ಆಧುನಿಕ ಗೇಮಿಂಗ್‌ನ ಪಿತಾಮಹ (Father of Modern Gaming)ರಲ್ಲಿ ಒಬ್ಬರಾದ ಜೆರಾಲ್ಡ್ ಜೆರ್ರಿ ಲಾಸನ್ (Gerald Jerry Lawson) ಅವರ 82ನೇ ಜನ್ಮ ವಾರ್ಷಿಕೋತ್ಸವದ (Birth Anniversary) ಪ್ರಯುಕ್ತ ಇಂದು ಗೂಗಲ್ ಸೃಜನಾತ್ಮಕ ಮತ್ತು ಅನಿಮೇಷನ್ ಮೂಲಕ ಆಚರಿಸಿತು. ಪರಸ್ಪರ ಬದಲಾಯಿಸಬಹುದಾದ ಆಟದ ಕಾರ್ಟ್ರಿಡ್ಜ್‌ಗಳೊಂದಿಗೆ ಮೊದಲ ಹೋಮ್ ವಿಡಿಯೋ ಗೇಮಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ತಂಡವನ್ನು ಲಾಸನ್ ಮುನ್ನಡೆಸಿದ್ದರು. ಗೂಗಲ್‌ನ ಡಿಸೆಂಬರ್ 1 ರ ಡೂಡಲ್ (Google Doodle Today) ಮೂರು ಅಮೇರಿಕನ್ ಅತಿಥಿ ಕಲಾವಿದರು ಮತ್ತು ವಿನ್ಯಾಸಕರಾದ ಡೇವಿಯೊನ್ನೆ ಗುಡೆನ್, ಲಾರೆನ್ ಬ್ರೌನ್ ಮತ್ತು ಮೊಮೊ ಪಿಕ್ಸೆಲ್ ವಿನ್ಯಾಸಗೊಳಿಸಿದ ಆಟಗಳನ್ನು ಒಳಗೊಂಡಿದೆ.
1940 ರಲ್ಲಿ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಜನಿಸಿದ ಲಾಸನ್ ಚಿಕ್ಕ ವಯಸ್ಸಿನಿಂದಲೇ ಎಲೆಕ್ಟ್ರಾನಿಕ್ಸ್‌ನಲ್ಲಿ ಹೆಚ್ಚಿನ ಆಸಕ್ತಿಯನ್ಜು ಹೊಂದಿದ್ದರು. ಅದರಂತೆ ಪ್ರಯೋಗಗಳಲ್ಲಿ ತೊಡಗಿಕೊಂಡಿದ್ದರು. ತನ್ನ ನೆರೆಹೊರೆಯ ಸುತ್ತಲಿನ ದೂರದರ್ಶನಗಳನ್ನು ರಿಪೇರಿ ಮಾಡುವುದರ ಜೊತೆಗೆ ಮರುಬಳಕೆಯ ಭಾಗಗಳನ್ನು ಬಳಸಿಕೊಂಡು ತನ್ನದೇ ಆದ ರೇಡಿಯೊ ಕೇಂದ್ರವನ್ನು ರಚಿಸಿದರು.
ಇದನ್ನೂ ಓದಿ: Viral Video: ಮರಿಗಳನ್ನು ಮುಟ್ಟಿದಕ್ಕೆ ವ್ಯಕ್ತಿಯನ್ನು ಅಟ್ಟಾಡಿಸಿ ದಾಳಿ ಮಾಡಿದ ವಿಡಿಯೋ ಸಖತ್ ವೈರಲ್
ಪಾಲೊ ಆಲ್ಟೋದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ಲಾಸನ್ ನ್ಯೂಯಾರ್ಕ್‌ನ ಕ್ವೀನ್ಸ್ ಕಾಲೇಜು ಮತ್ತು ಸಿಟಿ ಕಾಲೇಜಿನಲ್ಲಿ ವ್ಯಾಸಾಂಗ ನಡೆಸಿದರು. ಲಾಸನ್ ಮೊದಲ ಬಾರಿಗೆ ಕ್ಯಾಲಿಫೋರ್ನಿಯಾಕ್ಕೆ ತೆರಳಿದಾಗ ನಗರವು ತಾಂತ್ರಿಕ ಅನ್ವೇಷಕರು ಮತ್ತು ಸೃಷ್ಟಿಕರ್ತರ ಕೇಂದ್ರವಾಗಿ ಮಾರ್ಪಡುವ ಮೂಲಕ ಸಿಲಿಕಾನ್ ವ್ಯಾಲಿಯಾಗಿತ್ತು.
