ಬೇಸ್​ಬಾಲ್​ ಬ್ಯಾಟ್ ಹಿಡಿದು ಆಟದ ಮೈದಾನದಲ್ಲಿ ಓಡಿದ ಶ್ವಾನ; ಆಟಗಾರರೆಲ್ಲಾ ಕಂಗಾಲು! ವಿಡಿಯೊ ವೈರಲ್​

Viral Video: ಬೇಸ್​ಬಾಲ್​ ಆಡುತ್ತಿದ್ದ ಆಟಗಾರರಿಗೆ ಅಡ್ಡಿಪಡಿಸುತ್ತಾ ಮೈದಾನದ ತುಂಬಾ ಓಡಾಡಿದ ಶ್ವಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​. ವಿಡಿಯೋ ಇದೆ ನೀವೂ ನೋಡಿ..

ಬೇಸ್​ಬಾಲ್​ ಬ್ಯಾಟ್ ಹಿಡಿದು ಆಟದ ಮೈದಾನದಲ್ಲಿ ಓಡಿದ ಶ್ವಾನ; ಆಟಗಾರರೆಲ್ಲಾ ಕಂಗಾಲು! ವಿಡಿಯೊ ವೈರಲ್​
ಬೇಸ್​ಬಾಲ್​ ಬ್ಯಾಟ್ ಹಿಡಿದು ಆಟದ ಮೈದಾನದಲ್ಲಿ ಓಡಿದ ಶ್ವಾನ
Edited By:

Updated on: Sep 24, 2021 | 12:40 PM

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಅದರಲ್ಲಿ ಪ್ರಾಣಿಗಳ ತುಂಟಾಟದ ದೃಶ್ಯಗಳು ಹೆಚ್ಚು ಮನ ಗೆಲ್ಲುತ್ತವೆ. ಈ ಹಿಂದೆ ವೈರಲ್ ಆಗಿದ್ದ ವಿಡಿಯೋಗಳಲ್ಲಿಯೂ ಸಹ ಆನೆ ಕ್ರಿಕೆಟ್ ಆಡುವುದು, ತನ್ನ ಸೊಂಡಿಲಿನಲ್ಲಿ ಬ್ಯಾಟ್ ಹಿಡಿಸು ಸಿಕ್ಸರ್​ ಬಾರಿಸುವುದು, ಮನೆಯಲ್ಲಿ ಸಾಕಿರುವ ಬೆಕ್ಕು, ನಾಯಿಗಳು ಫುಟ್ ಬಾಲ್ ಆಡುವುದು ಇವೆಲ್ಲವೂ ಸಹ ತಮಾಷೆಯ ಜತೆಗೆ ಮನರಂಜನೆ ನೀಡುತ್ತವೆ. ಇದೀಗ ವೈರಲ್ ಆಗಿರುವ ದೃಶ್ಯ ಕೂಡಾ ಅಂಥದ್ದೇ! ವಿಡಿಯೋ ನೋಡಿ ಮಜವಾಗಿದೆ.

ಬೇಸ್​ಬಾಲ್​ ಆಟದ ಮೈದಾನದಲ್ಲಿ ಆಟಗಾರರು ಆಟವಾಡುತ್ತಿರುತ್ತಾರೆ. ಪ್ರೇಕ್ಷಕರೂ ಸಹ ಆಟವನ್ನು ವೀಕ್ಷಿಸುತ್ತಾ ಕುಳಿತಿರುವುದನ್ನು ನೋಡಬಹುದು. ಅಲ್ಲೇ ನಿಂತಿದ್ದ ಶ್ವಾನವೊಂದು ಪಂದ್ಯಕ್ಕೆ ಅಡ್ಡಿಪಡಿಸುತ್ತಿದೆ. ಮೈದಾನದ ತುಂಬೆಲ್ಲಾ ಓಡಾಡುತ್ತಿದೆ. ಕೊನೆಯಲ್ಲಿ ಓರ್ವ ವ್ಯಕ್ತಿಯ ಬಳಿ ಹೋಗಿ ನಿಂತಿರುವುದನ್ನು ದೃಶ್ಯದಲ್ಲಿ ನೋಡಬಹುದು.

ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೈನರ್ ಲೀಗ್ ಬೇಸ್​ಬಾಲ್​ ಟ್ವಿಟರ್​ನಲ್ಲಿ ಟ್ವೀಟ್ ಮಾಡಿದೆ. ಮತ್ತೊಂದು ವಿಡಿಯೋದಲ್ಲಿ ಗಮನಿಸುವಂತೆ ಶ್ವಾನ, ಬ್ಯಾಟನ್ನು ಆಟದ ಮೈದಾನದಿಂದ ಹೊರಕ್ಕೆ ತರುತ್ತಿರುವುದನ್ನು ನೋಡಬಹುದು.

ಎರಡೂ ವಿಡಿಯೊಗಳು ಫುಲ್ ವೈರಲ್ ಆಗಿವೆ. ಮೊದಲಿನ ವಿಡಿಯೊ ಪೋಸ್ಟ್ 1 ಮಿಲಿಯನ್​ಗಿಂತಲೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಎರಡನೇಯ ವಿಡಿಯೊ ಪೋಸ್ಟ್ 31,000 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ:

Viral Video : ಅಜ್ಜಿ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆದ್ರು, ಮೊಮ್ಮಕ್ಕಳು ಹೆಜ್ಜೆ ಹಾಕಿದ್ರು

Viral Video: ಬೇಕರಿ ತಿಂಡಿ ಪ್ರಿಯರೇ ಎಚ್ಚರ; ಈ ಶಾಕಿಂಗ್ ವಿಡಿಯೋ ನೋಡಿದರೆ ರಸ್ಕ್ ಮುಟ್ಟೋಕೂ ಅಸಹ್ಯ ಪಡ್ತೀರ!

(God taking bat on baseball ground and runaway video goes viral)

Published On - 12:35 pm, Fri, 24 September 21