ್ಮ ನೀಡಿದೆ. ಅದೇ ದಿನ ಮೆಕೆ ಇನ್ನೊಂದು ಮರಿಗೆ ಜನ್ಮ ನೀಡಿದ್ದು, ಅದು ಸಾಮಾನ್ಯ ಮೇಕೆಯ ಮರಿಯಂತೆಯೇ ಹುಟ್ಟಿದೆ ಎನ್ನಲಾಗಿದೆ. ಸದ್ಯ ಶಂಕರ್ ದಾಸ ದಂತಿ ವಿಚಿತ್ರವಾಗಿ ಹುಟ್ಟಿದ ಮರಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ, ಸಖತ್​ ವೈರಲ್​ ಆಗಿದೆ.

ಇದನ್ನೂ ಓದಿ:

ಆರ್ಡರ್​ ಮಾಡಿದ್ದು 1 ಲಕ್ಷ ರೂ ಐಫೋನ್​​, ಆನ್ಲೈನ್​ನಲ್ಲಿ ಬಂದಿದ್ದು ಮಾತ್ರ 2 ಕ್ಯಾಡ್ಬರಿ ಚಾಕೋಲೇಟ್

Published On - 10:33 am, Tue, 28 December 21