ಫೇರ್ ಚೈಲ್ಡ್ ಸೆಮಿಕಂಡಕ್ಟರ್ನ ಎಂಜಿನಿಯರಿಂಗ್ ಕನ್ಸಲ್ಟೆಂಟ್ ಆಗಿ ಲಾಸನ್ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಒಂದು ವರ್ಷದ ನಂತರ ಫೇರ್ ಚೈಲ್ಡ್ನ ವೀಡಿಯೊ ಗೇಮ್ ವಿಭಾಗದ ಎಂಜಿನಿಯರಿಂಗ್ ಮತ್ತು ಮಾರ್ಕೆಟಿಂಗ್ ನಿರ್ದೇಶಕರಾಗಿ ಬಡ್ತಿ ಪಡೆದರು. ಅಲ್ಲದೆ ಫೇರ್ ಚೈಲ್ಡ್ ಚಾನೆಲ್ ಎಫ್ (ಎಫ್ ಎಂದರೆ ಮೋಜು) ವ್ಯವಸ್ಥೆಯ ಅಭಿವೃದ್ಧಿಯ ನೇತೃತ್ವ ವಹಿಸಿದ್ದರು.
“ಇದು ಮೊದಲ ಹೋಮ್ ವೀಡಿಯೊ ಗೇಮ್ ಸಿಸ್ಟಂ ಕನ್ಸೋಲ್ ಆಗಿದ್ದು, ಇದು ಪರಸ್ಪರ ಬದಲಾಯಿಸಬಹುದಾದ ಗೇಮ್ ಕಾರ್ಟ್ರಿಡ್ಜ್ಗಳು, 8-ವೇ ಡಿಜಿಟಲ್ ಜಾಯ್ಸ್ಟಿಕ್ ಮತ್ತು ಪೌಸ್ ಮೆನುವನ್ನು ಒಳಗೊಂಡಿದೆ. ಅಟಾರಿ, ಎಸ್ಎನ್ಇಎಸ್, ಡ್ರೀಮ್ಕಾಸ್ಟ್ ಮತ್ತು ಇತರೆ ಭವಿಷ್ಯದ ಗೇಮಿಂಗ್ ವ್ಯವಸ್ಥೆಗಳಿಗೆ ಚಾನೆಲ್ ಎಫ್ ದಾರಿ ಮಾಡಿಕೊಟ್ಟಿದೆ ಎಂದು ಗೂಗಲ್ ಹೇಳಿದೆ.
ಇದನ್ನೂ ಓದಿ: Video Viral: ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದ ವ್ಯಕ್ತಿ
ಲಾಸನ್ ಫೇರ್ ಚೈಲ್ಡ್ ತೊರೆದ ನಂತರ ಅವರು 1980 ರಲ್ಲಿ ತಮ್ಮದೇ ಆದ ಕಂಪನಿ ವೀಡಿಯೊಸಾಫ್ಟ್ ಅನ್ನು ಪ್ರಾರಂಭಿಸಿದರು. ಇದು ಮೊದಲ ಕಪ್ಪು ಮಾಲೀಕತ್ವದ ವೀಡಿಯೊ ಗೇಮ್ ಅಭಿವೃದ್ಧಿ ಕಂಪನಿಗಳಲ್ಲಿ ಒಂದಾಗಿತ್ತು. ಕಂಪನಿಯು ಅಟಾರಿ 2600 ಗಾಗಿ ಸಾಫ್ಟ್ವೇರ್ ಅನ್ನು ರಚಿಸಿತು. ಅದು ಲಾಸನ್ ಮತ್ತು ಅವರ ತಂಡವು ರಚಿಸಿದ ಕಾರ್ಟ್ರಿಡ್ಜ್ ಅನ್ನು ಇನ್ನಷ್ಟು ಜನಪ್ರಿಯಗೊಳಿಸಿತು.
“ಇದನ್ನು ಲಾಸನ್ ಅವರು ಐದು ವರ್ಷಗಳ ನಂತರ ಮುಚ್ಚಿದ್ದರೂ ಉದ್ಯಮದಲ್ಲಿ ಪ್ರವರ್ತಕರಾಗಿ ತಮ್ಮನ್ನು ತಾವು ಗಟ್ಟಿಗೊಳಿಸಿಕೊಂಡಿದ್ದರು ಮತ್ತು ಅವರ ವೃತ್ತಿಜೀವನದುದ್ದಕ್ಕೂ ಅನೇಕ ಎಂಜಿನಿಯರಿಂಗ್ ಮತ್ತು ವೀಡಿಯೊ ಗೇಮ್ ಕಂಪನಿಗಳೊಂದಿಗೆ ಸಮಾಲೋಚಿಸುವುದನ್ನು ಮುಂದುವರಿಸಿದರು” ಎಂದು ಟೆಕ್ ದೈತ್ಯ ಗೂಗಲ್ ಹೇಳಿದೆ. 2011 ರಲ್ಲಿ ಇಂಟರ್ನ್ಯಾಷನಲ್ ಗೇಮ್ ಡೆವಲಪರ್ಸ್ ಅಸೋಸಿಯೇಷನ್ನಿಂದ ಗೇಮಿಂಗ್ಗೆ ನೀಡಿದ ಕೊಡುಗೆಗಳಿಗಾಗಿ ಲಾಸನ್ ಅವರನ್ನು ಉದ್ಯಮದ ಟ್ರೇಲ್ಬ್ಲಜರ್ ಎಂದು ಗುರುತಿಸಲಾಯಿತು.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:47 am, Thu, 1 December 22