ಲೈಂಗಿಕ ಸಂಬಂಧದ ಆರೋಪ: ಸೆಕ್ಸ್ ಮಾಡಲು ಸಮಯವೇ ಇಲ್ಲ ಎಂದ ಟೆಸ್ಲಾ ಸಿಇಒ ಎಲಾನ್ ಮಸ್ಕ್
ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಅವರ ಪತ್ನಿ ನಿಕೋಲ್ ಶಾನಹಾನ್ ಅವರೊಂದಿಗಿನ ವಿವಾಹೇತರ ಸಂಬಂಧದ ಕುರಿತು ವಾಲ್ ಸ್ಟ್ರೀಟ್ ಜರ್ನಲ್ ವರದಿಯನ್ನು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ನಿರಾಕರಿಸಿದ್ದಾರೆ. ಹಲವು ವರ್ಷಗಳಿಂದ ಲೈಂಗಿಕತೆಯನ್ನು ಹೊಂದಿಲ್ಲ ಎಂದೂ ಹೇಳಿದ್ದಾರೆ.
ಜಗತ್ತಿನ ಶ್ರೀಮಂತ ವ್ಯಕ್ತಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ವಿರುದ್ಧ ಲೈಂಗಿಕ ಸಂಬಂಧದ ಕುರಿತಾದ ವರದಿ ಬಿತ್ತರವಾಗಿತ್ತು. ಈ ವರದಿಯನ್ನು ಸ್ವತಃ ಎಲಾನ್ ಮಸ್ಕ್ ಅವರೇ ತಳ್ಳಿಹಾಕಿದ್ದು, ಅಂತಹದ್ದಕ್ಕೆಲ್ಲ ಸಮಯವೇ ಇಲ್ಲ ಎಂದು ಹೇಳಿದ್ದಾರೆ. ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ (Sergey Brin) ಅವರ ಪತ್ನಿ ನಿಕೋಲ್ ಶಾನಹಾನ್ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ವರದಿಯನ್ನು ನಿರಾಕರಿಸಿದ ಎಲಾನ್ ಮಸ್ಕ್, ನಾನು ನಿಕೋಲ್ ಅವರನ್ನು ಮೂರು ವರ್ಷಗಳಲ್ಲಿ ಎರಡು ಬಾರಿ ನೋಡಿದ್ದೇನೆ. ಅದು ಕೂಡ ಸಾರ್ವಜನಿಕ ಪ್ರದೇಶದಲ್ಲಿ ನೋಡಿದ್ದಾಗಿ ಹೇಳಿಕೊಂಡಿದ್ದಾರೆ.
ನಿಕೋಲ್ ಶಾನಹಾನ್ ಮತ್ತು ಸೆರ್ಗೆ ಬ್ರಿನ್ ಅವರು ಮದುವೆಯಾಗಿ ಮೂರು ವರ್ಷಗಳು ಕಳೆದಿವೆ. ಆದರೆ ಜೂನ್ ತಿಂಗಳಲ್ಲಿ ಬ್ರಿನ್ ಅವರು ವಿಚ್ಛೇದನಕ್ಕೆ ಯೋಜಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಇದಕ್ಕೆ ಕಾರಣ ಮಸ್ಕ್ ಮತ್ತು ಶಾನಹಾನ್ ನಡುವಿನ ಸಂಬಂಧದ ಗಾಸಿಪ್ ಸುದ್ದಿ. ಎಲಾನ್ ಮಸ್ಕ್ ಅವರು ನಿಕೋಲ್ ಶಾನಹಾನ್ ವಿವಾಹೇತರ ಲೈಂಗಿಕ ಸಂಬಂಧದಲ್ಲಿ ತೊಡಗಿದ್ದರು ಎಂದು WSJ ಸುದ್ದಿಸಂಸ್ಥೆ ಮೂಲವೊಂದನ್ನು ಉಲ್ಲೇಖಿಸಿ ವರದಿ ಮಾಡಿದೆ. ಈ ಬೆಳವಣಿಗೆಯು ಬ್ರಿನ್ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಪ್ರೇರೇಪಿಸಿತು. ಅದಾಗ್ಯೂ, ಈ ವರ್ಷದ ಆರಂಭದಲ್ಲಿ ನಡೆದ ಪಾರ್ಟಿಯಲ್ಲಿ ಮಸ್ಕ್ ತನ್ನ ದೀರ್ಘಕಾಲದ ಸ್ನೇಹಿತ ಬ್ರಿನ್‌ಗೆ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.
ಸಂಬಂಧದ ಬಗ್ಗೆ ಟ್ವೀಟ್ ಮಾಡಿದ ಎಲಾನ್ ಮಸ್ಕ್, ಮೂರು ವರ್ಷಗಳಲ್ಲಿ ನಿಕೋಲ್ ಶಾನಹಾನ್ ಅವರನ್ನು ಎರಡು ಬಾರಿ ಮಾತ್ರ ನೋಡಿದ್ದೇನೆ. ಅದು ಕೂಡ ಸುತ್ತಮುತ್ತಲಿನ ಅನೇಕ ಜನರೊಂದಿಗೆ ಎಂದು ಬರೆದುಕೊಂಡಿದ್ದಾರೆ. “ಸೆರ್ಗೆ ಮತ್ತು ನಾನು ಸ್ನೇಹಿತರು ಮತ್ತು ಕಳೆದ ರಾತ್ರಿ ಒಟ್ಟಿಗೆ ಪಾರ್ಟಿಯಲ್ಲಿದ್ದೆವು. ನಾನು ನಿಕೋಲ್ ಅವರನ್ನು ಮೂರು ವರ್ಷಗಳಲ್ಲಿ ಎರಡು ಬಾರಿ ಮಾತ್ರ ನೋಡಿದ್ದೇನೆ, ಎರಡೂ ಬಾರಿ ಕೂಡ ಸುತ್ತಮುತ್ತಲಿನ ಇತರ ಜನರೊಂದಿಗೆ. ರೋಮ್ಯಾಂಟಿಕ್ ಏನೂ ಇಲ್ಲ” ಎಂದು ಮಸ್ಕ್ ಹೇಳಿದ್ದಾರೆ. ಅಲ್ಲದೆ ಸರಣಿ ಟ್ವೀಟ್ಗಳಲ್ಲಿ ಅವರು “ನಾನು ಹಲವು ವರ್ಷಗಳಿಂದ ಲೈಂಗಿಕತೆಯನ್ನು ಹೊಂದಿಲ್ಲ” ಎಂದಿದ್ದಾರೆ.
Published On - 2:00 pm, Tue, 26 July 22