Dog Lover: ಮನೆಯ ಮಗನೋ, ಮಗಳಿಗೋ ಮದುವೆ (Marriage) ಮಾಡಿದಂತೆ ಹಿಂದೂ ಸಂಪ್ರದಾಯದ ಪ್ರಕಾರ ಸಾಕಿದ ನಾಯಿಗಳಿಗೆ ಮದುವೆ ಮಾಡಿದ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೀರಿ. ಲಗ್ನಪತ್ರಿಕೆ ಹಂಚುವುದರಿಂದ ಹಿಡಿದು ಬಂಧು ಬಳಗದವರನ್ನು ಕರೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಪೆಂಡಾಲ್ ಹಾಕಿಸಿ, ಮದುಮಕ್ಕಳನ್ನು ಸಿಂಗರಿಸಿ, ಬೆಲೆಬಾಳುವ ಬಟ್ಟೆ ಒಡವೆ ಹಾಕಿ, ಅತಿಥಿಗಳಿಗೆ ಭೂರಿ ಭೋಜನ ಉಡುಗೊರೆ ವ್ಯವಸ್ಥೆ ಮಾಡಿದ್ದನ್ನು ನೋಡಿ ಅಚ್ಚರಿ ಪಟ್ಟಿದ್ದೀರಿ. ಇದೀಗ ನಾಯಿಯ ಪೋಷಕರು ತಮ್ಮ ಗೋಲ್ಡನ್ ರಿಟ್ರೈವರ್ ನಾಯಿಗೆ ಸೀಮಂತ ಮಾಡಿದ್ದಾರೆ. ಈ ವಿಡಿಯೋ ಅನ್ನು ನೆಟ್ಮಂದಿ ಅಚ್ಚರಿಯಿಂದ ನೋಡುತ್ತಿದೆ.
ಇದನ್ನೂ ಓದಿ : Viral Video: ‘ನನಗೆ ಡಿಸ್ಕೌಂಟ್ ಕೊಡಬಹುದೆ?’ ಕ್ಯಾಬ್ ಡ್ರೈವರ್ ಲೆನ್ಸ್ಕಾರ್ಟ್ ಉದ್ಯೋಗಿಗೆ ಕೇಳುತ್ತಾನೆ, ಮುಂದೇನಾಗುತ್ತದೆ ನೋಡಿ
ರೋಸಿ ಮತ್ತು ರೆಮೋ ಎಂಬ ಜೋಡಿನಾಯಿಯ ಪೋಷಕ ಸಿದ್ಧಾರ್ಥ್ ಶಿವಂ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಅನ್ನು ನಿನ್ನೆ ಹಂಚಿಕೊಂಡಿದ್ದಾರೆ. ಈತನಕ ಸುಮಾರು 90,000 ಲೈಕ್ ಮಾಡಿದ್ದಾರೆ. ಈತನಕ ಸುಮಾರು 7 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ನೂರಾರು ಜನರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ನೋಡಿ ಮನಸ್ಸು ತುಂಬಿ ಬಂದಿದೆ, ಮುಂದಿನ ಹಂತದ ವಿಡಿಯೋಗಳನ್ನು ನೋಡಲು ಕಾತುರರಾಗಿದ್ದೇವೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಮಗಳಿಗೆ ಸುಗಮವಾಗಿ ಹೆರಿಗೆ ಆಗಲಿ, ಆರೋಗ್ಯವಂತ ಮೊಮ್ಮಕ್ಕಳನ್ನು ನೀವು ಪಡೆಯಿರಿ, ದೇವರು ನಿಮ್ಮ ಕುಟುಂಬವನ್ನು ಆಶೀರ್ವದಿಸಲಿ ಎಂದಿದ್ದಾರೆ ಒಬ್ಬರು. ಅವಳಿಗೆ ಬಿಗಿಯಾಗಿ ಅಪ್ಪಿಕೊಂಡು ಮುತ್ತು ನೀಡಬೇಕು ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಮಿಸ್ಸಿಸ್ಸಿಪ್ಪಿ: ಕಾಣೆಯಾಗಿದ್ದ ಕೋತಿ 24 ಗಂಟೆಯೊಳಗೆ ತನ್ನ ಕುಟುಂಬದ ಮಡಿಲಿನೊಳಗೆ
ಇಂದು ನಾನು ಇಂಟರ್ನೆಟ್ನಲ್ಲಿ ನೋಡಿದ ಅತ್ಯಂತ ಮೋಹಕ ವಿಡಿಯೋ ಇದಾಗಿದೆ ಎಂದಿದ್ದಾರೆ ಒಬ್ಬರು. ಎಷ್ಟೊಂದು ಖುಷಿಯಿಂದ ಇದ್ದಾಳೆ ಅವಳ ಮುಖ ನೋಡಿ ಎಂದಿದ್ದಾರೆ ಇನ್ನೊಬ್ಬರು. ಈ ಎರಡೂ ಮಕ್ಕಳು ತುಂಬಾ ಮುದ್ದಾಗಿದ್ಧಾರೆ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:15 pm, Sat, 30 September 23