AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹುಟ್ಟು ಹಬ್ಬದ ದಿನ ದೀಪ ಆರಿಸಲು ಹೋಗಿ ಕೂದಲಿಗೆ ಆವರಿಸಿದ ಬೆಂಕಿ; ಆಮೇಲೇನಾಯ್ತು? ವಿಡಿಯೊ‌ ನೋಡಿ

Viral Video: ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾಗ ತಿಳಿಯದೇ ಏನೆಲ್ಲಾ ಅಚಾತುರ್ಯ ನಡೆಯಬಹುದು, ಎಷ್ಟು ಲಕ್ಷ್ಯದಿಂದಿರಬೇಕು ಎಂಬ ಎಚ್ಚರಿಕೆಯ ಸಂದೇಶವನ್ನು ಸಾರುವ ವಿಡಿಯೋ ಇದಾಗಿದೆ.

Viral Video: ಹುಟ್ಟು ಹಬ್ಬದ ದಿನ ದೀಪ ಆರಿಸಲು ಹೋಗಿ ಕೂದಲಿಗೆ ಆವರಿಸಿದ ಬೆಂಕಿ; ಆಮೇಲೇನಾಯ್ತು? ವಿಡಿಯೊ‌ ನೋಡಿ
ಹುಟ್ಟು ಹಬ್ಬದ ದಿನ ದೀಪ ಆರಿಸಲು ಹೋಗಿ ಕೂದಲಿಗೆ ಆವರಿಸಿದ ಬೆಂಕಿ
TV9 Web
| Edited By: |

Updated on:Sep 24, 2021 | 11:19 AM

Share

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲವು ವಿಡಿಯೋಗಳಲ್ಲಿ ಹಲವು ತಮಾಷೆಯ ವಿಡಿಯೋಗಳಾಗಿರುತ್ತವೆ. ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಇನ್ನು ಕೆಲವು ವಿಡಿಯೋಗಳನ್ನು ನೋಡಿದಾಕ್ಷಣ ಆಶ್ಚರ್ಯವಾಗುವುದಂತೂ ಸತ್ಯ. ಅವುಗಳಲ್ಲಿ ಹಲವಾರು ದೃಶ್ಯಗಳು ಭಯಾನಕವಾಗಿರುತ್ತವೆ ಜತೆಗೆ ಎಚ್ಚರಿಕೆಯ ಸಂದೇಶವನ್ನು ಸಾರುತ್ತವೆ. ಅಂಥಹುದೇ ಒಂದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾಗ ತಿಳಿಯದೇ ಏನೆಲ್ಲಾ ಅಚಾತುರ್ಯ ನಡೆಯಬಹುದು, ಎಷ್ಟು ಲಕ್ಷ್ಯದಿಂದಿರಬೇಕು ಎಂಬ ಎಚ್ಚರಿಕೆಯ ಸಂದೇಶವನ್ನು ಸಾರುವ ವಿಡಿಯೋ ಇದಾಗಿದೆ.

ವಿಡಿಯೋದಲ್ಲಿ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದರು ಅಮೆರಿಕಾದ ಕಿರುತೆರೆಯಲ್ಲಿ ಜನಪ್ರಿಯವಾಗಿರುವ ನಿಕೋಲ್ ರಿಚೆ. ಅವರು ಹುಟ್ಟು ಹಬ್ಬಕ್ಕೆ ಸ್ನೇಹಿತರೆಲ್ಲಾ ಸೇರಿ ತಂದ ಕೇಕ್ ಕಟ್ ಮಾಡಲು ಸಿದ್ಧಳಾಗಿದ್ದಾರೆ. ಮೇಜಿನ ಮೇಲೆ ಕೇಕ್ ಇರಿಸಿ ಕ್ಯಾಂಡಲ್ ಹಚ್ಚಲಾಗಿದೆ. ಸುತ್ತಲೂ ನಿಕೋಲ್ ರಿಚೆ ಅವರ ಸ್ನೇಹಿತರು ಮತ್ತು ಕುಟುಂಬದವರು ನಿಂತು ಜನ್ಮದಿನದ ಶುಭ ಹಾರೈಸುತ್ತಿದ್ದಾರೆ. ಕೇಕ್ ಕಟ್ ಮಾಡುವ ಮುನ್ನ ಲೂಸ್ ಹೇರ್ ಬಿಟ್ಟಿದ್ದ ನಿಕೋಲ್ ರಿಚೆ ಕ್ಯಾಂಡಲ್​ ದೀಪ ಆರಿಸಲು ಮುಂದಾಗಿದ್ದಾರೆ.

ಕ್ಯಾಂಡಲ್ ನಂದಿಸುತ್ತಿದ್ದ ನಿಕೋಲ್ ರಿಚೆ ಕೂದಲಿಗೆ ಬೆಂಕಿ ಆವರಿಸಿಕೊಂಡಿದೆ. ಗಾಬರಿಗೊಂಡ ಅವರು ಕಿರುಚಾಡುತ್ತಿರುವ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಅಲ್ಲೇ ಪಕ್ಕದಲ್ಲಿದ್ದ ವ್ಯಕ್ತಿಯೋರ್ವರು ಕೂದಲಿಗೆ ಆವರಿಸಿಕೊಂಡಿದ್ದ ಬೆಂಕಿ ನಂದಿಸಲು ಪ್ರಯತ್ನಿಸಲು ಮುಂದಾಗಿದ್ದಾರೆ. ಭಯಾನಕ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ನಿಕೋಲ್ ರಿಚೆ ಅವರಿಗೆ ಜನ್ಮ ದಿನದ ಶುಭಾಶಯ ತಿಳಿಸಿದ್ದಾರೆ. ಇನ್ನು ಕೆಲವರು ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಭಯಾನಕ ಕ್ಷಣ ಇದಾಗಿದ್ದು, ಎಚ್ಚರಿಕೆಯ ಸಂದೇಶವನ್ನು ಸಾರುತ್ತದೆ.

ಇದನ್ನೂ ಓದಿ:

Shocking Video: ಬೀಳುತ್ತಿದ್ದ ಗೋಡೆಯನ್ನು ತಡೆದು ಮಗುವನ್ನು ರಕ್ಷಿಸಿದ ಮಹಿಳೆ; ವಿಡಿಯೊ‌ ನೋಡಿ

Shocking Video: ಬಸ್ಸನ್ನು ಓವರ್ ​ಟೇಕ್​ ಮಾಡೋಕೆ ಹೋಗಿ ಆಗಿದ್ದೇ ಬೇರೆ! ಒಂದು ಸೆಕೆಂಡ್​ ತಡವಾಗಿದ್ರೂ ವ್ಯಕ್ತಿಯ ಮೈಮೇಲೆ ಹತ್ತುತ್ತಿತ್ತು ಬಸ್

(Shocking video hair catches fire birthday girl viral video )

Published On - 11:08 am, Fri, 24 September 21

ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