AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತಲೆಯ ಮೇಲೆ ಸಹೋದರನನ್ನು ಹೊತ್ತುಕೊಂಡು 53 ಸೆಕೆಂಡ್​ಗಳಲ್ಲಿ 100 ಮೆಟ್ಟಿಲುಗಳನ್ನು ಹತ್ತಿದ ವ್ಯಕ್ತಿ

ಒಬ್ಬರ ಮೇಲೊಬ್ಬರು ನಿಂತುಕೊಂಡು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತಿ ಗಿನ್ನಿಸ್​ ದಾಖಲೆ ಮಾಡಿದ್ದಾರೆ. ಸ್ಪೇನ್​ನ ಗಿರೋನಾದಲ್ಲಿರುವ ಸೆಂಟ್​ ಮೆರೀಸ್​ ಕ್ಯಾಥ್ರೋಡಲ್​ನಲ್ಲಿರುವ ಚರ್ಚ್​ನ ಹೊರಭಾಗದಲ್ಲಿ ಈ ಚಮತ್ಕಾರಿ ದೃಶ್ಯನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

Viral Video: ತಲೆಯ ಮೇಲೆ ಸಹೋದರನನ್ನು ಹೊತ್ತುಕೊಂಡು 53 ಸೆಕೆಂಡ್​ಗಳಲ್ಲಿ 100 ಮೆಟ್ಟಿಲುಗಳನ್ನು ಹತ್ತಿದ ವ್ಯಕ್ತಿ
TV9 Web
| Edited By: |

Updated on: Dec 28, 2021 | 11:43 AM

Share

ಕೆಲವು ಸಾಹಸಗಳು ಮೈರೋಮಾಂಚನಗೊಳಿಸುತ್ತವೆ.  ಆದರೆ ಇನ್ನು ಕೆಲವು ದುಸ್ಸಾಹಸಗಳು ನೋಡುಗರನ್ನು ಭಯಭೀತಿಗೊಳಿಸುತ್ತವೆ. ಅಂತಹ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ವಿಯೆಟ್ನಾಂನ ಇಬ್ಬರು ಸಹೋದರರ ಸಾಹಸವೊಂದು ಇದೀಗ ಎಲ್ಲೆಡೆ ವೈರಲ್​ ಆಗಿದೆ.  ಒಬ್ಬರ ಮೇಲೊಬ್ಬರು ನಿಂತುಕೊಂಡು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತಿ ಗಿನ್ನಿಸ್​ ದಾಖಲೆ ಮಾಡಿದ್ದಾರೆ. ಸ್ಪೇನ್​ನ ಗಿರೋನಾದಲ್ಲಿರುವ ಸೆಂಟ್​ ಮೆರೀಸ್​ ಕ್ಯಾಥ್ರೋಡಲ್​ನಲ್ಲಿರುವ ಚರ್ಚ್​ನ ಹೊರಭಾಗದಲ್ಲಿ ಈ ಚಮತ್ಕಾರಿ ದೃಶ್ಯನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

37 ವರ್ಷದ ಗಿಯಾಂಗ್​ ಕ್ವೋಕ್​ ಕೋ ಮತ್ತು 32 ವರ್ಷದ ಆತನ ಸಹೋದರ ಗಿಯಾಂಗ್​ ಕ್ವೋಕ್​ ಎನ್ಘಿಪ್​ ಎನ್ನುವವರು ಒಬ್ಬರ ಈ ಸಾಧನೆ ಮಾಡಿದ್ದಾರೆ. 2016 ರ ಡಿಸೆಂಬರ್​ನಲ್ಲಿ ಇದೇ ರೀತಿ ಒಬ್ಬರ ತಲೆಯಮೇಲೆ ಇನ್ನೊಬ್ಬರು ತಲೆಯಿಟ್ಟು ಉಲ್ಟಾ ನಿಂತು 52  ಸೆಕೆಂಡುಗಳಲ್ಲಿ 90 ಮೆಟ್ಟಿಲನ್ನು ಹತ್ತಿದ್ದರು. ಇದೀಗ ಅವರದೇ ದಾಖಲೆಯನ್ನು ಮುರಿದು 53 ಸೆಕೆಂಡುಗಳಲ್ಲಿ 100 ಮೆಟ್ಟಿಗಳನ್ನು ಹತ್ತುವ ಮೂಲಕ ಹೊಸ ಗಿನ್ನಿಸ್​ ದಾಖಲೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಹೋದರರು ಪ್ರತಿದಿನ ನಾವು ಅಭ್ಯಾಸವನ್ನು ಮಾಡುತ್ತಿದ್ದೆವು, ಪ್ರತಿಯೊಬ್ಬರೂ ಈ ದಿನವನ್ನು ನೆನಪಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ ಎಂದಿದ್ದಾರೆ.

ಸದ್ಯ ಈ ವೀಡಿಯೋ ಯುಟ್ಯೂಬ್​ನಲ್ಲಿ ವೈರಲ್​ ಆಗಿದೆ. ಸಹೋದರರ ಸಾಹಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಕ್ಯಾಥ್ರಡೆಲ್​ನಲ್ಲಿ 90 ಮೆಟ್ಟಿಲುಳು ಮಾತ್ರ ಇದ್ದ ಕಾರಣ ಇವರ ಸಾಹಸಕ್ಕಾಗಿ ಮತ್ತೆ 10 ಮಟ್ಟಿಗಳನ್ನು ಜೋಡಿಸಲಾಗಿತ್ತು. ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು  ವೀಡಿಯೋವನ್ನು ಪ್ರಸಾರ ಮಾಡಿದ್ದವು. ಅದರ ಬಳಿಕ ಜಗತ್ತಿನಾದ್ಯಂತ ವೀಡಿಯೋ ಎಲ್ಲರ ಗಮನಸೆಳೆದಿದೆ.

ಇದನ್ನೂ ಓದಿ:

ಮಾನವನ ಮುಖವನ್ನು ಹೋಲುವ ಮರಿಗೆ ಜನ್ಮ ನೀಡಿದ ಮೇಕೆ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್