ಬೇಸ್ಬಾಲ್ ಬ್ಯಾಟ್ ಹಿಡಿದು ಆಟದ ಮೈದಾನದಲ್ಲಿ ಓಡಿದ ಶ್ವಾನ; ಆಟಗಾರರೆಲ್ಲಾ ಕಂಗಾಲು! ವಿಡಿಯೊ ವೈರಲ್
Viral Video: ಬೇಸ್ಬಾಲ್ ಆಡುತ್ತಿದ್ದ ಆಟಗಾರರಿಗೆ ಅಡ್ಡಿಪಡಿಸುತ್ತಾ ಮೈದಾನದ ತುಂಬಾ ಓಡಾಡಿದ ಶ್ವಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್. ವಿಡಿಯೋ ಇದೆ ನೀವೂ ನೋಡಿ..
ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಅದರಲ್ಲಿ ಪ್ರಾಣಿಗಳ ತುಂಟಾಟದ ದೃಶ್ಯಗಳು ಹೆಚ್ಚು ಮನ ಗೆಲ್ಲುತ್ತವೆ. ಈ ಹಿಂದೆ ವೈರಲ್ ಆಗಿದ್ದ ವಿಡಿಯೋಗಳಲ್ಲಿಯೂ ಸಹ ಆನೆ ಕ್ರಿಕೆಟ್ ಆಡುವುದು, ತನ್ನ ಸೊಂಡಿಲಿನಲ್ಲಿ ಬ್ಯಾಟ್ ಹಿಡಿಸು ಸಿಕ್ಸರ್ ಬಾರಿಸುವುದು, ಮನೆಯಲ್ಲಿ ಸಾಕಿರುವ ಬೆಕ್ಕು, ನಾಯಿಗಳು ಫುಟ್ ಬಾಲ್ ಆಡುವುದು ಇವೆಲ್ಲವೂ ಸಹ ತಮಾಷೆಯ ಜತೆಗೆ ಮನರಂಜನೆ ನೀಡುತ್ತವೆ. ಇದೀಗ ವೈರಲ್ ಆಗಿರುವ ದೃಶ್ಯ ಕೂಡಾ ಅಂಥದ್ದೇ! ವಿಡಿಯೋ ನೋಡಿ ಮಜವಾಗಿದೆ.
ಬೇಸ್ಬಾಲ್ ಆಟದ ಮೈದಾನದಲ್ಲಿ ಆಟಗಾರರು ಆಟವಾಡುತ್ತಿರುತ್ತಾರೆ. ಪ್ರೇಕ್ಷಕರೂ ಸಹ ಆಟವನ್ನು ವೀಕ್ಷಿಸುತ್ತಾ ಕುಳಿತಿರುವುದನ್ನು ನೋಡಬಹುದು. ಅಲ್ಲೇ ನಿಂತಿದ್ದ ಶ್ವಾನವೊಂದು ಪಂದ್ಯಕ್ಕೆ ಅಡ್ಡಿಪಡಿಸುತ್ತಿದೆ. ಮೈದಾನದ ತುಂಬೆಲ್ಲಾ ಓಡಾಡುತ್ತಿದೆ. ಕೊನೆಯಲ್ಲಿ ಓರ್ವ ವ್ಯಕ್ತಿಯ ಬಳಿ ಹೋಗಿ ನಿಂತಿರುವುದನ್ನು ದೃಶ್ಯದಲ್ಲಿ ನೋಡಬಹುದು.
.@BatdogRookie got a little excited during his Sahlen Field debut with the @BuffaloBisons ?
We still love him @TrentonThunder. pic.twitter.com/2KJn8OnxNK
— Minor League Baseball (@MiLB) September 22, 2021
ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೈನರ್ ಲೀಗ್ ಬೇಸ್ಬಾಲ್ ಟ್ವಿಟರ್ನಲ್ಲಿ ಟ್ವೀಟ್ ಮಾಡಿದೆ. ಮತ್ತೊಂದು ವಿಡಿಯೋದಲ್ಲಿ ಗಮನಿಸುವಂತೆ ಶ್ವಾನ, ಬ್ಯಾಟನ್ನು ಆಟದ ಮೈದಾನದಿಂದ ಹೊರಕ್ಕೆ ತರುತ್ತಿರುವುದನ್ನು ನೋಡಬಹುದು.
.@BatdogRookie got a little excited during his Sahlen Field debut with the @BuffaloBisons ?
We still love him @TrentonThunder. pic.twitter.com/2KJn8OnxNK
— Minor League Baseball (@MiLB) September 22, 2021
ಎರಡೂ ವಿಡಿಯೊಗಳು ಫುಲ್ ವೈರಲ್ ಆಗಿವೆ. ಮೊದಲಿನ ವಿಡಿಯೊ ಪೋಸ್ಟ್ 1 ಮಿಲಿಯನ್ಗಿಂತಲೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಎರಡನೇಯ ವಿಡಿಯೊ ಪೋಸ್ಟ್ 31,000 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ:
Viral Video : ಅಜ್ಜಿ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆದ್ರು, ಮೊಮ್ಮಕ್ಕಳು ಹೆಜ್ಜೆ ಹಾಕಿದ್ರು
Viral Video: ಬೇಕರಿ ತಿಂಡಿ ಪ್ರಿಯರೇ ಎಚ್ಚರ; ಈ ಶಾಕಿಂಗ್ ವಿಡಿಯೋ ನೋಡಿದರೆ ರಸ್ಕ್ ಮುಟ್ಟೋಕೂ ಅಸಹ್ಯ ಪಡ್ತೀರ!
(God taking bat on baseball ground and runaway video goes viral)
Published On - 12:35 pm, Fri, 24 September 21